ಎನ್ಐಎ (NIA) ತಂಡ ಮಂಗಳೂರಿ (Mangalore) ನ ಉಳ್ಳಾಲದ ಕೈರಂಗಳ ಗ್ರಾಮದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ (Engineering college) ಮೇಲೆ ದಾಳಿ ನಡೆಸಿದ್ದು ವಿದ್ಯಾರ್ಥಿಯೋರ್ವನನ್ನು ವಶಕ್ಕೆ ಪಡೆದಿದೆ. ಮಂಗಳೂರು ಕುಕ್ಕರ್ ಬಾಂಬ್ (Cooker bomb) ಸ್ಫೋಟ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಎನ್ಐಎ ಅಧಿಕಾರಿಗಳು ಮಂಗಳೂರಿನ ಪಿಎ ಇಂಜಿನಿಯರಿಂಗ್ ಕಾಲೇಜಿನ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಉಗ್ರ ಶಾರೀಕ್ ನ ವಿಚಾರಣೆ ನಡೆಸಿದ್ದ ಎನ್ಐಎ ಹಲವು ಮಾಹಿತಿಗಳನ್ನು ಪಡೆದಿದ್ದರು. ಅಲ್ಲದೆ ಬಂಧಿತ ಶಂಕಿತ ಉಗ್ರ ಮಾಝ್ ಮುನೀರ್ ಸಹ ಪಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದನು. ಈ ಎಲ್ಲಾ ಕಾರಣಗಳಿಗಾಗಿ ಎನ್ಐಎ ತಂಡದ 7 ಅಧಿಕಾರಿಗಳು (Officers) ದಾಳಿ ನಡೆಸಿದ್ದಾರೆ. ಮಾಝ್ ಮುನೀರ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ಕೈರಂಗಳ ಗ್ರಾಮದ ನಡುದವಿನ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಆತನನ್ನು ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆತರುತ್ತಿದ್ದಾರೆ.
ಇದನ್ನು ಓದಿ : – ದ್ವೇಷದಿಂದ ಜನರ ಹೊಟ್ಟೆ ತುಂಬಲ್ಲ, ದ್ವೇಷ ಇನ್ನೊಬ್ಬರ ಹೊಟ್ಟೆ ಸುಡುತ್ತೆ – ಕೃಷ್ಣಬೈರೇಗೌಡ