ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆಗೆ (Mallikarjun Kharge) ಇಡಿ (ED) ಶಾಕ್ ನೀಡಿದೆ. ನ್ಯಾಷನಲ್ ಹೆರಾಲ್ಡ್ (National Herald) ಪ್ರಕರಣದಲ್ಲಿ ಇ ಡಿ ಅಧಿಕಾರಿಗಳು ಖರ್ಗೆಯನ್ನ ವಿಚಾರಣೆಗೊಳಪಡಿಸಿದ್ದಾರೆ. ಆಸ್ಕರ್ ಫರ್ನಾಂಡಿಸ್ ಈ ಹಿಂದೆ ಜವಾಹರಲಾಲ್ ನೆಹರು ಟ್ರಸ್ಟ್ ಗೆ ಅಧ್ಯಕ್ಷರಾಗಿದ್ದರು. ಫರ್ನಾಂಡಿಸ್ ನಿಧನ ನಂತರ ಖರ್ಗೆ ಟ್ರಸ್ಟ್ ಗೆ ಅಧ್ಯಕ್ಷ ಆಗಿದ್ದರು. National Herald ವಿರುದ್ಧ ED ಈ ಹಿಂದೆಯೇ ಈ ಪ್ರಕರಣ ದಾಖಲಿಸಿತ್ತು. ಇದೀಗ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ನೋಟಿಸ್ ನೀಡಲಾಗಿದೆ. ನ್ಯಾಷನಲ್ ಹೆರಾಲ್ಡ್ (National herald) ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA)ಯಡಿ ತನಿಖೆಗೆ ಪೂರಕವಾದ ಕೆಲವು ಮಾಹಿತಿಗಳನ್ನು ಪಡೆದುಕೊಳ್ಳುವ ಸಲುವಾಗಿ ಖರ್ಗೆ ಹೇಳಿಕೆಯನ್ನು ದಾಖಲು ಮಾಡಲಾಗಿದೆ.
2011ರ ಫೆಬ್ರವರಿ 26ರಂದು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ನಿಂದ ಷೇರುಗಳ ಖರೀದಿ ವಿಚಾರದಲ್ಲಿ ವಿವಾದ ಸೃಷ್ಟಿಯಾಗಿತ್ತು. ಕಾಂಗ್ರೆಸ್ ಒಡೆತನದ ನ್ಯಾಷನಲ್ ಹೆರಾಲ್ಡ್‌ನಲ್ಲಿ ಅಕ್ರಮ ಹಣ ವರ್ಗಾವಣೆಯ ವಹಿವಾಟು ನಡೆದಿದೆ ಎಂಬ ಆರೋಪದಡಿ ಗಾಂಧಿ ಕುಟುಂಬದ ವಿರುದ್ಧ ಹಲವು ವರ್ಷಗಳಿಂದ ತನಿಖೆ ನಡೆಯುತ್ತಿದೆ.
0 86 Less than a minute