ಹಳ್ಳಿ ಹಕ್ಕಿ ವಿಶ್ವನಾಥ್ ( VISHWANATH ) ಗೆ ಸಂಸದ ವಿ. ಶ್ರೀನಿವಾಸಪ್ರಸಾದ್ ( SRINIVAS PRASAD ) ಮಾರ್ಮಿಕವಾಗಿ ಕುಟುಕಿದ್ದಾರೆ. ನಾನು 1985ರಲ್ಲಿ ಕಾಂಗ್ರೆಸ್ ಟಿಕೆಟ್ ಕೊಡಿಸದಿದ್ರೆ ನಿನ್ನ ರಾಜಕೀಯ ಅಧ್ಯಾಯವೇ ಮುಗಿದು ಹೋಗುತ್ತಿತ್ತು. 1989ರಲ್ಲಿ ವೀರಪ್ಪ ಮೊಯಿಲಿ ಸಿಎಂ ಆದಾಗ ನಿನ್ನನ್ನು ಮಂತ್ರಿ ಮಾಡೋಕೆ ಹೋರಾಟ ಮಾಡಿದ್ಯಾರು? ಎಂದು ಪ್ರಶ್ನಿಸಿದ್ದಾರೆ.
ವಿಶ್ವನಾಥ್ ಚುನಾವಣೆ ವೇಳೆ 15 ಕೋಟಿ ತೆಗೊಂಡ್ರು. ಕೇವಲ 4 ರಿಂದ 5 ಕೋಟಿ ಖರ್ಚು ಮಾಡಿದ್ರು, 10 ಕೋಟಿ ಮನೆಗೆ ತಗೊಂಡು ಹೋದ್ರು. ಪೆಟ್ರೋಲ್ ಬಂಕ್, ಬಾರ್ ಮಾಡ್ಕೊಂಡಿದ್ದು ಯಾರಪ್ಪ ಎಂದು ಪ್ರಶ್ನಿಸಿದ್ದಾರೆ. ನಾನು ಜೆಡಿಎಸ್ ರಾಜ್ಯಾದ್ಯಕ್ಷ ಆದ್ರೂ ಕೆ.ಆರ್.ನಗರ ಪುರಸಭೆಗೆ ಒಂದೇ ಒಂದು ಟಿಕೆಟ್ ಕೊಟ್ಟಿಲ್ಲ. ನನಗೆ ಅವಮಾನ ಮಾಡಿದ್ರು ಅಂತಾ ನನ್ನ ಮನೆಗೆ ಬಂದೆ. ನಾನು ಯಡಿಯೂರಪ್ಪ ಅವ್ರತ್ರ ಒನ್ ಟು ಒನ್ ಮಾತನಾಡಿ ಎಂದೆ. ಇಬ್ಬರೂ ಮಾತನಾಡಿದ್ರು. ಇದನ್ನು ಓದಿ : – 100 ದಿನ ಪೂರೈಸಿದ ಭಾರತ್ ಜೋಡೋ ಯಾತ್ರೆ – ಇದೊಂದು ರಾಷ್ಟ್ರೀಯ ಜನಾಂದೋಲನ ಎಂದ ಮಲ್ಲಿಕಾರ್ಜುನ ಖರ್ಗೆ
ಯಡಿಯೂರಪ್ಪ ( yediurappa ) ಸೀನಿಯರ್ ಇದ್ದಾರೆ ಸೇರಿಸಿಕೊಳ್ಳೋಣ ಎಂದ್ರು. ನಾನು ಮಲಗಿರೋ ಹುಲಿನ ಎಬ್ಬಿಸಿ ಶಿಕಾರಿ ಮಾಡ್ತೀನಿ ಎಂದು ವಿಶ್ವನಾಥ್ ವಿರುದ್ಧ ಶ್ರೀನಿವಾಸ್ ಪ್ರಸಾದ್ ಕೆಂಡಾಮಂಡಲರಾಗಿದ್ದಾರೆ.ನಿನ್ಮ ತರ ಮಲಗಿರೋರ ಮೇಲೆ ಶಿಕಾರಿ ಮಾಡಲ್ಲ. ಎಲ್ಲೂ ಅಧಿಕಾರ ಸಿಕ್ತಾ ಇಲ್ಲ. ನೀನು ಎನು ಅಂತಾ ಎಲ್ಲರಿಗೂ ಗೊತ್ತು. ನೀನು ಕಾಂಗ್ರೆಸ್ ಹೋಗೋದಕ್ಕೆ ರೆಡಿಯಾಗಿದ್ಯಾ ? ಅವ್ರಿಗು ಗೊತ್ತು ನಿನ್ನ ಆಟ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಇದನ್ನು ಓದಿ : – ರಘುರಾಮ್ ರಾಜನ್ ಕಾಂಗ್ರೆಸ್ ಪಕ್ಷದ ಮುಂದಿನ ಮನಮೋಹನ್ ಸಿಂಗ್ ?