ಸಮಂತಾ ( SAMANTHA ) ನಟನೆಯ ಯಶೋದಾ ( YASHODHA )ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಉತ್ತಮ ರೀತಿಯಲ್ಲೇ ಜನರು ಕೂಡ ಸಿನಿಮಾವನ್ನು ಸ್ವೀಕರಿಸಿದ್ದಾರೆ.
ಮೊದಲ ಬಾರಿಗೆ ಸಮಂತಾ ಕೂಡ ಆ ರೀತಿಯ ಪಾತ್ರ ಮಾಡಿದ್ದರಿಂದ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಅನಾರೋಗ್ಯದ ನಡುವೆಯೂ ಸಮಂತಾ ಈ ಸಿನಿಮಾಗೆ ಡಬ್ಬಿಂಗ್ ಮಾಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಇದೆಲ್ಲದರ ಪರಿಣಾಮ ಬಾಕ್ಸ್ ಆಫೀಸಿನಲ್ಲೂ ಚಿತ್ರ ಸದ್ದು ಮಾಡುತ್ತಿದೆ. ಇದನ್ನೂ ಓದಿ : – ಸಿಎಂ ಕ್ಷೇತ್ರದಲ್ಲಿ 51 ಜನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿದ್ದಾರೆ – ಡಿ.ಕೆ. ಸುರೇಶ್
ಸಿನಿಮಾ ರಿಲೀಸ್ ಆದ ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಈ ನಡುವೆ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಈ ಚಿತ್ರವನ್ನು ಒಟಿಟಿಗೆ ರಿಲೀಸ್ ಮಾಡಬಾರದು ಎಂದು ಇವಾ ಆಸ್ಪತ್ರೆಯ ಮ್ಯಾನೇಜ್ ಮೆಂಟ್ ಕೋರ್ಟ್ ಮೆಟ್ಟಿಲು ಏರಿದೆ. ಇವಾ ಮಾತುಗಳನ್ನು ಆಲಿಸಿರುವ ಕೋರ್ಟ್ ಕೂಡ ಆಸ್ಪತ್ರೆಯ ಪರವಾಗಿಯೇ ಆದೇಶ ನೀಡಿದೆ.
ಒಟಿಟಿ ( OTT ) ಯಲ್ಲಿ ಈ ಸಿನಿಮಾವನ್ನು ಪ್ರದರ್ಶನ ಮಾಡದಂತೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಸಿನಿಮಾದಲ್ಲಿ ಸಮಂತಾ ಬಾಡಿಗೆ ತಾಯಿ ಪಾತ್ರ ಮಾಡಿದ್ದಾರೆ. ಹಾಗಾಗಿ ಸಿನಿಮಾದಲ್ಲಿ ಇವಾ ಆಸ್ಪತ್ರೆಯನ್ನು ತೋರಿಸಲಾಗಿದೆ. ಅದು ಆಸ್ಪತ್ರೆಯ ಘನತೆಗೆ ಧಕ್ಕೆ ಬರುವ ರೀತಿಯಲ್ಲಿ ಆಸ್ಪತ್ರೆಯನ್ನು ತೋರಿಸಲಾಗಿದೆ ಎನ್ನುವುದು ಮ್ಯಾನೇಜ್ ಮೆಂಟ್ ಆರೋಪ. ಆಸ್ಪತ್ರೆಯನ್ನು ಕೆಟ್ಟ ರೀತಿಯಲ್ಲಿ ತೋರಿಸಿದ್ದರಿಂದ ತಮ್ಮ ಆಸ್ಪತ್ರೆಯ ಮೇಲೆ ಅದು ಪರಿಣಾಮ ಬೀರುತ್ತದೆ ಎಂದು ಕೋರ್ಟ್ ಮೆಟ್ಟಿಲು ಏರಿತ್ತು ಮ್ಯಾನೇಜ್ ಮೆಂಟ್.
ಇದನ್ನೂ ಓದಿ : – ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್ ಗೆ ಕಪ್ಪು ಮಸಿ ಬಳಿದ ಮರಾಠಿ ಭಾಷಿಕ ಪುಂಡರು..!