Breaking NewsPolitical News

ಕಾಂಗ್ರೆಸ್‌ ಸೇಡಿನ ರಾಜಕಾರಣ ಮಾಡಿ ತುಳಿಯಲು ಹೊರಟಿದ್ದಾರೆ : ಹೆಚ್‌ಡಿಡಿ

ಬೆಂಗಳೂರು : ಹುಬ್ಬಳ್ಳಿಯಲ್ಲಿ ಶ್ರೀಕಾಂತ್ ಪೂಜಾರಿ ವಿರುದ್ಧದ ಪ್ರಕರಣವನ್ನು ರೀಓಪನ್‌ ಮಾಡಿ ಕಾಂಗ್ರೆಸ್‌ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್​ಡಿ ದೇವೇಗೌಡ JDS national president HD Deve Gowda) ಕಿಡಿಕಾರಿದ್ದಾರೆ.

ಬೆಂಗಳೂರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರ. ಹುಬ್ಬಳ್ಳಿಯಲ್ಲಿ ಶ್ರೀಕಾಂತ್ ಪೂಜಾರಿ ವಿರುದ್ಧದ ಪ್ರಕರಣವನ್ನು ರೀಓಪನ್‌ ಮಾಡಿ ಕಾಂಗ್ರೆಸ್ಸಿಗರು ಸೇಡಿನ ರಾಜಕಾರಣ ಮಾಡಿ ತುಳಿಯಲು ಹೊರಟಿದ್ದಾರೆ ಎಂದು ಕಿಡಕಾರಿದ್ದಾರೆ.

ಬಿಜೆಪಿ ಜತೆ ಚುನಾವಣೆ ಎದುರಿಸುತ್ತೇವೆ, ಇದರಲ್ಲಿ ಸಂಶಯ ಬೇಡ. ಎನ್​ಡಿಎ ಮೈತ್ರಿಕೂಟದ ಭಾಗವಾಗಿದ್ದಾಗ ನಮ್ಮ ಅಭಿಪ್ರಾಯ ಹೇಳುವ ಸ್ವಾತಂತ್ರ್ಯ ನಮಗೆ ಇದೆ. ಕಾಂಗ್ರೆಸ್ಸಿಗರು ಸೇಡಿನ ರಾಜಕಾರಣ ಮಾಡಿ ತುಳಿಯಲು ಹೊರಟಿದ್ದಾರೆ. 4 ರಾಜ್ಯಗಳ ಚುನಾವಣೆಗೆ‌ ಅವರು ಎಷ್ಟು ಹಣ ತೆಗೆದುಕೊಂಡು ಹೋಗಿದ್ದಾರೆ? ಡಿಸಿಎಂ ಡಿಕೆ ಶಿವಕುಮಾರ್ ಎಷ್ಟು ಹಣ ಸಾಗಿಸಿದ್ದಾರೆ, ಎಷ್ಟು ಹಣ ಸೀಜ್ ಆಗಿದೆ ಎಂದು ಪ್ರಶ್ನಿಸಿದ ದೇವೇಗೌಡರು, ಈ ಬಗ್ಗೆ ಚುನಾವಣೆ ಆಯೋಗ ಗಮನ ಹರಿಸಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಇಡೀ ದೇಶಕ್ಕೆ ಬುದ್ಧಿ ಹೇಳುತ್ತಾರೆ. ಅವರಿಗೆ ಅಕ್ರಮ ತಡೆಯಲು ಶಕ್ತಿ ಇದೆಯಾ? ಟಿಪ್ಪು ಸುಲ್ತಾನ್​ ವಿಚಾರ ಬಿಟ್ಟರೆ ಈ ದೇಶದಲ್ಲಿ ಬೇರೆ ಬೇರೇನೂ ಇಲ್ವಾ ಎಂದು ಅವರು ಪ್ರಶ್ನಿಸಿದರು.

ನಾವೂ ರಾಮನ ಪೂಜೆ ಮಾಡುತ್ತೇವೆ. ಅಜ್ಮೀರ್ ದರ್ಗಾ, ಗೋಲ್ಡನ್ ಟೆಂಪಲ್, ತಿರುಪತಿಗೂ ಹೋಗಿದ್ದೇನೆ ಎಂದು ಅವರು ಹೇಳಿದರು. ನಾವು ಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಸೇಡಿನ ರಾಜಕಾರಣ ಮಾಡಲಾಗುತ್ತಿದೆ. ಬಿಜೆಪಿಯನ್ನು ‌ಸೋಲಿಸಿ 20 ಸೀಟ್ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.

ಎಲ್ಲರ ನಿರೀಕ್ಷೆ ಮೀರಿ ಜನ ತೀರ್ಪು ಕೊಡುತ್ತಾರೆ. ಆಗ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​​ ಹವಾ ಮುಗಿಯುತ್ತದೆ ಎಂದು ದೇವೇಗೌಡ ಹೇಳಿದರು. ಸ್ ಅಕ್ರಮ ವಿಚಾರವಾಗಿಯೂ ಮಾತನಾಡಿದ ದೇವೇಗೌಡರು, ಸಿದ್ದರಾಮಯ್ಯ ಬಡವರನ್ನು ಉಳಿಸುವ ಕೆಲಸ ಮಾಡಲಿ. ಬಡವರನ್ನ, ಅವರ ಜಮೀನನ್ನ ಸಿದ್ದರಾಮಯ್ಯ ಉಳಿಸಿಕೊಟ್ರೆ ಅವರಿಗೆ ಅಭಾರಿಯಾಗಿರುತ್ತೇನೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!