ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿಗೆ ಸಂಬಂಧಿಸಿದ್ದಂತೆ ಡಾ.ಕೆ ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನ ವಿಧಾನಸೌಧದಲ್ಲಿ ಮಾತನಾಡಿದ ಅವರು ಯಾರೋ ಒಬ್ಬ ಅನಾಮಧೇಯ ಪತ್ರ ಬರೆದಿದ್ದಾರೆ.
ಆಧಾರ ರಹಿತವಾದ ದೂರಿಗೆ ಯಾವ ಮಾನ್ಯತೆ ಕೊಡಲು ಸಾಧ್ಯ. ದೂರಿನ ಸಂಬಂಧ ದಾಖಲೆ ಎಲ್ಲಿದೆ ? ಅದನ್ನ ಇಟ್ಕೊಂಡು ಆರೋಪ ಮಾಡೋದು, ಗೇಲಿ ಮಾಡೋದು ಸರಿಯಲ್ಲ. ಪಕ್ಷಕ್ಕೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ಇದನ್ನೆಲ್ಲಾ ಮಾಡುತ್ತಿದೆ. ಭ್ರಷ್ಟಾಚಾರದ ಜನಕ ಅಂದ್ರೆ ಕಾಂಗ್ರೆಸ್. ಅತ್ಯಂತ ಭ್ರಷ್ಟಾಚಾರ ರಹಿತವಾದ ಸರ್ಕಾರವನ್ನ ಮೋದಿ ಕೊಡುತ್ತಿದ್ದಾರೆ. ಇದನ್ನು ಓದಿ :- ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ – ತನಿಖೆಯಲ್ಲಿ ಹಸ್ತಕ್ಷೇಪ ಮಾಡಲ್ಲ –ಸಿಎಂ ಬೊಮ್ಮಾಯಿ
ಭ್ರಷ್ಟಾಚಾರ ಇದೆ, ಇಲ್ಲ ಅಂತಾ ಹೇಳೋದಿಲ್ಲ. ಇದು ನಮ್ಮ ಸರ್ಕಾರ ಬಂದ ಮೇಲೆ ಆರಂಭವಾಗಿಲ್ಲ. ಭ್ರಷ್ಟಾಚಾರ ಮೊದಲಿನಿಂದಲೂ ಇದೆ. ಎಲ್ಲಾ ಪಕ್ಷಗಳು ಒಂದಾಗಿ ಈ ಬಗ್ಗೆ ಚರ್ಚಿಸಬೇಕು. ಡಿವೈಎಸ್ಪಿ ಗಣಪತಿ ವಿಚಾರವೇ ಬೇರೆ, ಈ ವಿಚಾರವೇ ಬೇರೆ .ಅವರು ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಹೇಳಿದ್ರು.
ಇದನ್ನು ಓದಿ :- ಈಶ್ವರಪ್ಪ ಬಂಧನಕ್ಕೆ ಆಗ್ರಹ – ಕಾಂಗ್ರೆಸ್ ನಿಯೋಗದಿಂದ ರಾಜ್ಯಪಾಲರ ಭೇಟಿ