ಬೆಳಗಾವಿ ( BELGAVI ) ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ( BAGALOKOTE ) ಜಿಲ್ಲೆಯ ಬೆಳಗಲ್ ಗ್ರಾಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ( SIDDARAMAIAH ) ಪ್ರತಿಕ್ರಿಯೆ ನೀಡಿದ್ದಾರೆ.
ಇದೇನು ದೊಡ್ಡ ಸುದ್ದಿ ಅಲ್ಲ. ಮಹಾರಾಷ್ಟ್ರದಲ್ಲಿ ಬಿಜೆಪಿ ( BJP ) ಸರ್ಕಾರ ಇದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ, ದೆಹಲಿಯಲ್ಲಿ ಬಿಜೆಪಿ ಸರ್ಕಾರ ಇದೆ. ರಾಜಕಾರಣಕೋಸ್ಕರ ಮಹಾರಾಷ್ಟ್ರದವರು ಯಾವಾಗಲೂ ಕ್ಯಾತೆ ಮಾಡ್ತಾರೆ. 1962 ರಲ್ಲೇ ಇದು ಇತ್ಯರ್ಥ ಆಗಿದೆ. ಬೆಳಗಾವಿ ಕರ್ನಾಟಕದ್ದೂ. ಒಂದಿಂಚು ಕೂಡ ಜಾಗ ಬಿಟ್ಟು ಕೊಡಲ್ಲ. ಇದನ್ನು ಓದಿ : – ಶಾಲಾ ಬಾಲಕಿಯ ಮೇಲೆ ಆ್ಯಸಿಡ್ ದಾಳಿ – ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನೆಲ ಜಲ ಭಾಷೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಅಮಿತ್ ಶಾ ಹೇಳಿದ್ರು ಇಲ್ಲ, ನರೇಂದ್ರ ಮೋದಿ ಹೇಳಿದ್ರು ಇಲ್ಲ ಎಂದು ಹೇಳಿದ್ದಾರೆ. ಸರ್ಕಾರ ವೀಕ್ ಆಗಬಾರದು. ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮಹಾರಾಷ್ಟ್ರ ( MAHARASTRA ) ದವರ ಪುಂಡಾಟಿಕೆಗೆಲ್ಲ ಹೆದರಿಕೊಳ್ಳೊಕಾಗುತ್ತಾ..? ಬೊಮ್ಮಾಯಿ ವೀಕ್ ಲೀಡರ್ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನು ಓದಿ : – ಹುಬ್ಳಳ್ಳಿಯಲ್ಲಿ ಬಹು ನಿರೀಕ್ಷಿತ ನಮ್ಮ ಕ್ಲಿನಿಕ್ ಗಳಿಗೆ ಸಿಎಂ ಬೊಮ್ಮಾಯಿ ಚಾಲನೆ