ದೇಶದಲ್ಲಿ ಕೊರೊನಾ ಮತ್ತೊಮ್ಮೆ ತನ್ನ ಆಟವನ್ನು ಆರಂಭಿಸಿದೆ. ದಿನೇ ದಿನೇ ಕೊರೋನಾ ಸೋಂಕು ಹೆಚ್ಚಳವಾಗುತ್ತಿದೆ.
84 ದಿನಗಳ ಬಳಿಕ ದೇಶದಲ್ಲಿ 4 ಸಾವಿರಕ್ಕೂ ಹೆಚ್ಚು ಸೋಂಕು ಕಾಣಿಸಿಕೊಂಡಿದೆ. ಶುಕ್ರವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಯಲ್ಲಿ 4,041 ಕೊರೊನಾ ಪ್ರಕರಣ ದಾಖಲಾಗಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ. ಸಕ್ರಿಯ ಸೋಂಕಿತರ ಸಂಖ್ಯೆ 21,177ಕ್ಕೆ ಏರಿಕೆ ಕಂಡಿದೆ. 2,363 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದನ್ನೂ ಓದಿ : – ಕಾರು ಹಾಗೂ ವಾಹನದ ನಡುವೆ ಭೀಕರ ಅಪಘಾತ – ಸ್ಥಳದಲ್ಲೇ ಇಬ್ಬರು ಸಾವು
ಕೊರೊನಾ ಉಲ್ಬಣದಿಂದ ಎಚ್ಚೆತ್ತಿರುವ ಕೇಂದ್ರ ಸರ್ಕಾರ, ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ, ಮಹಾರಾಷ್ಟ್ರ ಸರ್ಕಾರಗಳಿಗೆ ಸೋಂಕು ನಿಯಂತ್ರಣಕ್ಕೆ ಕ್ರಮಕೈಗೊಳ್ಳುವಂತೆ ಸೂಚಿಸಿದೆ. ರಾಜ್ಯಗಳಲ್ಲಿ ಟೆಸ್ಟಿಂಗ್ ಹೆಚ್ಚಿಸಿ, ನಿಗದಿಪಡಿಸಿದ ಸ್ಯಾಂಪಲ್ ಜಿನೋಮ್ ಸೀಕ್ವೆನ್ಸಿಂಗ್ ನಡೆಸಬೇಕು. ಐಎಲ್ಇ, ಸಾರಿ ಪ್ರಕರಣಗಳ ಮೇಲೆ ನಿಗಾ ಇಡುವಂತೆ ಸೂಚಿಸಿದೆ.
ಇದನ್ನೂ ಓದಿ : – ಕಲಬುರಗಿ ಜಿಲ್ಲೆಯ ಕಮಲಾಪುರ ಬಳಿ ಖಾಸಗಿ ಬಸ್ಸು ಅಪಘಾತ- ಜೀವಂತ ದಹಿಸಿದ ಪ್ರಯಾಣಿಕರ ಸಂಖ್ಯೆ 7ಕ್ಕೇರಿಕೆ