ಮಧ್ಯಪ್ರದೇಶದಲ್ಲಿ ರಾಹುಲ್ ಗಾಂಧಿ ( RAHUL GANDHI ) ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರ “ವೆಲ್ಕಂ” ಅಂತ ಹೇಳಿರುವ ಹೇಳಿಕೆಯು ಅವರು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳುತ್ತಾರೆಯೇ ಅನ್ನೋ ಅನುಮಾನಗಳನ್ನ ರಾಜಕೀಯ ವಲಯದಲ್ಲಿ ಹುಟ್ಟು ಹಾಕಿರುವುದಂತೂ ನಿಜ.
ಸಿಂಧಿಯಾ ಅವರ ಈ ಹೇಳಿಕೆ ಮತ್ತೆ ಕಾಂಗ್ರೆಸ್ ಪಾರ್ಟಿಗೆ ಮರಳುವ ಸೂಚನೆಯಾಗಿರಬಹುದು ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ವಕ್ತಾರರು ಹೇಳಿದ್ದಾರೆ. ಈಗಾಗಲೇ ಭರದಿಂದ ಶುರುವಾದ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯು ಬುಧವಾರ ಬೆಳಿಗ್ಗೆ ನೆರೆಯ ಮಹಾರಾಷ್ಟ್ರದಿಂದ ಮಧ್ಯಪ್ರದೇಶದ ಬುರ್ಹಾನ್ಪುರ್ ಜಿಲ್ಲೆಯ ಬೋದರ್ಲಿ ಗ್ರಾಮಕ್ಕೆ ತಲುಪಿತ್ತು. ಆಗ ಬಿಜೆಪಿ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಅವರು ನವೆಂಬರ್ 23 ರಂದು ನಡೆದ ಆ ಬೃಹತ್ ಮೆರವಣಿಗೆಯನ್ನು ಉಲ್ಲೇಖಿಸಿ, “ಮಧ್ಯಪ್ರದೇಶದಲ್ಲಿ ಎಲ್ಲರಿಗೂ ಸ್ವಾಗತವಿದೆ” ಎಂದು ಹೇಳಿದ್ದರು. ಇದನ್ನೂ ಓದಿ : –ಮೈಸೂರಿನ ವಿವಾದಿತ ಗುಂಬಜ್ ಬಸ್ ನಿಲ್ದಾಣ – ಮೂರರಲ್ಲಿ 2 ಗೋಪುರ ತೆರವು
ಕಾಂಗ್ರೆಸ್ ವಕ್ತಾರರು ಸಿಂಧಿಯಾ ಹೇಳಿಕೆ ಬಗ್ಗೆ ಹೇಳಿದ್ದೇನು?
ಇದು ‘ಘರ್ ವಾಪ್ಸಿ’ ಯ ಸೂಚನೆಯಾಗಬಹುದು” ಎಂದು ಕಾಂಗ್ರೆಸ್ ವಕ್ತಾರರಾದ ಮತ್ತು ಹಿಮಾಚಲ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷರಾದ ಕುಲದೀಪ್ ಸಿಂಗ್ ರಾಥೋಡ್ ಅವರು ಹೇಳಿದ್ದಾರೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಬಗ್ಗೆ ಜನರು ಅಸಮಾಧಾನಗೊಂಡಿರುವುದರಿಂದ ಹಿಮಾಚಲಪ್ರದೇಶ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅತ್ಯಧಿಕ ಮತದಾನವಾಗಿರುವುದು ಬದಲಾವಣೆಯ ಸ್ಪಷ್ಟ ಸೂಚನೆಯಾಗಿದೆ ಎಂದು ಪ್ರತಿಪಾದಿಸಿದ ಅವರು, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಸರ್ಕಾರವನ್ನು ರಚಿಸಲಿದೆ ಎಂದು ಹೇಳಿದರು.
ಇದನ್ನೂ ಓದಿ : – ಬೆಂಗಳೂರಿನ ರೆಸ್ಟೋರೆಂಟ್ ಒಳಗಡೆ “KGF” ನರಾಚಿ ಲೋಕ..!