ಸಂಸತ್ ನಲ್ಲಿ ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು (DRUPADI MURMU) ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಕೊಂಡಾಡಿದ್ದಾರೆ.
#BudgetSession | President Droupadi Murmu and Vice President Jagdeep Dhankhar greet PM Narendra Modi, Congress Parliamentary Party Chairperson Sonia Gandhi and other MPs after concluding the President's Address to the joint sitting of the Parliament. pic.twitter.com/CdnWvaTik3
— ANI (@ANI) January 31, 2023
ಪ್ರಸ್ತುತ ಭಾರತ ಸುಸ್ಥಿರ, ನಿರ್ಭೀತ, ನಿರ್ಣಾಯಕ ಸರ್ಕಾರವನ್ನು ಹೊಂದಿದೆ. ಪ್ರತಿಯೊಬ್ಬ ಭಾರತೀಯನು ಆತ್ಮವಿಶ್ವಾಸದ ಉತ್ತುಂಗದಲ್ಲಿದ್ದಾನೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ. ಸಂಸತ್ ನ ಜಂಟಿ ಸದನ ಉದ್ದೇಶಿಸಿ ಮಾತನಾಡಿದ ಅವರು, ಈ ಸರ್ಕಾರ ಶೀಘ್ರದಲ್ಲೇ 9 ವರ್ಷ ಪೂರ್ಣಗೊಳಿಸುತ್ತದೆ. ಭಾರತ ಬದಲಾಗಿದ್ದು, ಪ್ರಪಂಚದ ಸಮಸ್ಯೆಗಳಿಗೆ ಭಾರತ ಪರಿಹಾರ ನೀಡುತ್ತಿದೆ ಎಂದು ಕೇಂದ್ರ ಸರ್ಕಾರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಇದನ್ನು ಓದಿ :- ಜಾರಕಿಹೊಳಿ ಆರೋಪಗಳಿಗೆ ಅಧ್ಯಕ್ಷರೇ ಉತ್ತರ ಕೊಡುತ್ತಾರೆ – ಎಂ.ಬಿ ಪಾಟೀಲ್
President Droupadi Murmu departs from the Parliament for Rashtrapati Bhavan. She addressed the joint sitting of the Parliament today, as the #BudgetSession commenced. pic.twitter.com/NNI3sRkeiH
— ANI (@ANI) January 31, 2023
ಗಡಿ ನಿಯಂತ್ರಣ ರೇಖೆಯಿಂದ ಗಡಿ ವಾಸ್ತವ ನಿಯಂತ್ರಣ ರೇಖೆಯವರೆಗೂ ಭದ್ರತೆಯನ್ನು ಪ್ರಸ್ತಾಪಿಸಿದ ಮುರ್ಮು, ಆರ್ಟಿಕಲ್ 370 ಅನ್ನು ರದ್ದುಪಡಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹಿಂಪಡೆಯಲಾಗಿದೆ. ತ್ರಿವಳಿ ತಲಾಖ್ ಪದ್ಧತಿಯನ್ನು ಕೂಡ ರದ್ದುಗೊಳಿಸಿದೆ ಎಂದು ಸರ್ಕಾರದ ಸಾಧನೆಯನ್ನು ಕೊಂಡಾಡಿದ್ರು. ಭಾರತ ಸ್ಥಿರ, ನಿರ್ಭೀತ ಮತ್ತು ನಿರ್ಣಾಯಕ ಸರ್ಕಾರವನ್ನು ಹೊಂದಿದೆ. ನನ್ನ ಸರ್ಕಾರ ಯಾವಾಗಲೂ ದೇಶದ ಹಿತಾಸಕ್ತಿಯನ್ನು ಮುಖ್ಯವಾಗಿರಿಸಿಕೊಂಡಿದ್ದು, ದೇಶದ ಹಿತಾಸಕ್ತಿಗನುಗುಣವಾಗಿ ತನ್ನ ನೀತಿ ಮತ್ತು ಕಾರ್ಯತಂತ್ರವನ್ನು ಸಂಪೂರ್ಣವಾಗಿ ಬದಲಾವಣೆ ಮಾಡುವ ಇಚ್ಛೆಯನ್ನು ತೋರಿಸಿದೆ.
India in better position than other countries: President Murmu
Read @ANI Story | https://t.co/50X5GDL5NR#DroupadiMurmu #Budget2023 #BudgetSession #Parliament #UnionBudget2023 pic.twitter.com/YEki6gipau
— ANI Digital (@ani_digital) January 31, 2023
ಈ ಸರ್ಕಾರ ತಂದ ದೊಡ್ಡ ಬದಲಾವಣೆಯೆಂದರೆ ಪ್ರತಿಯೊಬ್ಬ ಭಾರತೀಯನಲ್ಲೂ ಆತ್ಮವಿಶ್ವಾಸ ಹೆಚ್ಚಿಸಿರುವುದು ಮತ್ತು ಪ್ರಪಂಚ ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಸರ್ಜಿಕಲ್ ಸ್ಟ್ರೈಕ್ಗಳಿಂದ ಭಯೋತ್ಪಾದನೆ ನಿಗ್ರಹ ಮಾಡಿದ್ದು, ಎಲ್ಒಸಿ ಯಿಂದ ಎಲ್ಎಸಿ ಮೇಲಿನ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಆರ್ಟಿಕಲ್ 370 ಮತ್ತು ತ್ರಿವಳಿ ತಲಾಖ್ ರದ್ದುಪಡಿಸುವ ಮೂಲಕ ನಿರ್ಣಾಯಕ ಸರ್ಕಾರ ಎಂಬುದನ್ನು ನನ್ನ ಸರ್ಕಾರ ಸಾಬೀತುಪಡಿಸಿದೆ ಎಂದು ಹೇಳಿದ್ರು.
ಇದನ್ನು ಓದಿ :- ಇಂದಿನಿಂದ ಸಂಸತ್ತಿನ ಬಜೆಟ್ ಕಲಾಪ ಆರಂಭ – ನಾಳೆ ಕೇಂದ್ರ ಬಜೆಟ್..!