ಬಿಜೆಪಿ (BJP) ಅಧಿಕಾರಕ್ಕೆ ಬಂದರೆ ಬ್ರಾಹ್ಮಣರಿಗೇ ಸಿಎಂ ಪಟ್ಟ ನೀಡಲಾಗುತ್ತದೆ. ಪ್ರಹ್ಲಾದ್ ಜೋಶಿಗೆ ಪಟ್ಟ ಕಟ್ಟಲು ಸಂಘ ಪರಿವಾರ ಪ್ಲಾನ್ ಮಾಡಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ (KUMARASWAMY) ಹೇಳಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (PRAHALAD JOSHI) ಯವರು ಜೆಡಿಎಸ್ ಪಂಚರತ್ನ ಯಾತ್ರೆ (PANCHARATNA YATRE) ಯನ್ನು ಟೀಕಿಸಿದ್ದರು. ಇದು ಪಂಚರತ್ನ ಅಲ್ಲ, ನವಗ್ರಹ ಯಾತ್ರೆ ಎಂದು ಹೇಳಿದ್ದರು. ಜೋಶಿ ಹೇಳಿಕೆಯಿಂದ ಸಿಡಿದೆದ್ದ ಹೆಚ್.ಡಿ ಕುಮಾರಸ್ವಾಮಿ ಇದೀಗ ವಾಗ್ದಾಳಿ ನಡೆಸಿದ್ದಾರೆ.
ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣರಿಗೆ ಮುಖ್ಯಮಂತ್ರಿ ಪಟ್ಟ. ಆರ್ ಎಸ್ ಎಸ್ (RSS ) ಸಭೆಯಲ್ಲಿ ಪ್ರಹ್ಲಾದ್ ಜೋಶಿ ಹೆಸರು ಪ್ರಸ್ತಾಪವಾಗಿದೆ. ಬ್ರಾಹ್ಮಣರಲ್ಲಿ ಎರಡು ಮೂರು ವಿಧಗಳಿವೆ. ಪ್ರಹ್ಲಾದ್ ಜೋಶಿ ನಮ್ಮ ಹಳೆಯ ಬ್ರಾಹ್ಮಣರಲ್ಲ. ಅವರು ದೇಶ ಒಡೆಯುವವರು, ಕಟ್ಟುವವರಲ್ಲ. ಅವರು ಮಾರಾಠ ಪೇಶ್ವೆ ಕಾಲದ ಬ್ರಾಹ್ಮಣರು. ಅವರು ಶೃಂಗೇರಿ ಮಠ ಒಡೆದ ವರ್ಗದವರು. ಗಾಂಧಿ ಕೊಂದ ಬ್ರಾಹ್ಮಣ (BRAHMIN) ರು ಇವರು. ಬಿಜೆಪಿಯ ಹುನ್ನಾರ ಆರ್ ಎಸ್ ಎಸ್ ಕುತಂತ್ರಕ್ಕೆ ಬಲಿಯಾಗಬೇಡಿ. ಇವರು ದೇಶವನ್ನ ಹಾಳು ಮಾಡ್ತಾರೆ. ದೆಹಲಿಯಲ್ಲಿ ಎಂಟು ಜನ ಉಪ ಮುಖ್ಯಮಂತ್ರಿ ಮಾಡುವ ಸಭೆ ಮಾಡಿದ್ದಾರೆ. ಅದು ನನ್ನ ಗಮನಕ್ಕೆ ಬಂದಿದೆ. ಎಂಟು ಜನ ಯಾರು ಅಂತ ಹೆಸರು ಬೇಕಾದ್ರೂ ಕೊಡ್ತೀನಿ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನುಓದಿ :- ಬಿ.ಎಸ್ ಯಡಿಯೂರಪ್ಪ ಇಲ್ಲದೇ ಸಿದ್ದರಾಮಯ್ಯ ಗೆಲ್ಲೋಕೆ ಆಗಲ್ಲ – ಸಿ.ಎಂ ಇಬ್ರಾಹಿಂ