ದೆಹಲಿ ಪ್ರವಾಸದಲ್ಲಿರುವ ಸಿಎಂ ಬೊಮ್ಮಾಯಿ ಇಂದು ಹೈಕಮಾಂಡ್ ನಾಯಕರನ್ನು ಭೇಟಿ ಆಗಲಿದ್ದಾರೆ. ಇಂದು ಸಿಎಂ ಅವರು ಅಮಿತ್ ಶಾ ಹಾಗೂ ನಡ್ಡಾ ಭೇಟಿಯಾಗಿ ಕೆಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಭೇಟಿ ವೇಳೆ ಹೈಕಮಾಂಡ್ ನಿಂದ ಸ್ಪಷ್ಟ ಸಂದೇಶ ರವಾನಿಸುವ ಸಾಧ್ಯತೆ ಇದೆ. ಹೈಕಮಾಂಡ್ ಸೂಚನೆ ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೆ ಕುತೂಹಲ ಹುಟ್ಟಿಕೊಂಡಿದ್ದು, ಆ ಸಂದೇಶದಿಂದ ಯಾವ ಬದಲಾವಣೆ..? ಯಾರಿಗೆ ಶಾಕ್.. ಯಾರಿಗೆ ಲಕ್ ಎಂಬುದು ತಿಳಿದುಬರಲಿದೆ. ಸದ್ಯ ದೆಹಲಿಯಲ್ಲಿ ಸಿಎಂ ಇದ್ದರೆ, ಇತ್ತ ಸಂಪುಟ ಸಭೆ ಸಂಕಷ್ಟ ಎದುರಾಗಿದೆ. ಸತತ 3ನೇ ಬಾರಿಗೆ ಸಂಪುಟ ಸಭೆ ಮುಂದೂಡಿಕೆಯಾಗಿದೆ. ಇದನ್ನೂ ಓದಿ : – ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ
ಈ ಹಿಂದೆ ಮೇ 5ರಿಂದ ಮೇ 11ಕ್ಕೆ ಮುಂದೂಅಡಲಾಯ್ತು. ಆದರೆ ಇಂದು ಬೆಳಗ್ಗೆ 11ಕ್ಕೆ ಇದ್ದ ಸಭೆ ಸಂಜೆಗೆ ಮುಂದೂಡಲಾಯ್ತು. ಇದೀಗ ಇಂದು ಸಂಜೆ ನಿಗದಿ ಆಗಿದ್ದ ಕ್ಯಾಬಿನೆಟ್ ನಾಳೆಗೆ ಮುಂದೂಡಿಕೆಯಾಗಿದೆ. ನಾಳೆ ಮಧ್ಯಾಹ್ನ 12ಕ್ಕೆ ಸಂಪುಟ ಸಭೆ ನಿಗದಿಯಾಗಿದೆ.
ಇದನ್ನೂ ಓದಿ : – ಕೊನೆಗೂ ಘೋಷಣೆಯಾಯ್ತು ಬಿಬಿಎಂಪಿ ಎಲೆಕ್ಷನ್ – ಸುಪ್ರೀಂ ಕೋರ್ಟ್ ಮುಹೂರ್ತ ಫಿಕ್ಸ್ !