ಇಂದಿನಿಂದ ಖಾಸಗಿ ಶಾಲೆಗಳಲ್ಲಿ ಕೊರೊನಾ ರೂಲ್ಸ್ ಜಾರಿ – ನೆಗಡಿ, ಕೆಮ್ಮು, ಜ್ವರ ಇರುವ ವಿದ್ಯಾರ್ಥಿಗಳಿಗೆ ರಜೆ

ಕೊರೊನಾ ರೂಪಾಂತರಿ ಚೀನಾದಲ್ಲಿ ಅಬ್ಬರಿಸುತ್ತಾ ಭಾರತಕ್ಕೂ ಕಾಲಿಟ್ಟಿದ್ದು, ಕರ್ನಾಟಕಕ್ಕೂ ಲಗ್ಗೆ ಇಡುವ ಆತಂಕ ಶುರುವಾಗಿದೆ.

ಕೊರೊನಾ ( CORONA ) ರೂಪಾಂತರಿ ಚೀನಾ ( CHINA ) ದಲ್ಲಿ ಅಬ್ಬರಿಸುತ್ತಾ ಭಾರತಕ್ಕೂ ಕಾಲಿಟ್ಟಿದ್ದು, ಕರ್ನಾಟಕಕ್ಕೂ ಲಗ್ಗೆ ಇಡುವ ಆತಂಕ ಶುರುವಾಗಿದೆ. ಹೀಗಾಗಿ ರೂಪ್ಸಾ ತನ್ನ ಅಧೀನದಲ್ಲಿ ಬರುವ ಕರ್ನಾಟಕದ ಖಾಸಗಿ ಶಾಲೆಗಳ ಜೊತೆ ಸಭೆ ಮಾಡಿದ್ದು, ಮಕ್ಕಳ ಷ್ಟಿಸುರಕ್ಷತಾ ದೃಯಿಂದ ಖಾಸಗಿ ಶಾಲೆಗಳಲ್ಲಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕೆಂದು ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇಂದಿನಿಂದ ಅನ್ವಯವಾಗಲಿದೆ.

global spurt in Covid Coronavirus increase in China Govt of India asks states to increase genome sequencing of positive samples - Covid Review Meet: ಚೀನಾದಲ್ಲಿ ಮತ್ತೆ ಕೊವಿಡ್ ಸ್ಫೋಟ: ಕಣ್ಗಾವಲಿಗೆ ವಿಶೇಷ ಸಮಿತಿ ...
ರುಪ್ಸಾ ಸಂಘಟನೆಗೆ ಒಳಪಡುವ ಶಾಲೆಗಳ ಜೊತೆ ನೆನ್ನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದು, ದೇಶದಲ್ಲಿ ಕೊರೊನಾ ಆತಂಕ ಹೆಚ್ಚಾಗುತ್ತಿದೆ. ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಶಾಲೆಗಳಲ್ಲಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಖಾಸಗಿ ಶಾಲೆಗಳಿಗೆ ಸೂಚಿಸಿದ್ದಾರೆ. ಅಲ್ಲದೇ ಪಬ್ಲಿಕ್ ಪರೀಕ್ಷೆ ಬಿಟ್ಟು ಉಳಿದ ತರಗತಿಗಳ ಪರೀಕ್ಷೆಯನ್ನ ಅವಧಿಗೂ ಮುಂಚೆಯೇ ನಡೆಸುವ ಬಗ್ಗೆ ಚರ್ಚೆ ನಡೆಸಿದರು. ಪೋಷಕರು ನಿತ್ಯ ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಸಹ ಕಟ್ಟುನಿಟ್ಟಾಗಿ ನಿಯಮ ಅನುಸರಿಸಬೇಕು ಎಂದು ರುಪ್ಸಾ ಹೇಳಿದ್ದು, ಕೊರೊನಾ ಆತಂಕದ ನಡುವೆ 5, 8ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಂಕನ ಪರೀಕ್ಷೆ ನಡೆಸಲು ಮುಂದಾಗಿರುವ ಶಿಕ್ಷಣ ಇಲಾಖೆ ನಡೆಗೆ ವಿರೋಧ ವ್ಯಕ್ತಪಡಿಸಿದೆ. ಇದನ್ನು ಓದಿ :- ಚನ್ನಪಟ್ಟಣದಲ್ಲಿ ಕ್ಯಾಂಟರ್‌ ಗೆ ಗುದ್ದಿದ ಟಿಟಿ – ಸ್ಥಳದಲ್ಲೇ ಇಬ್ಬರು ಸಾವು

Kannada News: TV9 Kannada News, ಟಿವಿ9 ಕನ್ನಡ ಸುದ್ದಿ - Latest Kannada News, LIVE News Photos and Videos Online | TV9 Kannada
ಖಾಸಗಿ ಶಾಲೆಗಳಿಗೆ ಮಾರ್ಗಸೂಚಿ :-
ಶಾಲೆಗೆ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು . ನೆಗಡಿ, ಕೆಮ್ಮು, ಜ್ವರ ಲಕ್ಷಣಗಳು ಕಂಡು ಬಂದಲ್ಲಿ ಪೋಷಕರಿಗೆ ಶಿಕ್ಷಕರು ತಕ್ಷಣ ಮಾಹಿತಿ ಕೊಡಬೇಕು. ನೆಗಡಿ, ಕೆಮ್ಮು, ಜ್ವರ ಇರುವ ವಿದ್ಯಾರ್ಥಿಗಳಿಗೆ ರಜೆ ಕೊಡಬೇಕು. ಶಿಕ್ಷಕರು, ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಬೂಸ್ಟರ್ ಡೋಸ್ ( BOOSTER DOSE ) ಲಸಿಕೆ ಹಾಕಿಸಿಕೊಳ್ಳಬೇಕು. ಪ್ರತಿನಿತ್ಯ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಟೆಪ್ರೆಂಚರ್ ಚೆಕ್ ಮಾಡಬೇಕು. ಸಾಮಾಜಿಕ ಅಂತರ ಪಾಲನೆ ಮಾಡಬೇಕು. ಇತರೆ ವಿದ್ಯಾರ್ಥಿಗಳ ನೀರು, ಆಹಾರ ಶೇರ್ ಮಾಡದಂತೆ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ಇದನ್ನು ಓದಿ :- BMTC –KSRTC ಬಸ್ಸಿ ನಲ್ಲಿ ಪ್ರಯಾಣಿಸುವವರಿಗೆ ಮಾಸ್ಕ್ ಕಡ್ಡಾಯ – ಮಾಸ್ಕ್ ಇಲ್ಲ ಅಂದ್ರೆ ನೋ ಎಂಟ್ರಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!