ಡೋಲೋ 650 (DOLO-650) ಮಾತ್ರೆ ತಯಾರಿಕಾ ಸಂಸ್ಥೆ ಮೈಕ್ರೋ ಲ್ಯಾಬ್ಸ್ (Micro labs) ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮೈಕ್ರೋ ಲ್ಯಾಬ್ಸ್ ನೂರಾರು ಕೋಟಿಯ ಡೋಲೋ -650 (DOLO-650) ಮಾತ್ರೆ ಮಾರಾಟ ಮಾಡುವ ಮೂಲಕ ಅತೀ ಹೆಚ್ಚು ವ್ಯಾಪಾರ ವಹಿವಾಟು ನಡೆಸಿತ್ತು.
ಆ ವೇಳೆ ತೆರಿಗೆ ವಂಚಿಸಿದ್ದ ಆರೋಪ ಹಿನ್ನೆಲೆಯಲ್ಲಿ ರೇಸ್ ಕೋರ್ಸ್ ರಸ್ತೆಯಲ್ಲಿರುವ ಮೈಕ್ರೋ ಲ್ಯಾಬ್ಸ್ ಕೇಂದ್ರ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಿಎಂಡಿ ದಿಲೀಪ್ ಸುರಾನಾ (Dilip Surana), ಡೈರೆಕ್ಟರ್ ಆನಂದ್ ಸುರಾನ (Anand) ನಿವಾಸದ ಮೇಲೂ ದಾಳಿ ನಡೆಸಲಾಗಿದೆ. ಇದನ್ನೂ ಓದಿ : – ಮುಸ್ಲಿಂ ಸಮುದಾಯಕ್ಕೆ ಉಪರಾಷ್ಟ್ರಪತಿ ಪಟ್ಟ? ರೇಸ್ ನಲ್ಲಿ ನಖ್ವಿ, ಆರಿಫ್ ಮೊಹಮ್ಮದ್ ಖಾನ್, ನಜ್ಮಾ ಹೆಪ್ತುಲ್ಲಾ !
ಬೆಂಗಳೂರಿನಲ್ಲಿ ಮೈಕ್ರೋಲ್ಯಾಬ್ಸ್ ಕೇಂದ್ರ ಕಚೇರಿಯಿದ್ದು, ಬೆಂಗಳೂರಿನ ಕೇಂದ್ರ ಕಚೇರಿ ಮೇಲೂ ಐಟಿ ರೇಡ್ ಮಾಡಲಾಗಿದೆ. ತಮಿಳುನಾಡು, ಗೋವಾ, ಪಂಜಾಬ್, ಮುಂಬೈ ದೆಹಲಿ, ಸಿಕ್ಕಿಂ ಸೇರಿದಂತೆ ದೇಶದ 40 ಕಡೆಗಳಲ್ಲಿ ರೇಡ್ ನಡೆದಿದೆ. ಐಟಿ ತೆರಿಗೆ ವಂಚನೆ ಮಾಹಿತಿ ಮೇಲೆ ರೇಡ್ ಮಾಡಿದ್ಧಾರೆ. ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ. ಬೆಳಗ್ಗೆ 7 ಗಂಟೆಯಿಂದಲೇ 25ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : – ಬ್ರಿಟನ್ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ರಿಷಿ ಸುನಾಕ್