ಬೆಂಗಳೂರಿನ ಲಾಲ್ ಬಾಗ್ ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಡೇಟ್ ಫಿಕ್ಸ್ ಆಗಿದೆ. ಜನವರಿ 20 ರಿಂದ 30ರವರೆಗೆ ಫಲಪುಷ್ಪ ಪ್ರದರ್ಶನ ನಡೆಸಲು ತೀರ್ಮಾನಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ ತಿಳಿಸಿದ್ದಾರೆ. 11 ದೇಶಗಳಿಂದ 69 ವಿವಿಧ ಹೂವುಗಳ ಪ್ರದರ್ಶನ ನಡೆಯಲಿದೆ. ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ 360 ಸ್ಪರ್ಧೆಗಳಿವೆ ಎಂದು ಸಚಿವ ಮುನಿರತ್ನ (MINURATHNA ) ಮಾಹಿತಿ ನೀಡಿದ್ದಾರೆ.
ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಗಾಜಿನ ಮನೆಯನ್ನು ಸಿದ್ಧಪಡಿಸಲಾಗುತ್ತಿದೆ. ಈ ಬಾರಿ ಅದ್ಧೂರಿಯಾಗಿ ಪ್ರದರ್ಶನ ನಡೆಸಲು ಲಾಲ್ ಬಾಗ್ ಗಾಜಿನ ಮನೆಯನ್ನು ರೆಡಿ ಮಾಡಲಾಗುತ್ತಿದೆ. ಈ ಬಾರಿಯ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಬೆಂಗಳೂರು ನಗರದ ಚಿತ್ರಣ ಕಂಗೊಳಿಸಲಿದೆ. 1,500 ವರ್ಷಗಳ ಬೆಂಗಳೂರು ನಗರದ ಇತಿಹಾಸ ಈ ವರ್ಷದ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದ ಥೀಮ್ ಆಗಿದೆ. ಜನವರಿ 20 ರಿಂದ 30ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ. ವರ್ಟಿಕಲ್ ಗಾರ್ಡನ್ ರೂಪದಲ್ಲಿ ಐತಿಹಾಸಿಕ ಬೆಂಗಳೂರು ಗಡಿ ಗೋಪುರ ಅನಾವರಣಗೊಳ್ಳಲಿದೆ. ಮೆಗಾ ಫ್ಲೋರಲ್ ಫ್ಲೋ ಪರಿಕಲ್ಪನೆ ಪುಷ್ಪ ಪಿರಾಮಿಡ್ಗಳು ಕಂಗೊಳಿಸಲಿವೆ. ಇದನ್ನು ಓದಿ :- ಮಹಿಳಾ ಯೋಜನೆಗಳ ಬಗ್ಗೆ ಜಾಹಿರಾತು ಪ್ರಕಟಿಸಿದ ಬಿಜೆಪಿ ಸರ್ಕಾರ
ಶಾಲಾ ಮಕ್ಕಳಿಗೆ ಉಚಿತ ಪ್ರದರ್ಶನ ಇರಲಿದೆ. ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ಜಪಾನಿಸ್ ಕಲೆಗಳ ಪ್ರದರ್ಶನ ಕೂಡಾ ಇರಲಿದೆ. 65 ಕ್ಕೂ ಹೆಚ್ಚು ವಾರ್ಷಿಕ ಸಸ್ಯಗಳ ಪ್ರದರ್ಶನ ಇರಲಿದೆ. ವಿದೇಶದಿಂದ ಬರುವ ಹೂವಗಳ ಪ್ರದರ್ಶನ ಇರಲಿದೆ. ಡಾರ್ಜಲಿಂಗ್ ನಿಂದ ಕೂಡಾ ಹೂವುಗಳು ಪ್ರದರ್ಶನಕ್ಕೆ ಬರ್ತಿವೆ. ಲಾಲ್ ಬಾಗ್ ನಲ್ಲಿ ಈ ಬಾರಿ ನಾಲ್ಕು ಗೇಟ್ಗಳಿಂದ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಸದ್ಯ ಫಲ ಪುಷ್ಪ ಪ್ರದರ್ಶನಕ್ಕಾಗಿಯೇ ಸುಮಾರು ಒಂದು ತಿಂಗಳಿನಿಂದ ನಿರಂತರವಾಗಿ ತೋಟಗಾರಿಕೆ ಇಲಾಖೆ ಕೆಲಸ ಮಾಡ್ತಿದೆ. ಎರಡರಿಂದ ಮೂರು ಕೋಟಿ ವೆಚ್ಚದಲ್ಲಿ ಫಲಪುಷ್ಪ ಪ್ರರ್ದಶನ ಮಾಡಲಾಗ್ತಿದೆ ಎಂದು ಸಚಿವ ಮುನಿರತ್ನ ತಿಳಿಸಿದ್ದಾರೆ.
ಇದನ್ನು ಓದಿ :- ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮಹಿಳೆಗೆ ಪ್ರತಿ ತಿಂಗಳು 2,000 ರೂ – ಪ್ರಿಯಾಂಕಾ ಗಾಂಧಿ ಘೋಷಣೆ