ಅಯ್ಯಪ್ಪನ ಸನ್ನಿಧಾನಕ್ಕೂ ಕಾಲಿಟ್ಟ ಧರ್ಮ ದಂಗಲ್

ಅಯ್ಯಪ್ಪನ ದರ್ಶನಕ್ಕೂ ಮುನ್ನಾ ಮಸೀದಿ ಭೇಟಿ ಈಗ ಹಿಂದೂ ಸಂಘಟನೆಗಳ ಕಣ್ಣು ಕೆಂಪಗಾಗಿಸಿದೆ.

ಕೋಟ್ಯಂತರ ಭಕ್ತರನ್ನು ಹೊಂದಿರುವ ಶಬರಿಮಲೆ ಅಯ್ಯಪ್ಪ ( SHABARI MALE AYYAPPA ) ಸ್ವಾಮಿಯ ಸನ್ನಿಧಾನದಲ್ಲಿ ಈಗ ಧರ್ಮದಂಗಲ್ ಶುರುವಾಗಿದೆ. ಅಯ್ಯಪ್ಪನ ದರ್ಶನಕ್ಕೂ ಮುನ್ನಾ ಮಸೀದಿ ಭೇಟಿ ಈಗ ಹಿಂದೂ ಸಂಘಟನೆಗಳ ಕಣ್ಣು ಕೆಂಪಗಾಗಿಸಿದೆ. ಕರಾವಳಿ ಬಳಿಕ ಬೆಂಗಳೂರಿಗೆ ಕಾಲಿಟ್ಟಿರುವ ಧರ್ಮ ದಂಗಲ್ ಕಿಚ್ಚು ದಿನೇ ದಿನೇ ಹಲವು ದೇಗುಲಗಳನ್ನು ವ್ಯಾಪಿಸುತ್ತಿದೆ.

Ayyappa Temple, Sabarimala (Kerala) | Ayyappa Swamy Temple

ಅಯ್ಯಪ್ಪನ ಸನ್ನಿಧಾನದಲ್ಲಿ ಈಗ ಧರ್ಮ ದಂಗಲ್ ( DHARMA DANGAL ) ಸ್ವರೂಪ ಪಡೆದುಕೊಂಡಿದೆ. ಮಾಲಾಧಾರಿಗಳು ಅಯ್ಯಪ್ಪನ 18 ಮೆಟ್ಟಿಲು ಹತ್ತುವ ಮುನ್ನ ಅಲ್ಲಿನ ವಾವರ್ ಮಸೀದಿಗೂ ಭೇಟಿ ಕೊಡುತ್ತಾರೆ. ಆದರೆ ಈಗ ಅಯ್ಯಪ್ಪ ಭಕ್ತರ ಈ ಮಸೀದಿ ಭೇಟಿ ಧರ್ಮ ದಂಗಲ್ ಗೆ ಕಾರಣವಾಗಿದ್ದು, ಕೆಲ ಹಿಂದೂ ಸಂಘಟನೆಗಳು ಇದಕ್ಕೆ ಅಕ್ಷೇಪ ವ್ಯಕ್ತಪಡಿಸುತ್ತಿವೆ.
ಶಬರಿಮಲೆಯಲ್ಲಿ ದರ್ಶನಕ್ಕೂ ಮುನ್ನ ವಾವರ್ ಮಸೀದಿಗೆ ಭೇಟಿ ನೀಡೋದು ಕೆಲ ಭಕ್ತರ ವಾಡಿಕೆ. ಇದನ್ನೂ ಓದಿ : ತಲೆಬಾಗಿದ ರಾಮದಾಸ್ ಗೆ ಪ್ರತಾಪ್ ಸಿಂಹ ಟ್ವೀಟ್ ಮೂಲಕ ಧನ್ಯವಾದ

Cochin Guruvayur Tour| Sabarimala Tour Package from Coimbatore

ಅಯ್ಯಪ್ಪನ ದರ್ಶನಕ್ಕೂ ಮುನ್ನ ವಾವರ್ (VAVAR )  ಸ್ವಾಮಿಗೆ ಮೊದಲ ನಮನ ಸಲ್ಲಿಕೆ. ಇದು ಸೌಹಾರ್ದತೆಯ ಸಂಕೇತ ಎನ್ನಲಾಗುತ್ತೆ. ಹುಲಿ ಹಾಲು ತರಲು ಕಾಡಿಗೆ ಅಯ್ಯಪ್ಪ ಹೋದಾಗ ವಾವರ್ ಜೊತೆ ಕಾದಾಟ ನಡೆಸಲಾಗಿತ್ತು. ಕಾದಾಟದ ಬಳಿಕ ವಾವರ್ ಅಯ್ಯಪ್ಪನ ಸ್ನೇಹಿತನಾದ ಅನ್ನೋದು ಪ್ರತೀತಿ. ಹೀಗಾಗಿ ಇಲ್ಲಿ ಈಡುಗಾಯಿ ಒಡೆದು ಕಾಣಿಕೆ ಹಾಕೋದು ವಾಡಿಕೆಯಾಗಿದೆ. ಅಯ್ಯಪ್ಪನ ಭಕ್ತರನ್ನು ಕಾಡು ಪ್ರಾಣಿಗಳಿಂದ ವಾವರ್ ರಕ್ಷಿಸುತ್ತಾನೆ ಅನ್ನೋದು ನಂಬಿಕೆ ಇದೆ.

ಇದನ್ನೂ ಓದಿ : – ಮಹಾರಾಷ್ಟ್ರದಲ್ಲಿ ಕನ್ನಡಿಗರು ತಯಾರಿಸಿದ್ರು ಹೊಸ ಗಡಿ ಕರ್ನಾಟಕ ನಕ್ಷೆ – ಮಹಾರಾಷ್ಟ್ರ ಸರ್ಕಾರದ ನಿದ್ದೆಗೆಡಿಸಿದ ಕನ್ನಡಿಗರು

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!