ರಾಜ್ಯಕ್ಕೆ ಬರುವ ಕಾರ್ಯಕ್ರಮ ಇರಲಿಲ್ಲ. ಭಾರತ್ ಜೋಡೊ ( BHARATH JODO ) ಯಾತ್ರೆಯಲ್ಲಿ ಭಾಗಿಯಾಗಬೇಕು ಬಂದೆ. ಬಳ್ಳಾರಿಯಲ್ಲಿ ಸಮಾವೇಶ ಯಶಸ್ವಿಯಾಯಿತು ಎಂದು ಎಐಸಿಸಿ ಅಧ್ಯಕ್ಷ ಸ್ಥಾನದ ಸ್ಪರ್ಧಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ಆರ್ಟಿಕಲ್ಸ್ 371 ಜೇ ಕಲಂ ಜಾರಿ ಮಾಡಿಸಿದ್ದೇವೆ. 380 ಸಂಸದ ಬೆಂಬಲ ಬೇಕಿತ್ತು. ಸೋನಿಯಾ ಗಾಂಧಿ ಅವರು ಸಪೋರ್ಟ್ ನಿಂದ 371 ಕಲಂ ಜಾರಿ ಆಗಿದೆ. ಆದ್ದರಿಂದ ಬಳ್ಳಾರಿ ಸಮಾವೇಶದಲ್ಲಿ ಭಾಗಿಯಾಗಿದ್ದೆ.
ನಾನು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಆಗಿ ನಿಂತಿದ್ದೇನೆ. ಕಾರಣ ಏನು ಅಂದ್ರೆ ಗಾಂಧಿ ಕುಟುಂಬ ದಿಂದ ಯಾರು ಕೂಡ ನಿಂತಿರಲಿಲ್ಲ. ಅವರು ಯಾರು ಸ್ಪರ್ಧೆ ಮಾಡುವುದಿಲ್ಲ ಎಂದಾಯಿತು . ಅದಕ್ಕೆ ಯಾರ ಬೆಕಾದ್ರು ನಿಲ್ಲಿಬಹುದು ಅಂತ ಆಯಿತು.ಅದಕ್ಕೆ ಚುನಾವಣೆ ಗೆ ನಿಲ್ಲಬೇಕಾಯಿತು. ನಮ್ಮ ಪಕ್ಷದ ಹಿರಿಯ ನಾಯಕರೂ ಹೇಳಿದ್ರು.ನೀವು ಚುನಾವಣೆಗೆ ನಿಲ್ಲಬೇಕು ಅಂತ. ಈ ಹಿನ್ನಲೆ ಎಲ್ಲರ ಒತ್ತಾಯದ ಮೇರೇ ಗೆ ನಾನು ಚುನಾವಣೆ ಸ್ಪರ್ಧೆ ಮಾಡಿದ್ದೇನೆ. ಅವರೆಲ್ಲರ ಪರವಾಗಿ ನಾನು ಸ್ಪರ್ಧೆ ಮಾಡಿದಿದ್ದೇನೆ. ಎಲ್ಲ ನಾಯಕರೂ ಭಾರತ್ ಜೋಡೊದಲ್ಲಿ ಇದ್ದಾರೆ. ಅದಕ್ಕೆ ಇಲ್ಲಿಂದ ನಾನು ಅವರಿಗೆ ಮನವಿ ಮಾಡಿಕೊಳ್ಳತ್ತೇನೆ. ಇದನ್ನೂ ಓದಿ :- ಕಾಂಗ್ರೆಸ್ ನ ಪಾದಯಾತ್ರೆ ಕೇವಲ ಡಿಕೆಶಿ ಮತ್ತು ಸಿದ್ದರಾಮಯ್ಯನವರನ್ನು ಜೋಡಿಸುವ ಯಾತ್ರೆಯಾಗಿದೆ – ಅರುಣ್ ಸಿಂಗ್
ಎಲ್ಲರು ನನಗೆ ಬೆಂಬಲಿಸಿ ನಾನು ಕೆಳಮಟ್ಟದ ದಿಂದ ಬಂದವನು. ಕರ್ನಾಟಕ ದಿಂದ ಲೇ ನನ್ನ ರಾಜಕಾರಣ ಆರಂಭವಾಗಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಶಾಸಕರಾಗಿ, ಸಂಸದ ರಾಗಿ ಕಾರ್ಯನಿರ್ವಹಿಸಿದ್ದೇನೆ. ಈ ಹಿನ್ನಲೇ ಇವತ್ತು ಕೆಳಮಟ್ಟದ ಕಾರ್ಯಕರ್ತನಿಗೆ ಅವಕಾಶ ಬಂದಿದೆ. ಸಂವಿಧಾನ ಉಳಿಸಲು ಕಾಂಗ್ರೆಸ್ ಪಕ್ಷ ಬೇಕು. ನಾಬೊಬ್ಬನೆ ಅಲ್ಲ, ನಾವೆಲ್ಲರೂ ಗಟ್ಟಿಯಾಗಿ ನಿಲ್ಲಬೇಕು. ದುರ್ಬಲ ವರ್ಗದವರಿಗೆ ಇದ್ದ ಸರ್ಕಾರಿ ಕೆಲಸಗಳನ್ನು ಕಡಿಮೆಮಾಡಿದ್ದಾರೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಇವೆಲ್ಲವನ್ನು ಎದುರಿಸಬೇಕಿದೆ. ನಾನು ಹಿಂದಿನಿಂದಲೂ ಹೊರಾಟಗಳನ್ನು ಮಾಡುತ್ತಲೇ ಬಂದಿದ್ದೇನೆ. ನಾವು ಗಟ್ಟಿಯಾಗಿ ನಿಂತು ಸಂಘಟನೆಗೆ ಶಕ್ತಿ ಕೊಡಬೇಕು ಅಂತಾ. ನನ್ನನ್ನು ಬೆಂಬಲಿಸಲು ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ರು.
