ಇಂದು ಕೂಡ ಬೆಂಗಳೂರಿ ( BANGALORE )ನ ಹಲವೆಡೆ ಮಳೆಯಾಗಲಿದ್ದು, ನಾಳೆಯಿಂದ ಮಳೆಯ ಅಬ್ಬರ ಕ್ಷೀಣಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶನಿವಾರ ಮುಂಜಾನೆ ತಮಿಳುನಾಡಿನ ಕರಾವಳಿಯನ್ನು ದಾಟಿದ ಮಾಂಡೌಸ್ ಚಂಡಮಾರುತದ ಪ್ರಭಾವದಿಂದ ಬೆಂಗಳೂರು ನಗರದಲ್ಲಿ ಶೀತ ವಾತಾವರಣ ಮುಂದುವರೆದಿದೆ.
ಹವಾಮಾನ ಇಲಾಖೆಯು ಇಂದು ಬೆಂಗಳೂರಿನಲ್ಲಿ ಹಗುರದಿಂದ ಸಾಧಾರಣ ಮಳೆಯ ಮುನ್ಸೂಚನೆ ನೀಡಿದೆ. ಅಕ್ಟೋಬರ್ ಆರಂಭದಿಂದ ಬೆಂಗಳೂರಿನಲ್ಲಿ 457.2 ಮಿ.ಮೀ ಮಳೆಯಾಗಿದೆ. ಡಿಸೆಂಬರ್ನಲ್ಲಿ ನಗರದಲ್ಲಿ 80 ಮಿ.ಮೀ ಗಿಂತ ಹೆಚ್ಚು ಮಳೆ ದಾಖಲಾಗಿದ್ದು, ಡಿಸೆಂಬರ್ 11ರಂದು ಅತಿ ಹೆಚ್ಚು ಮಳೆಯಾಗಿದೆ. ಇದನ್ನು ಓದಿ : – ಕರ್ನಾಟಕದಾದ್ಯಂತ ಇಂದಿನಿಂದ ಅಸ್ತಿತ್ವಕ್ಕೆ ಬರಲಿರುವ ಹೊಸ ಆರೋಗ್ಯ ಕೇಂದ್ರಗಳು
ಬೆಂಗಳೂರು ಈಗಾಗಲೇ ಅಕ್ಟೋಬರ್ ವೇಳೆಗೆ ಅತಿ ಹೆಚ್ಚು ಮಳೆಯಾದ ವರ್ಷ ಎಂಬ ದಾಖಲೆಯನ್ನು ನಿರ್ಮಿಸಿದೆ. ಕಳೆದ ವಾರ ನವೆಂಬರ್ ವೇಳೆಗೆ ನಗರದಲ್ಲಿ ಸುಮಾರು 1,849 ಮಿಮೀ ಮಳೆಯಾಗಿದೆ. ಈಶಾನ್ಯ ಮಾನ್ಸೂನ್ ಋತುವಿನಲ್ಲಿ ಉತ್ತಮ ಮಳೆಯಾಗುವುದರಿಂದ ಡಿಸೆಂಬರ್ ಅಂತ್ಯದ ವೇಳೆಗೆ ಒಟ್ಟು ಮಳೆಯು 2,000 ಮಿಮೀ ತಲುಪುವ ನಿರೀಕ್ಷೆಯಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ( udupi ) ಉತ್ತರ ಕರ್ನಾಟಕದ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಹಾವೇರಿ, ಗದಗ ಮತ್ತು ಬಳ್ಳಾರಿ ( BALLARI ) ಯಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಇದರ ಜೊತೆಗೆ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲೂ ಮಳೆಯಾಗಲಿದೆ.
ಇದನ್ನು ಓದಿ : – ಕೊನೆಗೂ ಚಿತ್ರದುರ್ಗದ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಿಸಿ ಸರ್ಕಾರ ಆದೇಶ