ಮುಂಬೈಗೆ ಬಂದು ನನ್ನೊಂದಿಗೆ ಮಾತನಾಡಿ – ಬಂಡಾಯ ಶಿವಸೇನಾ ಶಾಸಕರಿಗೆ ಉದ್ದವ್ ಠಾಕ್ರೆ ಭಾವನಾತ್ಮಕ ಮನವಿ

ಮಹಾರಾಷ್ಟ್ರದಲ್ಲಿ ಮಹಾ ಅಘಾಡಿ ಸರ್ಕಾರ ಪತನದ ಅಂಚಿಗೆ ತಲುಪಿದೆ. ಈ ನಡುವೆ ಮುಂಬೈಗೆ ವಾಪಸ್ಸಾಗಿ ನನ್ನೊಂದಿಗೆ ಮಾತನಾಡಿ ಎಂದು ಗುವಾಹಟಿ (GUVAHATI)ಯಲ್ಲಿರುವ ತಮ್ಮ ಪಕ್ಷದ ಬಂಡಾಯ ಶಾಸಕರಿಗೆ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ (Uddav Thackeray) ಮನವಿ ಮಾಡಿದ್ದಾರೆ.

ಇದು ಮತ್ತಷ್ಟು ವಿಳಂಬವಾಗಬಾರದು. ನೀವು ಮುಂಬೈಗೆ ವಾಪಸ್ಸಾಗಿ ನನ್ನೊಂದಿಗೆ ಕುಳಿತು ಮಾತನಾಡುವುದರೊಂದಿಗೆ ಸಾರ್ವಜನಿಕರಲ್ಲಿ ಮೂಡಿರುವ ಗೊಂದಲವನ್ನು ತೊಡೆದುಹಾಕಬೇಕೆಂದು ಠಾಕ್ರೆ ಮನವಿ ಮಾಡಿದ್ದಾರೆ. ನೀವೂ ವಾಪಾಸ್ಸಾಗಿ ನನನ್ನು ಭೇಟಿಯಾದರೆ, ಕೆಲವೊಂದು ಪರ್ಯಾಯ ಆಯ್ಕೆಗಳನ್ನು ಹುಡುಕಬಹುದು. ಇದನ್ನೂ ಓದಿ : –  ಪ್ರಧಾನಿ ಮೋದಿ ಇದ್ದಲ್ಲಿಗೆ ಬಂದು ಕೈ ಕುಲುಕಿ ಮಾತನಾಡಿಸಿದ ಅಮೆರಿಕ ಅಧ್ಯಕ್ಷ – ವಿಡಿಯೋ ವೈರಲ್

ಪಕ್ಷದ ಅಧ್ಯಕ್ಷನಾಗಿ ಮತ್ತು ಕುಟುಂಬದ ಮುಖ್ಯಸ್ಥನಾಗಿ ಈಗಲೂ ನಿಮ್ಮ ಬಗ್ಗೆ ಕಾಳಜಿಯಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ. ಗುವಾಹಟಿಯಲ್ಲಿರುವ ಬಂಡಾಯ ಶಾಸಕರ ಗುಂಪಿನಲ್ಲಿರುವ ಕೆಲ ಶಾಸಕರು ಶಿವಸೇನಾ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : – ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇಂದು ದೆಹಲಿಗೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!