ಮಕ್ಕಳ ಶೂ, ಸಾಕ್ಸ್ ಬಗ್ಗೆ ಸಚಿವ ಬಿ.ಸಿ ನಾಗೇಶ್ (b.c nagesh) ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ಪ್ರತಿಕ್ರಿಯೆ ನೀಡಿದ್ದಾರೆ.
ಸಾಕ್ಸ್ ,ಶೂ ಕೊಡ್ತಿದ್ದವರು ನಾವು. ಬಡಮಕ್ಕಳಿಗೆ ಅನುಕೂಲ ಆಗಲಿ ಅಂತ ಕೊಡ್ತಿದ್ದೆವು. ಮಕ್ಕಳಲ್ಲಿ ಸಮಾನ ಮನೋಭಾವ ಇರಲಿ ಎಂದು ಕೊಡ್ತಿದ್ವಿ. ಬಿಜೆಪಿ (bjp) ಯವರು ನಿಲ್ಲಿಸೋಕೆ ಹೊರಟ್ರು. ನಾವು ಒತ್ತಾಯ ಮಾಡಿದ ಮೇಲೆ ಕೊಡ್ತೇವೆ ಅಂದ್ರು. ಶಾಲೆಗಳು ಶುರುವಾಗಿವೆ. ಶೂ ಯೂನಿ ಫಾರಂ ಕೊಡಬೇಕಿತ್ತು. ಆದರೆ ಇನ್ನೂ ಯಾವುದನ್ನೂ ಕೊಟ್ಟಿಲ್ಲ ಎಂದು ಸರ್ಕಾರದ ವಿರುದ್ದ ಸಿದ್ದರಾಮಯ್ಯ ಕಿಡಿಕಾರಿದ್ರು. ಇದನ್ನೂ ಓದಿ : – ನಾನು ಕೋಲು ಹಿಡಿದು ರಾಜಕಾರಣ ಮಾಡಲ್ಲ – ಸಿದ್ದರಾಮಯ್ಯ
ರಾಜ್ಯದಲ್ಲಿ ಮಳೆಯಿಂದ ಹಾನಿ ವಿಚಾರ
ಉಸ್ತುವಾರಿಗಳು ಜಿಲ್ಲೆಗೆ ಹೋಗ್ತಿಲ್ಲ. ಜನರ ಕಷ್ಟ ಸುಖಗಳನ್ನ ಕೇಳಬೇಕಲ್ವ. ಇಲ್ಲಿ ಬರಿ ಮೀಟಿಂಗ್ ಮಾಡಿದ್ರೆ ಸಾಕಾ? ಚೀಫ್ ಮಿನಿಸ್ಟರ್ ವಿಸಿಟ್ ಮಾಡಬೇಕು. ನರೇಂದ್ರ ಮೋದಿ (narendra modi) ಪರಿಹಾರ ಕೊಟ್ಟಿದ್ದಾರೇ ನ್ರೀ..? ಸಾವಿರಾರು ಕೋಟಿ ಕೊಟ್ಟಿದ್ದೇವೆ ಅಂತಾರಲ್ಲ. ಏನು ಕೊಟ್ಟಿದ್ದಾರೆ ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ರು.
ಇದನ್ನೂ ಓದಿ : – ಬೆಳಗಾವಿಯಲ್ಲಿ ಇನ್ನೂ 3 ದಿನ ಯಲ್ಲೋ ಅಲರ್ಟ್ – ಚಿಕ್ಕಮಗಳೂರು, ಕರಾವಳಿಯಲ್ಲಿ ಜನಜೀವನ ಅಸ್ತ ವ್ಯಸ್ತ