ಶಾಸಕರ ಬಂಡಾಯದಿಂದ ಸರ್ಕಾರ ಪತನದ ಭೀತಿಗೆ ಸಿಲುಕಿರುವ ಶಿವಸೇನೆ 5 ಗಂಟೆಗೆ ಸಭೆ ಕರೆದಿದೆ. ಈ ಸಭೆಗೆ ಕಡ್ಡಾಯವಾಗಿ ಪಕ್ಷದ ಎಲ್ಲ ಶಾಸಕರೂ ಹಾಜರಾಗಬೇಕು ಎಂದು ಸೂಚನೆ ನೀಡಿದೆ. ಒಂದು ವೇಳೆ ಗೈರಾದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಸಚಿವ ಏಕನಾಥ್ ಶಿಂದೆ ನೇತೃತ್ವದಲ್ಲಿ ಪಕ್ಷದ ಅನೇಕ ಶಾಸಕರು ಬಂಡಾಯವೆದ್ದಿದ್ದು ಅವರಿಗೆ ಎಚ್ಚರಿಕೆ ನೀಡಲಾಗಿದೆ.
ವಾಟ್ಸಾಪ್, ಇ-ಮೇಲ್ ಮತ್ತು ಎಸ್ಎಂಎಸ್ಗಳ ಮೂಲಕ ಪಕ್ಷದ ಎಲ್ಲ ಶಾಸಕರಿಗೂ ಶಿವಸೇನಾ ಪತ್ರ ರವಾನಿಸಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಅಧಿಕೃತ ನಿವಾಸ ವರ್ಷಾದಲ್ಲಿ ಶಾಸಕರು ಹಾಜರಾಗುವಂತೆ ಸೂಚಿಸಲಾಗಿದೆ. ಕೋವಿಡ್ 19 ಸೋಂಕಿಗೆ ಒಳಗಾಗಿರುವ ಸಿಎಂ ಉದ್ಧವ್ ಠಾಕ್ರೆ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯ ಅಧ್ಯಕ್ಷತೆ ವಹಿಸುವ ಸಾಧ್ಯತೆ ಇದೆ. ಇದನ್ನೂ ಓದಿ : – ಮಹಾ ರಾಜಕೀಯ ಬಿಕ್ಕಟ್ಟು, ಸಿಎಂ, ರಾಜ್ಯಪಾಲರಿಗೆ ಕೊರೊನಾ ಧೃಢ – ಕುತೂಹಲ ಕೆರಳಿಸಿದ ಸಂಪುಟ ಸಭೆ
“ನೀವು ಸಂಜೆ 5 ಗಂಟೆಯ ಸಭೆಗೆ ಹಾಜರಾಗದೆ ಹೋದರೆ, ನೀವು ಪಕ್ಷವನ್ನು ತೊರೆಯುವ ಉದ್ದೇಶ ಹೊಂದಿದ್ದೀರಿ ಎಂದು ಭಾವಿಸಲಾಗುತ್ತದೆ. ಮತ್ತು ನಿಮ್ಮ ಸದಸ್ಯತ್ವವು ಕಾನೂನಿನ ಅಡಿಯಲ್ಲಿ ರದ್ದುಗೊಳ್ಳಲು ಅರ್ಹವಾಗಿದೆ” ಎಂದು ಪತ್ರದಲ್ಲಿ ಖಡಕ್ಕಾಗಿ ಹೇಳಲಾಗಿದೆ. ಜೂನ್ 21ರಂದು ಭುಗಿಲೆದ್ದ ಮಹಾರಾಷ್ಟ್ರ ರಾಜಕೀಯ ನಾಟಕದ ಕೇಂದ್ರಬಿಂದು ಈಗ ಗುವಾಹಟಿಗೆ ಸ್ಥಳಾಂತರಗೊಂಡಿದೆ. ಶಿವಸೇನೆಯ ಪ್ರಬಲ ವ್ಯಕ್ತಿ, ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಮೊದಲಿಗೆ ತಂಗಿದ್ದ ಸೂರತ್‌ನ ಲೆ ಮೆರಿಡಿಯನ್ ಹೋಟೆಲ್‌ನಿಂದ ಮಧ್ಯರಾತ್ರಿ ಗುವಾಹಟಿಗೆ ಬಂಡಾಯ ಶಾಸಕರೊಂದಿಗೆ ತೆರಳಿದ್ದಾರೆ.
ಇದನ್ನೂ ಓದಿ : – ಅಮೆರಿಕಾದಲ್ಲಿ ತೆಲಂಗಾಣದ ಸಾಫ್ಟ್ ವೇರ್ ಉದ್ಯೋಗಿಗೆ ಗುಂಡಿಕ್ಕಿ ಹತ್ಯೆ!