Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!State News

ಈ ರಾಜ್ಯಕ್ಕೆ ಟಿಪ್ಪು ಸಂತಾನ ಬೇಕಾ? ಹನುಮ, ಶ್ರೀರಾಮನ ಭಕ್ತರು ಬೇಕಾ….?- ನಳೀನ್ ಕುಮಾರ್ ಕಟೀಲ್

ಈ ರಾಜ್ಯಕ್ಕೆ ಟಿಪ್ಪು ಸಂತಾನ ಬೇಕಾ ….? ಅಥವಾ ಹನುಮ, ಶ್ರೀರಾಮನ ಭಕ್ತರು ಬೇಕಾ….? ಅಂತಾ ಯೋಚನೆ ಮಾಡಿ ಎಂದು ವಿಜಯ ಸಂಕಲ್ಪ ಸಮಾವೇಶದಲ್ಲಿ ನಳೀನ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.

ಈ ರಾಜ್ಯಕ್ಕೆ ಟಿಪ್ಪು ಸಂತಾನ ಬೇಕಾ ….? ಅಥವಾ ಹನುಮ, ಶ್ರೀರಾಮನ ಭಕ್ತರು ಬೇಕಾ….? ಅಂತಾ ಯೋಚನೆ ಮಾಡಿ ಎಂದು ವಿಜಯ ಸಂಕಲ್ಪ ಸಮಾವೇಶದಲ್ಲಿ ನಳೀನ ಕುಮಾರ್ ಕಟೀಲ್(nalinkumarkatil)ಪ್ರಶ್ನಿಸಿದ್ದಾರೆ. ನಮಗೆ ಹನುಮಮಾಲೆ, ದತ್ತಮಾಲೆ ಮೇಲೆ ನಂಬಿಕೆ ಇದೆ. ಕಾಂಗ್ರೆಸ್(congress) ಗೆ ಟಿಪ್ಪು ಮಾಲೆ ಮೇಲೆ ನಂಬಿಕೆ ಇದೆ. ರಾಜ್ಯದ ಬೇರೆಡೆಯಂತೆ ಯಲಬುರ್ಗಾದಲ್ಲೂ ಕಾಂಗ್ರೆಸ್ ಮುಕ್ತ ಅಗುತ್ತೆ

