ಎಲ್ಲಾ ಕಡೆ ನನ್ನ ಬಗ್ಗೆ ಜನ ಬಹಳ ಪ್ರೀತಿ ಇಟ್ಟು ಕೊಂಡಿದ್ದಾರೆ . ಶಿಕ್ಷಕರು ತಾವೇ ಸ್ಪರ್ಧೆ ಮಾಡಿದ್ದೇವೆ ಅಂತ ಓಡಾಡ್ತಿದ್ದಾರೆ ಎಂದು ಬಿಜೆಪಿ (Bjp) ಅಭ್ಯರ್ಥಿ ಬಸವರಾಜ ಹೊರಟ್ಟಿ (Basavaraj horatti) ಹೇಳಿದ್ದಾರೆ .
ಹಾವೇರಿಯಲ್ಲಿ (Haveri) ಮಾತನಾಡಿದ ಅವರು ಕಾಂಗ್ರೆಸ್ (Congress ) ನವರು ಅಲ್ಲಲ್ಲಿ ಒಂದಿಬ್ರನ ಕರೆದುಕೊಂಡು ಓಡಾಡ್ತಿದ್ದಾರೆ ಅಷ್ಟೆ .ಈಗ ನನ್ನದು ಪಕ್ಷ ಅಷ್ಟೆ ಬದಲಾಗಿದೆ. ಕಾಂಗ್ರೆಸ್ ನವರು ನನ್ನ ಸಿದ್ದಾಂತದ ಬಗ್ಗೆ ಮಾತಾಡುವ ಮೊದಲು ಅವರ ಸಿದ್ದಾಂತ ಮೊದಲು ಹೇಳಲಿ ಎಂದು ಹೊರಟ್ಟಿ ಪ್ರಶ್ನಿಸಿದ್ದಾರೆ .ಈಗ ಮೌಲ್ಯಾಧಾರಿತ ರಾಜಕಾರಣ ಬಿಟ್ಟು ಬಿಡಿ. ಸಲೀಂ ಅಹ್ಮದ್ (Salim ahamed ) ಚುನಾವಣೆ (Election ) ಹೇಗೆ ಗೆದ್ದು ಬಂದಿದ್ದಾರೆ ಕೇಳಿ ನೋಡಿ . ಈಗ ಯಾರೂ ಸಿದ್ದಾಂತ ಮತ್ತು ತತ್ವದ ಬಗ್ಗೆ ಮಾತಾಡಬಾರದು .ಆರು ವರ್ಷಕ್ಕೆ ಎಷ್ಟು ಕೆಲಸ ಮಾಡಿದಿನಿ ಅಂತ ಪುಸ್ತಕ ಮಾಡಿದಿನಿ .ಇಲ್ಲಿ ಶಿಕ್ಷಕರು ಕಾಂಗ್ರೆಸ್ ಗೆ ಓಟ್ ಹಾಕಲ್ಲ .ಕಾಂಗ್ರೆಸ್ ನವರು ಎಂದೂ ಇಲ್ಲಿ ಶಿಕ್ಷರರ ಪರ ಕೆಲಸ ಮಾಡಲ್ಲ .ಇಷ್ಟು ದಿನಗಳಲ್ಲಿ ಒಂದ್ ಸಲ ನೂ ಕಾಂಗ್ರೆಸ್ ನವರು ಗೆದ್ದು ಬಂದಿಲ್ಲ . ಇದನ್ನೂ ಓದಿ : – UPSC Result 2021- ಯುಪಿಎಸ್ಸಿ ಅಂತಿಮ ಫಲಿತಾಂಶ ಪ್ರಕಟ- ಶ್ರುತಿ ಶರ್ಮಾ ಟಾಪರ್
ಸಲೀಂ ಗೆ ಶಿಕ್ಷಕರ ಬಗ್ಗೆ ಏನು ಗೊತ್ತಿದೆ? ಹೊರಟ್ಟಿ ಶಿಕ್ಷಕರನ್ನು ಹೆದರಿಸ್ತಾರೆ,ಅಡ್ಜಸ್ಟ್ ಮೆಂಟ್ ಮಾಡ್ತಾರೆ ಅಂತಾರೆ. ಆದರೆ ಶಿಕ್ಷಕರನ್ನು ಹೆದರಿಸೋಕೆ ಆಗುತ್ತಾ? ಶಿಕ್ಷಣದ ಬಗ್ಗೆ ಕಾಂಗ್ರೆಸ್ ಗೆ (Congress) ನಯಾಪೈಸೆ ಗೊತ್ತಿಲ್ಲ .ನಾನು ಸಾಕಷ್ಟು ಕೆಲಸ ಮಾಡಿದ್ದೇನೆ . ಕಾಂಗ್ರೆಸ್ ನವರ ಟೀಕೆ ಬಹಳ ಗಂಭೀರವಾಗಿ ತಗೊಳೋಲ್ಲ ಕೈಲಾದವನು ಮೈ ಪರಿಚಿಕೊಂಡ ಅನ್ನೋತರ ಇವರು . ಕಾಂಗ್ರೆಸ್ ಅಭ್ಯರ್ಥಿಗೂ ನನಗೆ 70% ಮತಗಳ ಅಂತರ ಇರುತ್ತೆ ನೋಡ್ತಾ ಇರಿ ಎಂದು ಬಸವರಾಜ ಹೊರಟ್ಟಿ ತಿಳಿಸಿದ್ರು. ಇದನ್ನೂ ಓದಿ : – ಕೋಳಿ ಮಾಂಸ ಮುಟ್ಟಂಗಿಲ್ಲ! ರಾಜ್ಯದಲ್ಲಿ ಕೆಜಿಗೆ ₹300ರ ಗಡಿ ತಲುಪಿದ ಚಿಕನ್ ದರ