ಯರಗೋಳ್ ಡ್ಯಾಂ (Yaragola dam) ಗೆ ಅನುದಾನ ಹೆಚ್ಚಾಗಿ ಕೊಟ್ಟ ನಗರಾಭಿವೃದ್ಧಿ ಸಚಿವರಿಗೆ ಧನ್ಯವಾದಗಳು. ಡ್ಯಾಂ ಗೆ ಯಾರು ಶ್ರಮ ಹಾಕಿದ್ರು ಅನ್ನೋದು ಇಲ್ಲಿ ಪ್ರಮುಖ ವಿಚಾರ ಎಂದು ಉಸ್ತುವಾರಿ ಸಚಿವ ಮುನಿರತ್ನ (Muniratna) ಹೇಳಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಅವರು ಮಕ್ಕಳನ್ನು ಹುಟ್ಟಿಸಿದವರು ಯಾರೋ, ಅಪ್ಪ ನಾನು ಎನ್ನುತ್ತಿದ್ದಾರೆ. ಮಾಜಿ ಶಾಸಕರಾದ ವರ್ತೂರು ಪ್ರಕಾಶ್ (Vartur prakash) , ಬಿ.ಪಿ. ವೆಂಕಟ ಮುನಿಯಪ್ಪ (Venkatamuniyappa) , ಎಂ . ನಾರಾಯಣಸ್ವಾಮಿ ಇದಕ್ಕೆ ರೂವಾರಿಗಳು. ಆದ್ರೆ ಕಾಂಗ್ರೆಸ್ ಶಾಸಕರು ಬಿಜೆಪಿಯವರು ಹುಟ್ಟಿಸಿದ ಮಕ್ಕಳಿಗೆ ನಾವು ಅಪ್ಪ ಎನ್ನುತ್ತಿದ್ದಾರೆ. ಇದೆ ತಿಂಗಳು 12 ರಂದು ಅಧಿಕಾರಿಗಳ ಜೊತೆ ಸಭೆ ಕರೆದು ಆದಷ್ಟೂ ಬೇಗ ನೀರು ಕೊಡಲಾಗುವುದು. ಈಗಾಗಲೆ ಜಲ್ ಜೀವನ್ ಮಿಷನ್ ಮೂಲಕ ಟೆಂಡರ್ ಮಾಡಲಾಗಿದೆ. ಅನ್ನ, ನೀರಿನ ಋಣ ಇಟ್ಟುಕೊಳ್ಳಬಾರದು ಹಾಗಾಗಿ ಯಡಿಯೂರಪ್ಪನವರ ಕಾಲದಲ್ಲಿ ಈ ಯೋಜನೆ ಆರಂಭವಾಗಿದೆ. ಇದನ್ನ ನಾವೆ ಮುಕ್ತಾಯ ಮಾಡುವ ಮೂಲಕ ನೀರು ಕೊಡುತ್ತೇವೆ. ಇದರ ಋಣ ತೀರಿಸಬೇಕಾದ್ರೆ ಬಿಜೆಪಿಗೆ ಮತ ನೀಡಿ ಎಂದು ಹೇಳಿದರು. ಇದನ್ನು ಓದಿ : – ಯಾವುದೇ ಕಾರಣಕ್ಕೂ ಅವಧಿ ಮುಗಿಯುವವರೆಗೆ ಸಿಎಂ ಬದಲಾವಣೆ ಇಲ್ಲ – ಕೆ ಪಿ ನಂಜುಂಡಿ
ಇದೇ ವೇಳೆ ಬಾಜಾಭಜಂತ್ರಿ , ವಾಲಗ, ಡೋಲು ಮೇಳ ಭಾರಿಸಿದ ಮಾತ್ರಕ್ಕೆ ಅಧಿಕಾರಕ್ಕೆ ಬರಲ್ಲ. ಪರೋಕ್ಷವಾಗಿ ಸಿದ್ದರಾಮೋತ್ಸವಕ್ಕೆ ಮುನಿರತ್ನ ಟಾಂಗ್ ಕೊಟ್ಟಿದ್ದಾರೆ. ಸಿದ್ದು ಡಿಕೆಶಿ ತಬ್ಬಿಕೊಳ್ಳೋದನ್ನ ಅಕ್ರಮ ಸಂಬಂಧಕ್ಕೆ ಮುನಿರತ್ನ ಹೋಲಿಕೆ ಮಾಡಿದ್ದಾರೆ. ಮಹಾಭಾರತದ ಸನ್ನಿವೇಶಕ್ಕೆ ಹೋಲಿಕೆ ಮಾಡೋದು ಬೇಡ. ಕುರುಕ್ಷೇತ್ರದ ನಿರ್ಮಾಪಕ ನಾನು ಎಂದು ಕಾಂಗ್ರೆಸ್ ಗೆ ಮುನಿರತ್ನ ಟಾಂಗ್ ಕೊಟ್ಟಿದ್ದಾರೆ. ತಿಪ್ಪರಲಾಗ ಹಾಕಿದ್ರು ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಅವರೆಲ್ಲಾ ಈಗಾಗಲೆ ಭ್ರಮೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ : – ಬಸವರಾಜ ಹೊರಟ್ಟಿ ಕಾರು ಅಪಘಾತ – ಬೈಕ್ ಸವಾರನಿಗೆ ಗಾಯ ಕಿಮ್ಸ್ ಗೆ ದಾಖಲು