ಚಿಕ್ಕಮಗಳೂರಿ( chikkamagaluru ) ನಲ್ಲಿ ಗೋ ಹತ್ಯೆ ತಡೆಯುವ ನಿಟ್ಟಿನಲ್ಲಿ ಹೊಸ ಪ್ರಯೋಗಕ್ಕೆ ನಗರಸಭೆ ಮುಂದಾಗಿದೆ. ಗೋ ಹತ್ಯೆ, ಗೋ ಮಾಂಸ ಮಾರಾಟ ಮಾಡುತ್ತಿದ್ದ ಮನೆಯ ಮೇಲೆ ನಗರಸಭೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಗೋಹತ್ಯೆ ಮಾಡುತ್ತಿದ್ದ ಮನೆಯ ವಿದ್ಯುತ್, ನೀರಿನ ಸಂಪರ್ಕ ಬಂದ್ ಮಾಡಿದ್ದಾರೆ. ಮನೆಯ ದಾಖಲೆಗಳನ್ನ ರದ್ದು ಮಾಡಿ, ನಗರಸಭೆ ಆಸ್ತಿ ಎಂದು ಪರಿವರ್ತನೆ ಮಾಡಲು ಸಿದ್ದತೆ ನಡೆಸಿದ್ದಾರೆ. ಈ ಮೂಲಕ ಉತ್ತರ ಪ್ರದೇಶದ ಯೋಗಿ ಮಾದರಿಯ ಆಡಳಿತಕ್ಕೆ ಚಿಕ್ಕಮಗಳೂರು ನಗರಸಭೆ ಮುಂದಾಗಿದೆ. ಇದನ್ನೂ ಓದಿ : – ವಿಕಿಪೀಡಿಯಾ ಪ್ರಕಾರ ನಿಮ್ಮ ಜನ್ಮವರ್ಷ 1947. ಹುಟ್ಟಿದ ಕೂಡಲೇ ಪಂಚೆ ಕಟ್ಟಿ ಸ್ವಾತಂತ್ಯ ಸಂಗ್ರಾಮಕ್ಕೆ ಧುಮುಕಿದರಾ ಮಿಸ್ಟರ್ ಸಿದ್ದರಾಮಯ್ಯ? – ಸಿದ್ದು ವಿರುದ್ದ ಕಿಡಿಕಾರಿದ ಹೆಚ್.ಡಿ.ಕೆ
ಚಿಕ್ಕಮಗಳೂರು ಪೊಲೀಸರು ಹಾಗೂ ನಗರಸಭೆಯ ಅಧಿಕಾರಿಗಳು ದಾಳಿ ನಡೆಸಿ ಗೋಮಾಂಸ ವಶಪಡಿಸಿಕೊಂಡಿದ್ದಾರೆ. ಚಿಕ್ಕಮಗಳೂರು ನಗರಸಭೆಯಿಂದ ನಿರಂತರವಾಗಿ ಗೋಮಾಂಸ ಅಡ್ಡೆಗಳ ಮೇಲೆ ದಾಳಿ ನಡೆಯುತ್ತಿದೆ.
ಇದನ್ನೂ ಓದಿ : – ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ – ಮತ್ತೆ ಇಬ್ಬರ ಬಂಧನ