ಚಾರ್ಲಿ ಸಿನಿಮಾಗೆ (Charlie movie) ಜಿಎಸ್ಟಿ (Gst) ವಿನಾಯ್ತಿ ಹಿನ್ನೆಲೆಯಲ್ಲಿ , ಬೇರೆ ಚಿತ್ರಗಳಿಗೂ ತೆರಿಗೆ ವಿನಾಯ್ತಿ ಮಾಡಲು ಸಿಎಂಗೆ ಒತ್ತಾಯ ಯಾರೆಲ್ಲ ಮನವಿ ಕೊಡ್ತಾರೋ ಅವುಗಳ ಬಗ್ಗೆ ಪರಿಶೀಲನೆ ಮಾಡ್ತೇವೆ.
ಪಠ್ಯ ಪರಿಷ್ಕರಣೆ ವಿಚಾರವನ್ನು ನಾವು ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ ಎಂದು ಸಿಎಂ ಬೊಮ್ಮಾಯಿ (bommai) ತಿಳಿಸಿದ್ದಾರೆ. ಬೆಂಗಳೂರಿನಲ್ಲಿ(Bengaluru) ಮಾತನಾಡಿದ ಅವರು ಈಗಾಗಲೇ ಪಠ್ಯ ಪರಿಷ್ಕರಣೆ ಪಬ್ಲಿಕ್ ಡೊಮೇನ್ ನಲ್ಲಿದೆ ಲೋಪ ಇದ್ರೆ ತಿಳಿಸಬಹುದು ಎಂದು ಹೇಳಿದರು.
ಅಗ್ನಿಪಥ ಪ್ರತಿಭಟನೆ ವಿಚಾರ
ಕಾಂಗ್ರೆಸ್ ಬೆಂಕಿಗೆ ತುಪ್ಪ ಸುರೀತಿದೆ. ಅಗ್ನಿಪಥ್ (Agnipath) ಯೋಜನೆ ಮೂಲಕ ಸಶಕ್ತ ಯುವ ಶಕ್ತಿ ರೂಪಿಸಲಾಗುತ್ತೆ. ಈಗಾಗಲೇ ಸೇನಾ ಪರೀಕ್ಷೆ ಬರೆದ ಕೆಲವರಿಗೆ ಆತಂಕ ಇರಬಹುದು. ಅದನ್ನೆಲ್ಲ ಕೇಂದ್ರ ಸರ್ಕಾರ ಗಮನಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೆ. ಆದ್ರೆ ಈ ನೆಪದಲ್ಲಿ ಪ್ರತಿಭಟನೆ, ಟ್ರೈನಿಗೆ (Train) ಬೆಂಕಿ ಹಾಕೋದು ಸರಿಯಲ್ಲಎಂದು ತಿಳಿಸಿದರು. ಇದನ್ನು ಓದಿ :– ಅಸ್ಸಾಂ – ಮೇಘಾಲಯದಲ್ಲಿ ಪ್ರವಾಹದಿಂದಾಗಿ 1700 ಗ್ರಾಮಗಳು ಮುಳುಗಡೆ
ಇದೇ ವೇಳೆ ನಾಳೆ ಸಂಜೆ ಮೈಸೂರಿನಲ್ಲಿ (Mysuru) ಸಾರ್ವಜನಿಕ ಸಭೆ, ಸುತ್ತೂರು ಮಠ ಹಾಗೂ ಚಾಮುಂಡೇಶ್ವರಿ ಬೆಟ್ಟಕ್ಕೆ (Chamundi hill) ಮೋದಿ (Modi) ಭೇಟಿ ಕೊಡ್ತಿದ್ದಾರೆ , ಎಲ್ಲ ಸಿದ್ಧತೆಗಳೂ ಆಗಿವೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ. ಇದನ್ನು ಓದಿ :– ಗಾಯತ್ರಿ ಬಡವಾಣೆಯ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಮಿಥುನ್ ಮೃತದೇಹ ಪತ್ತೆ