ಹುಲಿಯಾ ಕಾಡಿಗೆ ಹೋಗುತ್ತೆ, ಬಂಡೆ ಒಡೆದು ಹೋಗುತ್ತೆ ಎಂದು ವಿಪಕ್ಷನಾಯಕ ಸಿದ್ದರಾಮಯ್ಯ(siddaramaiah) ಮತ್ತು ಡಿಕೆ ಶಿವಕುಮಾರ್(dkshivakumar) ವಿರುದ್ದ ವ್ಯಂಗ್ಯವಾಡಿದ್ದಾರೆ. ನಮ್ಮದು ಆದರ್ಶ ಹೊಂದಿರೋ ಪಾರ್ಟಿ. ಒಂದು ಕಾಲವಿತ್ತು ಇಂದಿರಾ ಗಾಂಧಿ ಇದ್ದಾಗ ಕಾಂಗ್ರೆಸ್ ನಿಂದ ವಿದ್ಯುತ್ ಕಂಬ ಏಲೆಕ್ಷನ್ ಗೆ ನಿಂತ್ರು ಗೆಲ್ತಿತ್ತು. ಆದ್ರೆ ಇವತ್ತು ಅವರ ರಾಷ್ಟ್ರೀಯ ನಾಯಕರಿಗೆ ಕ್ಷೇತವಿಲ್ಲದೇ ಕೇರಳಕ್ಕೆ ಹೋಗಿದ್ದಾರೆ. ಕರ್ನಾಟಕದಲ್ಲಿ ಸಿದ್ದರಾಮಯ್ಯಗೂ ಕ್ಷೇತ್ರವಿಲ್ಲ. ಕ್ಷೇತ್ರವೇ ಇಲ್ಲದ, ಕ್ಷೇತ್ರ ಹುಡುಕಾಡುತ್ತಿರುವ ಸಿಎಂ ಶಟ್೯ ಹೊಲಿಸಿ ಇಟ್ಟಿದ್ದಾನೆ. ನನ್ನ ಅಪ್ಪನ ಆಣೆಗೂ ಸಿದ್ದರಾಮಣ್ಣ ಮುಂದೆ ಸಿಎಂ ಆಗೋದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಆವತ್ತು ಸೋನಿಯಾ ಗಾಂಧಿ ಕಾಲಿಡಿದು ಸಿಎಂ ಆಗಿದ್ರಿ. ದೇವೆಗೌಡರ ಹತ್ತಿರ ಬೆಳೆದು, ಅವರಿಗೆ ತುಳಿದ್ರಲ್ಲಾ ಸಿದ್ರಾಮಣ್ಣ.ಎಂದು ವ್ಯಂಗ್ಯ ಮಾಡಿದ್ದಾರೆ. ನಂಗೆ ಸಿದ್ರಾಮಣ್ಣ ಜೋಕರ್ ಅಂತಾರೆ, ಅದ್ರೆ ನೀವು ಬ್ರೋಕರ್ ಆಗಿಯೇ ಸಿಎಂ ಆದವರು. ಈ ನಡುವೆ ಕತ್ತೆ ಕಥೆ ಹೇಳಿದ ಕಟೀಲ್ ಕೊರೊನಾ ಲಸಿಕೆ ತಗೊಂಡ್ರೆ ಮಕ್ಕಳು ಆಗಲ್ಲ ಅಂತ ಕಾಂಗ್ರೆಸ್ ನವರು ಹೇಳಿದ್ರು. ಕಾಂಗ್ರೆಸ್ ಭಯೋತ್ಪಾದಕರಿಗೆ ಸಪೋಟ್೯ ಮಾಡೋ ಪಕ್ಷ. ಇಂದಿರಾ ಗಾಂಧಿಯೇ ಭಯೋತ್ಪಾದಕರಿಗೆ ಪ್ರೇರಣೆ ನೀಡಿದ್ದು. ಹೀಗಾಗೇ ಭಯೋತ್ಪಾದಕರ ಪಾರ್ಟಿ ಕಾಂಗ್ರೆಸ್ ಎಂದು ಕಿಡಿಕಾರಿದ್ದಾರೆ. ಡಿಕೆಶಿಗೆ ಎರಡು ಕುಕ್ಕರ್ ಮೇಲೆ ಬಹಳ ಪ್ರೀತಿ. ಒಂದು ಬೆಳಗಾವಿ ಕುಕ್ಕರ್, ಇನ್ನೊಂದು ಮಂಗಳೂರು ಕುಕ್ಕರ್ ಎಂದು ಲೇವಡಿ ಮಾಡಿದ್ದಾರೆ. ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಬೆಳಗಾವಿ ಕುಕ್ಕರ್ ಎಂದು ಹೇಳಿದ್ರು.
ಡಿಕೆಶಿ ಕುಕ್ಕರ್ ಸ್ಫೋಟ ಮಾಡಿದವರನ್ನ ಅಮಾಯಕ ಅಂದ್ರು ಎಂದು ಲೇವಡಿ ಮಾಡಿದ್ರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ರಸ್ತೆಯಲ್ಲೇ ಹಿಂದೂಗಳ ಹತ್ಯೆ ಆಗುತ್ತೆ. ನಿಮಗೆ ರಾಷ್ಟ್ರ ಚಿಂತಕರು ಬೇಕಾ, ರಾಷ್ಟ್ರ ವಿರೋದಿಗಳು ಬೇಕಾ? ರಾಷ್ಟ್ರ ಭಕ್ತ ಮುಸ್ಲಿಂರನ್ನ ರಾಷ್ಟ್ರಪತಿ ಮಾಡಿದ್ದು ಬಿಜೆಪಿ. ಡಿಕೆಶಿ ತಿಹಾರ್ ಜೈಲಿಗೆ ಹೋಗಿದ್ದು ಯಾಕೆ ಎಂದು ಪ್ರಶ್ನಿಸಿದ ಕಟೀಲ್ ಎಂತಾ ಸಂತಾನ ರೀ ಇವರದ್ದು? ಇವರದ್ದು ಕಳ್ಳರ ಸಂತಾನ ಎಂದು ಡಿಕೆಶಿ ಕುಟುಂಬವನ್ನ ಕಟೀಲ್ ಹೀಯಾಳಿಸಿದ್ದಾರೆ. ಇದನ್ನೂ ಓದಿ : – ಏರ್ ಬಸ್ ನಿಂದ 250 ವಿಮಾನ ಖರೀದಿ, ಏರ್ ಇಂಡಿಯಾ ಮಹತ್ವದ ಡೀಲ್!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!