ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 131ನೇ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ನಾಡಿನ ಅನೇಕ ಗಣ್ಯರು ಟ್ವೀಟ್ ಮೂಲಕ ಗೌರವ ಸಲ್ಲಿಸಿದ್ದಾರೆ.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಗೆ ನನ್ನ ನಮನಗಳು. ಭಾರತದ ಪ್ರಗತಿಗಾಗಿ ಅವರು ಅಪಾರ ಸೇವೆ ಸಲ್ಲಿಸಿದ್ದಾರೆ. ನಮ್ಮ ದೇಶಕ್ಕಾಗಿ ಅವರು ಕಂಡ ಕನಸನ್ನು ನಾವು ನನಸಾಗಿಸಲು ಬದ್ಧರಾಗುವ ದಿನ ಬಂದಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಅಂಬೇಡ್ಕರ್ ಜಯಂತಿಯಂದು ಬಾಬಾಸಾಹೇಬರಿಗೆ ನಮನ – ರಾಷ್ಟ್ರಪತಿ ಕೋವಿಂದ್
ಸಾಮಾಜಿಕ ನ್ಯಾಯದ ಪ್ರಬಲ ವಕೀಲರಾದ ಬಾಬಾಸಾಹೇಬರು ಸಂವಿಧಾನದ ಶಿಲ್ಪಿಯಾಗಿ ಆಧುನಿಕ ಭಾರತಕ್ಕೆ ಅಡಿಪಾಯ ಹಾಕಿದರು. ‘ಮೊದಲು ಭಾರತೀಯ, ನಂತರವೂ ಭಾರತೀಯ ಮತ್ತು ಕೊನೆಯಲ್ಲೂ ಭಾರತೀಯ’ ಎಂಬ ಅವರ ಆದರ್ಶಗಳನ್ನು ಅನುಸರಿಸಿ, ಎಲ್ಲರನ್ನೂ ಒಳಗೊಳ್ಳುವ ಸಮಾಜವನ್ನು ನಿರ್ಮಿಸುವಲ್ಲಿ ನಮ್ಮ ಪಾತ್ರವನ್ನು ಮಾಡೋಣ ಎಂದು ರಾಷ್ಟ್ರಪತಿ ಕೋವಿಂದ್ ಟ್ವೀಟ್ ಮಾಡಿದ್ದಾರೆ.
ಬಾಬಾಸಾಹೇಬ್ ಅಂಬೇಡ್ಕರ್ ಅವರ 131 ನೇ ಜಯಂತಿಗೆ ನಮನಗಳು -ರಾಹುಲ್ ಗಾಂಧಿ
ಭಾರತಕ್ಕೆ ಬಲವಾದ ಶಕ್ತಿಯ ಆಧಾರ ಸ್ತಂಭವಾದ ನಮ್ಮ ಪವಿತ್ರ ಸಂವಿಧಾನವನ್ನು ನೀಡಿದ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ನನ್ನ ನಮನಗಳು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮುಖಾಂತರ ಗೌರವ ಸಲ್ಲಿಸಿದ್ದಾರೆ.
ಇದನ್ನು ಓದಿ : – ತೆರೆಗೆ ಅಪ್ಪಳಿಸಿದ ಕೆಜಿಎಫ್-2 – 5 ಭಾಷೆಗಳಲ್ಲಿಯೂ ಭರ್ಜರಿ ಓಪನಿಂಗ್