ಭಾರತದ ಟೆನಿಸ್ ತಾರೆ (Tennis player) ಸಾನಿಯಾ ಮಿರ್ಜಾ (Sania mirza) ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ (Shoaib malik) ಅವರ ವೈಯಕ್ತಿಕ ಬದುಕಿನಲ್ಲಿ ಬಿರುಕು ಉಂಟಾಗಿದ್ದು, ಈ ದಂಪತಿಗಳು ವಿಚ್ಛೇದನ ಪಡೆಯಲ್ಲಿದ್ದಾರೆ ಎಂಬ ಸುದ್ದಿ ಎರಡೂ ದೇಶಗಳಲ್ಲೂ ಸಖತ್ ಚರ್ಚೆ ಹುಟ್ಟುಹಾಕಿದೆ.
ಅಲ್ಲದೆ ಎರಡೂ ದೇಶಗಳ ಮಾಧ್ಯಮಗಳು ಈ ಬಗ್ಗೆ ವರದಿ ಮಾಡುತ್ತಿವೆ. ಆದರೆ ಈ ನಡುವೆ ಈ ಜೋಡಿಗೆ ಸಂಬಂಧಿಸಿದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ವಿಚ್ಛೇದನದ ಸುದ್ದಿಯ ನಡುವೆ, ಈ ಜೋಡಿಯ ಹೊಸ ಶೋ ಪಾಕಿಸ್ತಾನದಲ್ಲಿ ಪ್ರಸಾರವಾಗಲಿದೆ. ಈ ಕಾರ್ಯಕ್ರಮದ ಹೆಸರು ‘ಮಿರ್ಜಾ ಮಲಿಕ್ ಶೋ’ ಆಗಿದ್ದು, ಇದರಲ್ಲಿ ದಂಪತಿ ಇಬ್ಬರು ಕಾಣಿಸಿಕೊಳ್ಳಲಿದ್ದಾರೆ. ಈ ಶೋ ಪಾಕಿಸ್ತಾನದ ಉರ್ದುಫ್ಲಿಕ್ಸ್ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ನಲ್ಲಿ ಪ್ರಸಾರವಾಗಲಿದೆ. ಈ ಶೋ ಬಗ್ಗೆ ಸುದ್ದಿ ಹರಿದಾಡಲಾರಂಭಿಸಿದ ನಂತರ ಅಭಿಮಾನಿಗಳು ದಂಪತಿಗಳಿಬ್ಬರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಇದನ್ನೂ ಓದಿ : – ನಂದಿನಿ ಹಾಲು, ಮೊಸರಿನ ದರ 3 ರೂ. ಏರಿಕೆ
ಈ ಕಾರ್ಯಕ್ರಮದ ಟಿ.ಆರ್.ಪಿ ಹೆಚ್ಚಿಸುವ ಸಲುವಾಗಿ ಉದ್ದೇಶಪೂರ್ವಕವಾಗಿಯೇ ಈ ದಂಪತಿಗಳು ವಿಚ್ಛೇದನದ ನಾಟಕವನ್ನಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಆದರೆ ಸಾನಿಯಾ ಸದ್ಯ ಪಾಕಿಸ್ತಾನದಲ್ಲಿ ಇಲ್ಲ, ಹಾಗಾಗಿ ಕಾರ್ಯಕ್ರಮದ ಚಿತ್ರೀಕರಣ ಈಗಾಗಲೇ ಮುಗಿದಿದೆ ಎಂಬುದು ಸ್ಪಷ್ಟವಾಗಿದೆ.
ಇದನ್ನೂ ಓದಿ : – ಮಹೇಶ್ ಬಾಬು ತಂದೆ ನಟ ಕೃಷ್ಣ ಆರೋಗ್ಯದಲ್ಲಿ ಏರುಪೇರು