ಒಕ್ಕಲಿಗ (Okkaliga) ರ ಮೀಸಲಾತಿ (Reservation) ವಿಚಾರಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್. ಅಶೋಕ್ (R.Ashok) ಪ್ರತಿಕ್ರಿಯೆ ನೀಡಿದ್ದಾರೆ. ಒಕ್ಕಲಿಗ ಸಮುದಾಯ ನನಗೆ ಮಾಹಿತಿ ಕೊಟ್ಟಿದೆ. ಸಮುದಾಯಕ್ಕೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ . ನಾನು ಸಿಎಂ ಜೊತೆ ಮಾತನಾಡಿದ್ದೇನೆ.
ನಮ್ಮ ಸ್ವಾಮೀಜಿ ದೂರವಾಣಿ ಕರೆ ಮಾಡಿದ್ದಾರೆ. ಒಬಿಸಿ ಆಯೋಗಕ್ಕೆ ಮೀಸಲಾತಿ ಕರಡು ಕಳಿಸಿ ಅಂತಿದ್ದಾರೆ. ಹೆಗ್ಡೆಯವರಿಗೆ ಸಿಎಂ ಪತ್ರ ಬರೆದಿದ್ದಾರೆ. 10 % ನಲ್ಲಿ 4% ಗ್ರಾಮೀಣ ಪ್ರದೇಶ ಒಕ್ಕಲಿಗರಿಗೆ ಮೀಸಲು ಇದೆ. ನಗರಪ್ರದೇಶದ ಒಕ್ಕಲಿಗರಿಗೆ ಇಲ್ಲ. ಇವತ್ತು ನಾನು ಸಭೆ (Meeting) ಯನ್ನ ಮಾಡುತ್ತೇನೆ. ನಮ್ಮ ಸಮುದಾಯದ ನಾಯಕರ ಜೊತೆ ಮಾತುಕತೆ ನಡೆಸುತ್ತೇನೆ. ನಾವು ಸಭೆ ನಡೆಸಿ ಸಿಎಂ ಮೇಲೆ ಒತ್ತಡ ತರ್ತೇವೆ. ನಮ್ಮ ಸಮುದಾಯಕ್ಕೂ ಮೀಸಲಾತಿ ನೀಡಬೇಕೆಂದು ಒತ್ತಡ ತರ್ತೇವೆ. ನಮಗೂ ಕೂಡ ನ್ಯಾಯ ಸಿಗಬೇಕು. 26ರಂದು ಸಮುದಾಯ ಗಡುವು ಕೊಟ್ಟಿದೆ. ಅಷ್ಟರೊಳಗೆ ಆಯೋಗದ ವರದಿ ಪಡೆದು ನ್ಯಾಯ ನೀಡಬೇಕು ಎಂದು ಆರ್.ಅಶೋಕ್ ತಿಳಿಸಿದ್ದಾರೆ.
ಇದನ್ನು ಓದಿ :- ಜನಾರ್ದನ ರೆಡ್ಡಿ ಜೊತೆಗಿನ ಸ್ನೇಹ ಯಾವತ್ತೂ ಶಾಶ್ವತ – ಸಚಿವ ಶ್ರೀರಾಮುಲು