ಕಳೆದ ಎರಡು ದಿನಗಳಿಂದ ಡಿಪೋಗಳಲ್ಲಿ ಡೀಸೆಲ್ ಕೊರತೆ ಎದುರಾಗಿದ್ದು, ಇಂದು ನಗರದಲ್ಲಿ ಬಿಎಂಟಿಸಿ (BMTC) ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಸಗಟು ಖರೀದಿ ದರ ಎಫೆಕ್ಟ್ನಿಂದ ಬಿಎಂಟಿಸಿ ಅಕ್ಷರಶಃ ತತ್ತರಿಸಿ ಹೋಗಿದ್ದು, ಚಿಲ್ಲರೆ ವ್ಯಾಪಾರಿಗಳಿಂದ ನಿಗಮ ಡೀಸೆಲ್ ಖರೀದಿಸುತ್ತಿತ್ತು.
ಆದರೆ ಮೂರು ದಿನದಿಂದ ಚಿಲ್ಲರೆ ವ್ಯಾಪಾರಿಗಳಿಂದಲೂ ಡೀಸೆಲ್ ಸಪ್ಲೈ ಆಗುತ್ತಿಲ್ಲ. ಹೀಗಾಗಿ ಬಿಎಂಟಿಸಿ ಡಿಪೋಗಳಲ್ಲಿ ಭಾರೀ ಡೀಸೆಲ್ (DISEL) ಕೊರತೆ ಎದುರಾಗಿದೆ. ಡೀಸೆಲ್ ಕೊರತೆ ಪರಿಣಾಮ ಇಂದು ಬೆಂಗಳೂರಿ(BANGALORE ) ನಲ್ಲಿ ಬಹುತೇಕ ಬಸ್ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಅಲ್ಲದೇ ಓಪನ್ ಮಾರುಕಟ್ಟೆಯಲ್ಲಿ ಡಿಸೇಲ್ ಖರೀದಿಸಲು ಬಿಎಂಟಿಸಿ ಚಿಂತನೆ ನಡೆಸುತ್ತಿದೆ. ಬಸ್ ಸಂಚಾರಕ್ಕೆ ದಕ್ಕೆ ಆಗುವುದನ್ನು ತಡೆಯಲು ಬಿಎಂಟಿಸಿ ಹರಸಾಹಸ ಪಡುತ್ತಿದ್ದು, ಖಾಸಗಿ ಬಂಕ್ ಗಳಲ್ಲಿ ಡೀಸಲ್ ಹಾಕಿಸಲು ಚಿಂತನೆ ನಡೆಸುತ್ತಿದ್ಯಾ ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ : – ಇಂದಿನಿಂದ SSLC ಪೂರಕ ಪರೀಕ್ಷೆ