ADGP ಅಮೃತ್ ಪಾಲ್ ಮತ್ತು DYSP ಶಾಂತ್ ಕುಮಾರ್ ಮನೆ ಮೇಲೆ ED ದಾಳಿ

PSI ಹಗರಣದ ಪ್ರಮುಖ ಆರೋಪಿಗಳ ಮನೆ ಮೇಲೆ ED ಅಧಿಕಾರಿಗಳು ಇಂದು ದಾಳಿ ಮಾಡಿದ್ದಾರೆ. ADGP ಅಮೃತ್ ಪಾಲ್ (Amruth paul) ಹಾಗೂ DYSP ಶಾಂತಕುಮಾರ್ (Shanthakumar) ಮನೆ ಮೇಲೆ ದಾಳಿ ನಡೆದಿವೆ. ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

PSI ಹಗರಣದ ಪ್ರಮುಖ ಆರೋಪಿಗಳ ಮನೆ ಮೇಲೆ ED ಅಧಿಕಾರಿಗಳು ಇಂದು ದಾಳಿ ಮಾಡಿದ್ದಾರೆ. ADGP ಅಮೃತ್ ಪಾಲ್ (Amruth paul) ಹಾಗೂ DYSP ಶಾಂತಕುಮಾರ್ (Shanthakumar) ಮನೆ ಮೇಲೆ ದಾಳಿ ನಡೆದಿವೆ. ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಅದರಂತೆ ED ಅಧಿಕಾರಿಗಳು ಇಂದು 11 ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ED ಅಧಿಕಾರಿಗಳ ತಂಡವು ಸಹಕಾರನಗರದ ಅಮೃತ್ ಪಾಲ್ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ. ಇನ್ನು ಶಾಂತಕುಮಾರ್ ಮನೆ ಪೊಲೀಸ್ ಕ್ವಾರ್ಟರ್ಸ್ ನಲ್ಲಿದೆ. ಮನೆ ಬಾಗಿಲ ಮೇಲೆ ಶಾಂತಕುಮಾರ್ ಎಂಬ ನಾಮಫಲಕವಿದೆ.
ಅಕ್ರಮ ಹಣ ವರ್ಗಾವಣೆ ಹಿನ್ನೆಲೆ ಕಳೆದ ಆಗಸ್ಟ್ ನಲ್ಲಿ ಪ್ರಕರಣ ದಾಖಲಾಗಿತ್ತು. ಮತ್ತೊಬ್ಬ ಆರೋಪಿ ಶ್ರೀಧರ್ ಮನೆಯಲ್ಲಿ 1.5 ಕೋಟಿ ಹಣ ಪತ್ತೆಯಾಗಿತ್ತು. ಇದುವರೆಗೆ ಪ್ರಕರಣ ಸಂಬಂಧ 4 ಕೋಟಿಗೂ ಹೆಚ್ಚು ಹಣ ವಶಕ್ಕೆ ಪಡೆಯಲಾಗಿತ್ತು. ED ಅಧಿಕಾರಿಗಳು ಮನಿ ಲ್ಯಾಂಡ್ರಿಂಗ್ ಕೇಸ್ ಸಂಬಂಧಿಸಿದಂತೆ ಐದು ಗಂಟೆಗಳಿಂದ ನಿರಂತರವಾಗಿ ಬ್ಯಾಂಕ್ ದಾಖಲೆಗಳ ಪರಿಶೀಲನೆ ನಡೆಸ್ತಿದ್ದಾರೆ. ಐವರು ED ಅಧಿಕಾರಿಗಳ ತಂಡದಿಂದ ದಾಳಿ, ಪರಿಶೀಲನೆ ನಡೆದಿದೆ.

ಇದನ್ನೂ ಓದಿ : –  ದೊಡ್ಮನೆ ಕುಡಿ ಯುವ ಸಿನಿಮಾದ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಸಂತೋಷ್ ಆನಂದ್ ರಾಮ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!