ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್ (Dk.shivakumar) ಗೆ ಪಕ್ಷ ಮುನ್ನಡೆಸಲು ಕಷ್ಟವಾಗ್ತಿದೆಯಾ? ಡಿಕೆಶಿ ಒದ್ದಾಡುತ್ತಿದ್ದಾರಾ ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ತುಮಕೂರಿನಲ್ಲಿ ಕೆಪಿಸಿಸಿ ಮಾಜಿ ಅಧ್ಯಕ್ಷ, ಮಾಜಿ ಡಿಸಿಎಂ ಜಿ.ಪರಮೇಶ್ವರ್ (G.Parameshwar) ನೀಡಿರೋ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಈ ರಾಜ್ಯದ ಸಮರ್ಥ ನಾಯಕ ಎಂದು ಕಾಂಗ್ರೆಸ್ ಪಕ್ಷ ನನ್ನನ್ನು ಅಧ್ಯಕರನ್ನಾಗಿ ಮಾಡಿತ್ತು.
ಸತತ 8 ವರ್ಷ ಪಕ್ಷದ ಅಧ್ಯಕ್ಷನಾಗಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೆ. ಅಂತಹ ದೊಡ್ಡ ಜವಾಬ್ದಾರಿ ಅದು. ನಮ್ಮ ಶಿವಕುಮಾರಣ್ಣನೇ ಬೆಳಗ್ಗೆ ಎದ್ರೆ ಒದ್ದಾಡ್ತಾನೆ. ನಾವು ಜೊತೆಗಿದ್ದಿವಪ್ಪಾ ನೀನು ಧೈರ್ಯವಾಗಿರು ಅಂತಿವಿ ನಾವು. ಅಷ್ಟು ದೊಡ್ಡ ಜವಾಬ್ದಾರಿ ಅದು, ಅಂತಹ ಜವಾಬ್ದಾರಿ ನಿರ್ವಹಿಸಿ ಬಂದ ನನ್ನ ವಿರುದ್ಧ ಕೆಲವರು ಬಂದಿದ್ದಾರೆ. ಮೀಸೆ ತಿರುವಿಕೊಂಡು ಕೆಲವರು ಬಂದಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿಯ ಟಿಕೆಟ್ ಆಕಾಂಕ್ಷಿ ಅನಿಲ್ ಕುಮಾರ್ (Anil kumar) ಗೆ ಟಾಂಗ್ ಕೊಟ್ಟಿದ್ದಾರೆ. ತಾನು ನಿರ್ವಹಿಸಿ ಬಂದ ಜವಾಬ್ದಾರಿಯನ್ನು ಜನತೆಗೆ ತಿಳಿಸುವ ವೇಳೆ ಡಿಕೆಶಿ ಹೆಸರನ್ನು ಜಿ.ಪರಮೇಶ್ವರ್ ಪ್ರಸ್ತಾವನೆ ಮಾಡಿದ್ದಾರೆ.
ಇದನ್ನು ಓದಿ : – ಬಿಜೆಪಿ ತೊರೆಯೋ ನಿರ್ಧಾರಕ್ಕೆ ಬಂದ್ರಾ ಹೆಚ್. ವಿಶ್ವನಾಥ್ ?