ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಮೊಘಲ್ ಗಾರ್ಡನ್ (Mughal Garden) ಹೆಸರನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಿದ್ದು, ಅಮೃತ ಉದ್ಯಾನ (Amruth Udyan) ವೆಂದು ಹೊಸದಾಗಿ ನಾಮಕರಣ ಮಾಡಿದೆ.
ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಹೆಸರು ಬದಲಾವಣೆ ಮಾಡಲಾಗಿದೆ. ಗಾರ್ಡನ್ ಹೆಸರು ಬದಲಾವಣೆ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ ಹೊರಡಿಸಿದ್ದಾರೆ. ಮೊಘಲರ ಆಡಳಿತ ಕಾಲದಲ್ಲಿ ನಿರ್ಮಿಸಲಾಗಿದ್ದ ಐತಿಹಾಸಿಕ ಗಾರ್ಡನ್ ಇದಾಗಿದೆ. ಇದನ್ನು ಓದಿ :-ತೆಲುಗು ನಟ ನಂದಮೂರಿ ತಾರಕ ರತ್ನ ಆರೋಗ್ಯ ಸ್ಥಿತಿ ಗಂಭೀರ
ರಾಷ್ಟ್ರಪತಿ ಭವನದ ಆವರಣದಲ್ಲಿರುವ ನವೀಕೃತ ಗಾರ್ಡನ್ ಅನ್ನು ರಾಷ್ಟ್ರ ಪತಿಗಳು ಭಾನುವಾರ ಉದ್ಘಾಟಿಸಲಿದ್ದು ಜನವರಿ 31ರಿಂದ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ದೊರೆಯಲಿದೆ. ಮಾರ್ಚ್ 31ರ ವರೆಗೆ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿರಲಿದೆ.
ಇದನ್ನು ಓದಿ :- ಕಾಶ್ಮೀರದ ಅವಂತಿಪೋರಾದಿಂದ ಭಾರತ್ ಜೋಡೋ ಯಾತ್ರೆ ಪುನರಾರಂಭ…!