ಅಫ್ಘಾನಿಸ್ತಾನ( Afghanistan )ದಲ್ಲಿ ಇಂದು ಸಂಭವಿಸಿದ ಭಯಾನಕ ಭೂಕಂಪನ( Earthquake ) ದಲ್ಲಿ ಕನಿಷ್ಠ255 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ದೇಶದ ಪೂರ್ವ ಭಾಗದಲ್ಲಿ ರಿಕ್ಟರ್ ಮಾಪಕದಲ್ಲಿ 6.1ರ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕ್ಟಿಕಾ ಪ್ರಾಂತ್ಯದಲ್ಲಿ ಅತಿ ಹೆಚ್ಚು ಸಾವು-ನೋವುಗಳು ಸಂಭವಿಸಿವೆ. ಈ ಭಾಗದಲ್ಲಿ ಕನಿಷ್ಠ 100 ಮಂದಿ ಮೃತಪಟ್ಟಿದ್ದು, 500 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ ಎಂದು ತಾಲಿಬಾನ್ ಆಡಳಿತದಲ್ಲಿನ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ ಮೊಹಮ್ಮದ್ ನಸೀಮ್ ಹಕ್ಕಾನಿ ತಿಳಿಸಿದ್ದಾರೆ. ಸಾವಿನ ಸಂಖ್ಯೆ 250ಕ್ಕೂ ಹೆಚ್ಚಿದ್ದು, ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಬಿಬಿಸಿ ವರದಿ ಮಾಡಿದೆ. ಇದನ್ನೂ ಓದಿ : – 40 ಶಿವಸೇನೆ ಶಾಸಕರು ನನ್ನ ಜೊತೆಗೇ ಇದ್ದು ಯಾರೂ ಪಕ್ಷ ತೊರೆಯುತ್ತಿಲ್ಲ- ಏಕನಾಥ್ ಶಿಂಧೆ
ಪೂರ್ವದ ಪ್ರಾಂತ್ಯಗಳಾದ ನಂಗರ್ಹಾರ್ ಮತ್ತು ಖೋಸ್ಟ್ ಗಳಲ್ಲಿ ಕೂಡ ಅಪಾರ ಪ್ರಮಾಣದ ಸಾವು ನೋವುಗಳು ವರದಿಯಾಗಿವೆ. ಆಗ್ನೇಯ ಭಾಗದ ನಗರ ಖೋಸ್ಟ್ನಿಂದ ಸುಮಾರು 44 ಕಿ.ಮೀ ದೂರದಲ್ಲಿ ಹಾಗೂ 51 ಕಿ.ಮೀ ಆಳದಲ್ಲಿ ಭೂಕಂಪನ ಉಂಟಾಗಿದೆ. ಖೋಸ್ಟ್ನಲ್ಲಿ ಕನಿಷ್ಠ 25 ಮಂದಿ ಬಲಿಯಾಗಿದ್ದಾರೆ. ನಂಗರ್ಹಾರ್ ಪ್ರಾಂತ್ಯದಲ್ಲಿ ಕೂಡ ಐವರು ಮೃತಪಟ್ಟಿರುವುದು ವರದಿಯಾಗಿದೆ. ಅಪಾರ ಪ್ರಮಾಣದ ಕಟ್ಟಡಗಳು ಧರೆಗುರುಳಿವೆ.
ಇದನ್ನೂ ಓದಿ : – ರಾಷ್ಟ್ರಪತಿ ಚುನಾವಣೆ -ಬಿಜೆಪಿ ಅಭ್ಯರ್ಥಿಯಾಗಿ ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಆಯ್ಕೆ-ಒಡಿಶಾದ ದೇಗುಲದಲ್ಲಿ ಕಸಗುಡಿಸಿದ ಮುರ್ಮು