ಹಿಮಾಚಲ ಪ್ರದೇಶ (Himachal pradesh) ಚುನಾವಣೆಯಲ್ಲಿ ಬಿಜೆಪಿ (BJP) ಹಿನ್ನಡೆ ಎದುರಿಸುವುದಕ್ಕೆ ನಿರುದ್ಯೋಗ (Unemployement) ಪ್ರಮುಖ ಅಂಶವಾಗಿತ್ತು. ಅಕ್ಟೋಬರ್ ವೇಳೆಗೆ ನಿರುದ್ಯೋಗ ಸಮಸ್ಯೆ ಶೇ.8.6 ರಷ್ಟಿತ್ತು. ಬಿಜೆಪಿ ಈ ಬಾರಿ ಹಿಮಾಚಲ ಪ್ರದೇಶದಲ್ಲಿ ಚುನಾವಣೆಯನ್ನು ಪ್ರಧಾನಿ ಮೋದಿ (Modi) ಕೇಂದ್ರಿತವನ್ನಾಗಿಸಿತ್ತು. ಬಿಜೆಪಿಗೆ ನೀಡುವ ಪ್ರತಿ ಮತ ಮೋದಿಗೇ ಸೇರುತ್ತದೆ ಎಂಬುದು ಚುನಾವಣೆಯಲ್ಲಿ ಬಿಜೆಪಿ ಬಳಸಿದ ಅಸ್ತ್ರವಾಗಿತ್ತು.
ಮತ್ತೊಂದು ಪ್ರಮುಖ ಅಂಶವೆಂದರೆ 1985 ರ ನಂತರ ಹಿಮಾಚಲ ಪ್ರದೇಶದಲ್ಲಿ ಯಾವುದೇ ಪಕ್ಷ ಸತತ 2 ನೇ ಬಾರಿಗೆ ಅಧಿಕಾರಕ್ಕೆ ಬಂದಿಲ್ಲ. ಬಿಜೆಪಿಯ ಅಧಿಕಾರದ ಕನಸನ್ನು ಸುಟ್ಟ ಅಗ್ನಿಪಥ (Angipath) ಯೋಜನೆ. ಅತಿ ಹೆಚ್ಚು ಪರಮವೀರ ಚಕ್ರ ಪದಕ ಯೋಧರನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆ ಪಡೆದಿರುವ ಹಿಮಾಚಲ ಪ್ರದೇಶದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆಗೆ ಬಹಳ ವಿರೋಧ ಎದುರಾಗಿತ್ತು . ಬೆಲೆ ಏರಿಕೆಯಿಂದಲೂ ರೋಸಿ ಹೋಗಿದ್ದ ಜನತೆ ಕಾಂಗ್ರೆಸ್ ಗೆ ಅಧಿಕಾರ ನೀಡಿದ್ದಾರೆ. ಇದನ್ನು ಓದಿ : – ಪರಿಷತ್ ಸಭಾಪತಿ ಚುನಾವಣೆಗೆ ದಿನಾಂಕ ನಿಗದಿ
ಕಾಂಗ್ರೆಸ್ ಆದ ಪ್ಲಸ್ ಪಾಯಿಂಟ್
ಹಿಮಾಚಲದಲ್ಲಿ ಅಧಿಕಾರಕ್ಕೆ ಬಂದರೆ, ಹಳೆಯ ಪಿಂಚಣಿ (Pension) ಯೋಜನೆಯನ್ನು ಮರುಸ್ಥಾಪಿಸುವ ಭರವಸೆಯನ್ನ ಕಾಂಗ್ರೆಸ್ ನೀಡಿತ್ತು. ಹಿಮಾಚಲ ಪ್ರದೇಶದಲ್ಲಿ ಸೇಬು ಪ್ರಮುಖ ವಾಣಿಜ್ಯ ಬೆಳೆ. ಬೆಲೆ ಇಳಿಕೆಯಿಂದ ಸೇಬು ಬೆಳೆಗಾರರ ಆಕ್ರೋಶ ಮುಗಿಲು ಮುಟ್ಟಿತ್ತು.
ಬಿಜೆಪಿಯ ಬಂಡಾಯ, ಚುನಾವಣೆ ಎದುರಿಸಲು 21 ಮಂದಿ ಹೊರಬಂದಿದ್ದೂ ಆಡಳಿತ ಪಕ್ಷಕ್ಕೆ ಮುಳುವಾಯಿತು.
ಬುಡಕಟ್ಟು ಜಿಲ್ಲೆಗಳಲ್ಲಿ ಹೊಸ ಜಲವಿದ್ಯುತ್ ಯೋಜನೆಗಳ ವಿರುದ್ಧ ನೋ ಎಂದರೆ ನೋ ಎಂಬ ಅಭಿಯಾನ ನಡೆದಿದ್ದವು. ಬಿಜೆಪಿ ವಿರುದ್ಧ ಜನರ ಅಭಿಪ್ರಾಯ ಒಗ್ಗೂಡುವುದಕ್ಕೆ ಇದೂ ಒಂದು ಕಾರಣವಾಗಿದೆ. ಪ್ರಿಯಾಂಕ ಗಾಂಧಿ ವರ್ಚಸ್ಸು ಹಾಗೂ ರಾಜೀವ್ ಶುಕ್ಲಾ ಅವರ ಕಾರ್ಯ ತಂತ್ರ ಕೂಡ ಇಲ್ಲಿ ವರ್ಕೌಟ್ ಆಗಿದೆ.
ಇದನ್ನು ಓದಿ : – ಹಿಮಾಚಲ ಪ್ರದೇಶದ ಸಿಎಂ ಜೈರಾಮ್ ಠಾಕೂರ್ ರಾಜೀನಾಮೆ