ಸಿದ್ದರಾಮೋತ್ಸವಕ್ಕೆ ಯಾರೆಲ್ಲಾ ಏನೆಲ್ಲಾ ಮಾಡಿದ್ರು ನಮ್ಮ ಬಳಿ ಮಾಹಿತಿ ಇದೆ. ಯಾರು ಎಷ್ಟು ಖರ್ಚು ಮಾಡಿದ್ರು, ಎಷ್ಟು ಬಸ್ ಕಳುಹಿಸಿದ್ರು ಎಂದು ಸಿದ್ದರಾಮಯ್ಯ ( siddaramiah) ವಿರುದ್ದ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ( munirathna ) ಕಿಡಿಕಾರಿದ್ದಾರೆ.
ಕೋಲಾರ( kolara ) ದಲ್ಲಿ ಮಾತನಾಡಿದ ಅವರು ಮೈದಾನದಲ್ಲಿ ಜನರು ಬಂದು ಜನ ಸೇರಿಸಿದ ಮಾತ್ರಕ್ಕೆ ಸರ್ಕಾರ ಬರಲ್ಲ. ಅವರು ಭ್ರಮೆಯಲ್ಲಿದ್ದಾರೆ ಅಷ್ಟೆ ಎಂದು ಕಾಂಗ್ರೆಸ್ ಗೆ ಟಾಂಗ್ ನೀಡಿದ್ದಾರೆ. ಜನರನ್ನ ನೋಡಿ ಚುನಾವಣೆ ಎದುರಿಸುತ್ತೇವೆ ಅನ್ನೋದಾದ್ರೆ. ರಾಜಕೀಯ ಪಕ್ಷಗಳು ಜನರನ್ನ ಸೇರಿಸಿ, ಬೃಹತ್ ಸಭೆಗಳನ್ನ ಮಾಡಿ ಚುನಾವಣೆ ಎದುರಿಸುತ್ತಿದ್ರು ಎಂದು ಹೇಳಿದ್ರು. ಇದನ್ನು ಓದಿ : – ಸಿಎಂ ಬಸವರಾಜ ಬೊಮ್ಮಾಯಿಗೆ ಮತ್ತೆ ಕೊರೊನಾ ಸೋಂಕು – ದೆಹಲಿ ಪ್ರವಾಸ ರದ್ದು
ಹರ್ ಘರ್ ತಿರಂಗ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಪ್ರತಿಯೊಬ್ಬರೂ ರಾಷ್ಟ್ರ ಧ್ವಜದ ಬಗ್ಗೆ ಗೌರವ ಇಟ್ಟುಕೊಳ್ಳಬೇಕು. ರಾಷ್ಟ್ರ ಧ್ವಜವನ್ನು ಪ್ರತಿಯೊಬ್ಬರು ಮನೆ ಮೇಲೆ ಹಾರಿಸುವುದು ತಪ್ಪಾ! ರಾಷ್ಟ್ರ ಧ್ವಜ ಅದು. ಬಿಜೆಪಿ ( bjp )ಪಕ್ಷದ ಚಿಹ್ನೆಯಲ್ಲ. ಬಿಜೆಪಿ ಪಕ್ಷದ ಧ್ವಜವನ್ನ ಹಾಕು ಅಂತ ಯಾರು ಹೇಳ್ತಿಲ್ವಲ್ಲ. ಪ್ರತಿಯೊಬ್ಬ ಭಾರತೀಯನ ಹಕ್ಕು. ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಭಾರತದ ಧ್ವಜವನ್ನು ಪ್ರತಿಯೊಬ್ಬರು ಅವರ ಮನೆಗಳ ಮೇಲೆ ಹಾಕಿಕೊಳ್ಳಲು ಸರ್ವ ಸ್ವತಂತ್ರರು ಎಂದು ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ರು.
ಇದನ್ನು ಓದಿ : – ‘ರಾಜ್ಯದಲ್ಲಿರುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ? ಅಥವಾ ಹಿಂದಿ ಮತ್ತು ಸಂಸ್ಕೃತಿ ಇಲಾಖೆಯೇ?’- ಸಿದ್ದರಾಮಯ್ಯ