ಶ್ರೀರಾಮ ಜನ್ಮಭೂಮಿ ಆವರಣದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮತ್ತು ವಿಶ್ವ ಹಿಂದೂ ಪರಿಷತ್(ವಿಎಚ್ಪಿ) ನೇತೃತ್ವದಲ್ಲಿ ನಡೆದ ದೇಣಿಗೆ ಅಭಿಯಾನದಲ್ಲಿ ದೇವಾಲಯದ ಟ್ರಸ್ಟ್ ನ ಬೊಕ್ಕಸಕ್ಕೆ ಬರೋಬ್ಬರಿ 5,457 ಕೋಟಿ ರೂಪಾಯಿ ಬಂದಿತ್ತು. ಮೂಲಗಳ ಪ್ರಕಾರ 22 ಕೋಟಿ ಮೌಲ್ಯದ ಚೆಕ್ಗಳು ಬೌನ್ಸ್ ಆಗಿವೆ ಎನ್ನಲಾಗಿದೆ.
ಮತ್ತೊಂದೆಡೆ, ಟ್ರಸ್ಟ್ ಖಾತೆಗಳ ಜಿಲ್ಲಾವಾರು ಲೆಕ್ಕಪರಿಶೋಧನೆ ನಡೆಯುತ್ತಿರುವುದರಿಂದ ಇದುವರೆಗೆ ಸಂಗ್ರಹಿಸಲಾದ ಒಟ್ಟು ಮೊತ್ತದ ಅಂಕಿಅಂಶವು ತಾತ್ಕಾಲಿಕವಾಗಿದೆ. ಟ್ರಸ್ಟ್ ಮೂಲಗಳ ಪ್ರಕಾರ, ಬೌನ್ಸ್ ಆಗಿರುವ ಚೆಕ್ಗಳನ್ನು ಪ್ರತ್ಯೇಕಿಸಿ ಹೊಸ ಆಡಿಟ್ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಒಟ್ಟು 5,400 ಕೋಟಿ ರೂ.ಗಿಂತ ಹೆಚ್ಚಿನ ದೇಣಿಗೆ ಸಂಗ್ರಹವಾಗಿದೆ. 2,235.97 ಕೋಟಿ ರೂ.ಗಳನ್ನು ಕೂಪನ್ ಮತ್ತು ರಸೀದಿಗಳ ಮೂಲಕ ಸ್ವೀಕರಿಸಲಾಗಿದೆ. 2753.97 ಡಿಜಿಟಲ್ ಮಾಧ್ಯಮದ ಮೂಲಕ ಸಂಗ್ರಹಿಸಲಾಗಿದೆ.
ಇದನ್ನು ಓದಿ :- ಬೆಂಗಳೂರು ಅಭಿವೃದ್ಧಿಗೆ ಡಬಲ್ ಇಂಜಿನ್ ಸರ್ಕಾರ ಬದ್ಧ – ಬೆಂಗಳೂರಿನ ಯುವಶಕ್ತಿಯನ್ನ ಕೊಂಡಾಡಿದ ಪ್ರಧಾನಿ ಮೋದಿ