ಸ್ವತಂತ್ರ ಬಂದ ನಂತರ ನಗರ ಪ್ರದೇಶದಲ್ಲಿ ಕೇವಲ 14 ಪ್ರತಿಶತ ಜನ ನಗರದಲ್ಲಿ ವಾಸ ಮಾಡ್ತಿದ್ದರು ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj bommai) ಹೇಳಿದ್ದಾರೆ. ಹುಬ್ಬಳ್ಳಿ (Hubballi) ಯಲ್ಲಿ ಮಾತನಾಡಿದ ಅವರು ಈಗ ನಗರ ಪ್ರದೇಶದಲ್ಲಿ ಜನರ ವಾಸ ಹೆಚ್ಚಾಗಿದೆ.
ಇದರಿಂದ ನಗರ ಅಭಿವೃದ್ಧಿ ಅವಶ್ಯಕತೆ ಇದೆ. ಇದರಿಂದ ಪ್ರಧಾನ ಮಂತ್ರಿ ಇದಕ್ಕೆ ಹೆಚ್ಚು ಸ್ಮಾರ್ಟ್ ಸಿಟಿ (Smart city) ಯೋಜನೆಗೆ ಪ್ರಾಧಾನ್ಯತೆ ನೀಡಲಾಗಿದೆ. ಹೀಗಾಗಿ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ತರಲಾಗಿದೆ. ಇದರಲ್ಲಿ ಹುಬ್ಬಳ್ಳಿ ಧಾರವಾಡ (Dharwad) ಕೂಡಾ ಒಂದು, ಹುಬ್ಬಳ್ಳಿ ಧಾರವಾಡಕ್ಕೆ ಸ್ಮಾರ್ಟ್ ಸಿಟಿಗೆ ಸಾಕಷ್ಟು ಹಣ ನೀಡಲಾಗಿದೆ. ಇವತ್ತು 31 ಕೋಟಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಎರಡು ವರ್ಷದ ಹಿಂದೆ ಮುಗಿಬೇಕಿತ್ತು. ಅದರ ರೂಪು ರೇಷೆ ತಯಾರು ಮಾಡಲು ಗೊಂದಲ ಇತ್ತು, ಈ ಕಾರಣದಿಂದ ಎರಡು ವರ್ಷ ಹಿಂದೆ ಉಳಿದಿದೆ. ಮುಂದಿನ ಒಂದು ವರ್ಷಗಳಲ್ಲಿ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಬೇಕು. ಮೂಲಭೂತ ಸೌಕರ್ಯಗಳನ್ನ ಪೂರ್ಣ ಗೊಳಿಸಬೇಕು .ಎಲ್ಲವೂ ಪೂರ್ಣ ಪ್ರಮಾಣದಲ್ಲಿ ಯೋಜನಾಬದ್ಧ ವಾಗಿ ಆಗಬೇಕು. ಈ ಯೋಜನೆಯ ಅವಕಾಶ ಪದೇ ಪದೇ ಬರಲ್ಲ, ಸರಿಯಾಗಿ ಬಳಸಿಕೊಳ್ಳಬೇಕು.ಗುಣಮಟ್ಟ ಕಾಪಾಡದ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು. ಕಾಲ ಮಿತಿಯೊಳಗೆ, ಗುಣ್ಣಮಟ್ಟದ ಕಾಮಗಾರಿ ಪೂರ್ಣಗೊಳಿಸುವಂತೆ ವೇದಿಕೆಯ ಮೇಲೆಯೆ ಸ್ಮಾರ್ಟ್ ಸಿಟಿ ಎಂ ಡಿ ಗೆ ಸಿಎಂ ಖಡಕ್ ಆಗಿ ಆದೇಶಿಸಿದ್ದಾರೆ. ಇದನ್ನೂ ಓದಿ : – ಬಳ್ಳಾರಿಯಲ್ಲಿ ನೂತನ ಜಿಲ್ಲಾ ನ್ಯಾಯಾಲಯ ಲೋಕಾರ್ಪಣೆಗೊಳಿಸಿದ ಹೈ ಕೋರ್ಟ್ ಮುಖ್ಯ ನ್ಯಾಯಮೂರ್ತಿ
ಇದೇ ವೇಳೆ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ (Prasad abbayya) ಕ್ಷೇತ್ರದ ಅಭಿವೃದ್ಧಿಗೆ 25 ಕೋಟಿ ಕೊಟ್ಟಿದ್ದೀನಿ, ಸಿದ್ದರಾಮಯ್ಯ (Siddaramaiah) ಇದ್ದಾಗ ಕೇವಲ ಮನವಿ ಮಾತ್ರ ಕೊಟ್ಟಿದ್ರು. ನಮ್ಮ ಸರ್ಕಾರ ಬಂದ ಮೇಲೆ ಸಾಕಷ್ಟು ಅನುದಾನ ಕೊಟ್ಟಿದ್ದೇನೆ. ಪ್ರತಿಯೊಂದು ಕ್ಷೇತ್ರದ ಸಮರ್ಪಕ ಅಭಿವೃದ್ಧಿಗೆ ಒತ್ತು ಕೊಡಲಾಗಿದೆ. ರೈಲ್ವೆ ಇಲಾಖೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ ಹುಬ್ಬಳ್ಳಿ ಅಂಕೋಲಾ ರೈಲು ಅತಿ ಶೀಘ್ರವಾಗಿ ಆರಂಭಿಸುವ ಚಿಂತನೆ ಇದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : – ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ಮುಖಂಡ ಲಕ್ಷ್ಮಣ್ ಗಂಭೀರ ಆರೋಪ