ಶಶಿ ತರೂರ್ ಗೆ ಯಾವ ಸಂದೇಶ ಕೊಡುತ್ತೀರಿ ಎಂಬ ವಿಚಾರ
ನಾನು ಅವರಿಗೆ ಏನೂ ಹೇಳುವುದಿಲ್ಲ. ಅದು ನಮ್ಮಮನೆಯಲ್ಲಿನ ವಿಚಾರ ಮನೆಯೊಳಗೆ ಚರ್ಚಿಸುತ್ತೇವೆ. ಇಲ್ಲಿ ಆ ಬಗ್ಗೆ ಏನೂ ಹೇಳುವುದಿಲ್ಲ ಎಂದು ಹೇಳಿದ್ರು. ಗಾಂಧಿ ಕುಟುಂಬದ ರಿಮೋಟ್ ಕಂಟ್ರೋಲ್ ಆಗುತ್ತಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರಿಗೆ ಮಾತನಾಡಲು ಬೇರೆ ವಿಷಯಗಳಿಲ್ಲ. ಹೀಗಾಗಿ ಏನೇನೊ ಮಾತನಾಡುತ್ತಾರೆ . ಆ ಕುಟುಂಬದವರು ಈ ದೇಶಕ್ಕೆ ಬಹಳಷ್ಟು ಕೊಡುಗೆಗಲನ್ನು ಕೊಟ್ಟಿದ್ದಾರೆ. ನಂತರ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರೆ. ಬಹುಮತ ಬಂದಾಗಲೂ ಸೋನಿಯಾ ಗಾಂಧಿ ( SONIYA GANDHI ) ಅಧಿಕಾರ ಅನುಭವಿಸಲಿಲ್ಲ. ಅವರ ಸಲಹೆಯಿಂದ ನಮ್ಮ ಪಕ್ಷಕ್ಕೆ ಒಳ್ಳೆಯದಾಗಯತ್ತದೆ. ನಿಮ್ಮ ಸಲಹೆಯನ್ನೂ ನೀವು ಕೊಡಬಹುದು. ಹೀಗಾಗಿ ಅವರ ಸಲಹೆ ಪಡೆಯುವುದು ನನ್ನ ಕರ್ತವ್ಯ. ನಾನು ಅವರ ಸಲಹೆಗಳನ್ನು ಪಡೆಯುತ್ತೇನೆ ಎಂದು ಹೇಳಿದ್ರು. ಎಐಸಿಸಿ ಅಧ್ಯಕ್ಷ ಆಗುವುದರಿಂದ ಕರ್ನಾಟಕಕ್ಕೆ ಆಗುವ ಪರಿಣಾಮ ಏನು ಎಂಬ ಪ್ರಶ್ನೆಗೆ ಉತ್ತರ ನೀಡಿದ ಅವರು, ಎಲ್ಲವನ್ನೂ ನಾನೇ ಮಾಡುತ್ತೇನೆ ಎಂಬುದಲ್ಲ. ಈಗಾಗಲೇ ನಮ್ಮ ನಾಯಕರು ಸದನದ ಒಳಗೆ ಹೊರಗೆ ಹೋರಾಟ ಮಾಡುತ್ತಿದ್ದಾರೆ. ನಾನು ಇವತ್ತು ಕಾಂಗ್ರೆಸ್ ಗೆ ಬಂದವನಲ್ಲ. 55 ವರ್ಷದಿಂದ ಇಲ್ಲಿದ್ದೇನೆ. ನಾನು ಪಕ್ಷಕ್ಕಾಗಿ ಇದ್ದೇನೆ, ನನಗಾಗಿ ಪಕ್ಷ ಇಲ್ಲ. ನನ್ನಂಥವರು ಬಹಳಷ್ಟು ಜನರು ಪಕ್ಷದಲ್ಲಿದ್ದಾರೆ ಎಂದು ಹೆಳಿದ್ದಾರೆ.
ಇದನ್ನೂ ಓದಿ :- ಹಿಂದೂಗಳು ಒಬ್ಬರನ್ನ ಮದ್ವೆಯಾಗಿ ಮೂವರನ್ನ ಇಟ್ಟುಕೊಳ್ತೀರಾ – ಹಿಂದೂಗಳ ಟೀಕಿಸಿದ್ದ ಶೌಕತ್ ಅಲಿ ವಿರುದ್ಧ ಕೇಸ್