ತೀವ್ರ ವಿರೋಧದ ನಡುವೆಯೂ ದೆಹಲಿ ವಿಶ್ವ ವಿದ್ಯಾಲಯದಲ್ಲಿ ಬಿಬಿಸಿ ಸಿದ್ಧಪಡಿಸಿದ `ಮೋದಿ ಎ ಕ್ವಶನ್’ ಸಾಕ್ಷ್ಯಚಿತ್ರವನ್ನು ವೀಕ್ಷಿಸಲಾಗಿದೆ. ವಿದ್ಯಾರ್ಥಿಗಳು ಲ್ಯಾಪ್ ಟ್ಯಾಪ್, ಮೂಬೈಲ್ ಗಳಲ್ಲಿ ಚಿತ್ರ ವೀಕ್ಷಿಸಿ ಆಜಾದಿ ಘೋಷಣೆ ಕೂಗಿದ್ದಾರೆ.
ಜೆ.ಎನ್.ಯು ಮತ್ತು ಜಾಮಿಯಾ ಮೀಲಿಯ ಇಸ್ಲಾಮಿಯಾ ವಿವಿ ಬಳಿಕ ದೆಹಲಿ ವಿಶ್ವ ವಿದ್ಯಾಲಯದಲ್ಲಿರುವ ಎಡಪಂಥೀಯ ಚಿಂತನೆಯ ವಿದ್ಯಾರ್ಥಿಗಳು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವುದಾಗಿ ಘೋಷಣೆ ಮಾಡಿದ್ದರು. ಇದಕ್ಕೆ ವಿವಿ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿತ್ತು. ವಿದ್ಯುತ್ ಕಡಿತಗೊಳಿಸಿದ ಬಳಿಕವೂ SFI ವಿದ್ಯಾರ್ಥಿ ಸಂಘಟನೆಯ ವಿದ್ಯಾರ್ಥಿಗಳು ಬದಲಿ ಮಾರ್ಗಗಳನ್ನು ಬಳಸಿ ಮೊಬೈಲ್, ಲ್ಯಾಪ್ ಟಾಪ್ ಗಳ ಮೂಲಕ ಚಿತ್ರ ವೀಕ್ಷಣೆಗೆ ವ್ಯವಸ್ಥೆ ಮಾಡಿದರು. ಇದನ್ನು ಓದಿ :- ಭದ್ರತಾ ಲೋಪ – ಭಾರತ್ ಜೋಡೋ ಯಾತ್ರೆ ತಾತ್ಕಾಲಿಕ ಸ್ಥಗಿತ
ಚಿತ್ರ ವೀಕ್ಷಣೆ ಪಟ್ಟು ಹೆಚ್ಚುತ್ತಿದ್ದಂತೆ ದೆಹಲಿ ಪೊಲೀಸರು ಕ್ಯಾಂಪಸ್ ಗೆ ಬಿಗಿ ಭದ್ರತೆ ಒದಗಿಸಿದರು. ಗುರುತಿನ ಚೀಟಿ ಇಲ್ಲದವರನ್ನ ಕ್ಯಾಂಪಸ್ನೊಳಗೆಯೇ ನಿರ್ಬಂಧಿಸಲಾಯಿತು. SFI ಸೇರಿ ಎಡಪಂಥೀಯ ವಿದ್ಯಾರ್ಥಿಗಳು ಸಾಕ್ಷ್ಯ ಚಿತ್ರ ವೀಕ್ಷಣೆ ಮಾಡುತ್ತಿದ್ದಂತೆ ಬಲ ಪಂಥೀಯ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದರು. ಆಜಾದಿ ಘೋಷಣೆಗೆ ಪ್ರತಿಯಾಗಿ ಜೈ ಶ್ರೀರಾಮ್ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿ :- ಸ್ಯಾಂಟ್ರೋ ರವಿ ಆತ್ಮಹತ್ಯೆಗೆ ಯತ್ನಿಸಿದ್ದಾನಂತೆ ಇದು ಆತ್ಮಹತ್ಯೆ ಯತ್ನವೋ, ಕೊಲೆ ಯತ್ನವೋ? – ಕಾಂಗ್ರೆಸ್ ಪ್ರಶ್ನೆ