ಯುಕೆ (UK) ಯ ಭವಿಷ್ಯದ ಪ್ರಧಾನಿ ಎಂದೇ ಗುರುತಿಸಿಕೊಂಡಿರುವ ಭಾರತ ಮೂಲದ ರಿಷಿ ಸುನಕ್ (Rishi sunak) ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ಕಾರಣದಿಂದಾಗಿ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇಂಗ್ಲೆಂಡ್ (England) ನಲ್ಲಿರುವ ತಮ್ಮ ಮನೆಯಲ್ಲಿ ಈಜುಕೊಳ (Swimming pool) ನಿರ್ಮಿಸುವ ವಿಚಾರದಲ್ಲಿ ರಿಷಿ ಸುನಕ್ ಸಾರ್ವಜನಿಕರ ಕೋಪಕ್ಕೆ ತುತ್ತಾಗಿದ್ದಾರೆ.
ಇಂಗ್ಲೆಂಡ್ ಸುತ್ತಮುತ್ತ ಬರ ತಾಂಡವಾಡುತ್ತಿದ್ದು, ನೀರಿಗೆ ಹಾಹಾಕಾರದ ಪರಿಸ್ಥಿತಿ ಎದುರಾಗಿದೆ. ಹೀಗಿರುವಾಗ ಇಷ್ಟು ಕೋಟಿ ವೆಚ್ಚದ ಈಜುಕೊಳದ ಯೋಜನೆ ಬೇಕಿತ್ತಾ ಎಂದು ಭವಿಷ್ಯದ ಪ್ರಧಾನಿ ಎಂದೇ ಗುರುತಿಸಿಕೊಂಡಿರುವ ಸುನಕ್ ವಿರುದ್ಧ ಜನ ರೊಚ್ಚಿಗೆದ್ದಿದ್ದಾರೆ. ನಾರ್ತಲರ್ಟನ್ ಬಳಿ ಇರುವ ತಮ್ಮ ಬಂಗಲೆಯಲ್ಲಿ ಸುನಕ್ 3.8 ಕೋಟಿ ರೂ. ವೆಚ್ಚದಲ್ಲಿ ಈಜುಕೊಳ ನಿರ್ಮಿಸಿದ್ದು ಪತ್ನಿ, ಇಬ್ಬರು ಮಕ್ಕಳೊಂದಿಗೆ ವಾರಾಂತ್ಯ ಹಾಗೂ ರಜೆಯನ್ನು ಮೋಜಿನಿಂದ ಕಳೆಯುತ್ತಿದ್ದಾರೆ ಎಂದು ‘ಡೈಲಿ ಮೈಲ್’ ವರದಿ ಮಾಡಿದೆ.
. ಈ ಬಂಗಲೆಯಲ್ಲಿ ಟೆನಿಸ್ ಕೋರ್ಟ್ ಹಾಗೂ ಜಿಮ್ ಅನ್ನೂ ನಿರ್ಮಿಸಲಾಗುತ್ತಿದೆ. ಇತ್ತೀಚೆಗೆ ಚಿತ್ರೀಕರಿಸಲಾದ ವೈಮಾನಿಕ ದೃಶ್ಯಾವಳಿಗಳು ಸೆರೆಹಿಡಿದಿರುವ ದೃಶ್ಯದ ಪ್ರಕಾರ ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ ಎಂದು ವರದಿಯಾಗಿದೆ. ಇದನ್ನೂ ಓದಿ : – ಪ್ರಧಾನಿ ಮೋದಿ ಭದ್ರತೆಗೆ ಮುಧೋಳ ನಾಯಿ.. ಏನಿದರ ವಿಶೇಷತೆ?
ದಂಪತಿ ಕಳೆದ ವರ್ಷ ತಮ್ಮ ಭವನದಲ್ಲಿ 12 ಮತ್ತು 5 ಮೀಟರ್ ಈಜುಕೊಳ ನಿರ್ಮಿಸಲು ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದರು. ಸದ್ಯ ರಿಷಿ ಸುನಕ್ ಅವರ ಈ ಕ್ರಮ, ಯುಕೆಯಲ್ಲಿನ ಜೀವನ ವೆಚ್ಚದ ಬಿಕ್ಕಟ್ಟನ್ನು ಎದುರಿಸುತ್ತಿರುವ ಜನರ ಕೋಪಕ್ಕೆ ತುತ್ತಾಗಿದೆ. ಹೆಚ್ಚುತ್ತಿರುವ ವಿದ್ಯುತ್, ನೀರು ವೆಚ್ಚದಿಂದಾಗಿ ರಿಚ್ಮಂಡ್ ನಲ್ಲಿ ಸಾರ್ವಜನಿಕ ಈಜುಕೊಳಗಳನ್ನು ಮುಚ್ಚಲಾಗಿದೆ.
ಕ್ಷಾಮದ ಹಿನ್ನೆಲೆಯಲ್ಲಿ ನೀರಿನ ಖರ್ಚು ಮಿತಗೊಳಿಸಲು ನಗರದಲ್ಲಿನ ಸಾರ್ವಜನಿಕ ಈಜುಕೊಳವನ್ನು ಮುಚ್ಚಿರುವ ಸಂದರ್ಭದಲ್ಲಿ ಜನ ಪ್ರತಿನಿಧಿಯೊಬ್ಬರು ಈ ರೀತಿ ಮಾಡುತ್ತಿರುವುದು ಸರಿಯೇ ಜನರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : – ಸಿದ್ದರಾಮಯ್ಯ ಅವರನ್ನ ಪಕ್ಷಕ್ಕೆ ಆಹ್ವಾನಿಸಲು ಮಾತನಾಡಿದ್ದೇನೆ, ಬೇರೆ ಅರ್ಥ ಕಲ್ಪಿಸುವುದು ಬೇಡ – ಶ್ರೀರಾಮುಲು