ಜೂನ್ 3ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಎಸ್ ಯಡಿಯೂರಪ್ಪ (B S YADIYURAPPA) ನವರ ಪುತ್ರ ಬಿ ವೈ ವಿಜಯೇಂದ್ರ (VIJAYENDRA) ಅವರಿಗೆ ಘೋಷಣೆಯಾದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಹಜವಾಗಿ ಆಘಾತ ಮತ್ತು ಬೇಸರ ತಂದಿದೆ.
ಈ ಸಂದರ್ಭದಲ್ಲಿ ಉದ್ವೇಗಕ್ಕೆ ಒಳಗಾಗಬೇಡಿ, ಪಕ್ಷದ ತೀರ್ಮಾನ ಗೌರವಿಸಿ ಎಂದು ಅಭಿಮಾನಿಗಳಿಗೆ ಬಿ ವೈ ವಿಜಯೇಂದ್ರ ಮನವಿ ಮಾಡಿಕೊಂಡಿದ್ದಾರೆ. ವಿಜಯೇಂದ್ರಗೆ ಟಿಕೆಟ್ ಕೈತಪ್ಪಿದ್ದರ ಹಿಂದೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ (SANTHOSH) ಕೈವಾಡವಿದೆ ಎಂಬ ಮಾತು ದಟ್ಟವಾಗಿ ಕೇಳಿಬರುತ್ತಿದೆ.
ಈ ಮಧ್ಯೆ ಕಾಂಗ್ರೆಸ್ ಸಹಜವಾಗಿ ಬಿ ಎಸ್ ಯಡಿಯೂರಪ್ಪನವರನ್ನು ಕುಟುಕಿದೆ. ಬಿಎಸ್ ವೈ ಸಿಎಂ ಕುರ್ಚಿಯಿಂದ ಇಳಿಯುವ ಸಂದರ್ಭದಲ್ಲಿ ಕಣ್ಣೀರು, ವಿಜಯೇಂದ್ರಗೆ ಟಿಕೆಟ್ ನಿರಾಕರಿಸುವಾಗ ರಕ್ತಕಣ್ಣೀರು, ಇದು ಬಿಜೆಪಿ ಬಿಎಸ್ ವೈಗೆ ನೀಡುತ್ತಿರುವ ಋಣಸಂದಾಯ ಗಿಫ್ಟ್. ಬಿಜೆಪಿಯಲ್ಲಿನ ಸಂತೋಷ ಕೂಟ ಯಶಸ್ವಿಯಾಗಿದೆ. ಬಿಎಸ್ ವೈ ಕುಟುಂಬವನ್ನೇ ವನವಾಸಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದೆ. ಬಿಜೆಪಿ v/s ಬಿಜೆಪಿ ಯುದ್ಧ ಕಣ ರಂಗೇರಲಿದೆ ಎಂದು ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಕಾಂಗ್ರೆಸ್ ವ್ಯಂಗ್ಯವಾಡಿದೆ. ಇದನ್ನೂ ಓದಿ :- ಮಂಗಳೂರಿನ ಮಳಲಿಯಲ್ಲಿರುವುದು ದರ್ಗಾವೋ, ದೇಗುಲವೋ?