ನಕಲಿ ಜಾತಿ ಪ್ರಮಾಣಪತ್ರ- ನಾನು ಗಲ್ಲಿಗೇರಲು ಸಿದ್ಧ ಎಂದ ಶಾಸಕ ರೇಣುಕಾಚಾರ್ಯ

ಜಾತ್ರೆಯಲ್ಲಿ ಮುಸ್ಲಿಮರಿಗೆ ವ್ಯಾಪಾರ ಮಾಡಲು ಅವಕಾಶ ನೀಡದಿರುವ ವಿಚಾರದ ಬಗ್ಗೆ ವಿಧಾನಸಭೆಯಲ್ಲಿ ಗಂಭೀರ ಚರ್ಚೆ ನಡೆಯುತ್ತಿರುವಾಗ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ (RENUKACHARYA) ಅವರ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರೋ ಆರೋಪವೂ ಪ್ರಸ್ತಾಪವಾಯಿತು.

ಶೂನ್ಯ ವೇಳೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿರುವಾಗ ‘ನೀವು ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದೀರಿ’ ಎಂದು ಯು.ಟಿ.ಖಾದರ್ (UT KHADER) ಆರೋಪಿಸಿದ್ರು. ಈ ವೇಳೆ ಶಾಸಕ ರೇಣುಕಾಚಾರ್ಯ ‘ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದರೆ ನಾನು ಗಲ್ಲಿಗೇರಲು ಸಿದ್ಧನಿದ್ದೇನೆ’ ಎಂದು ಹೇಳಿದ್ರು.

ಇದನ್ನು ಓದಿ :- ಸೋಮಣ್ಣ ಮಂತ್ರಿಯಾಗಿ ಹೇಗೆ ಮುಂದುವರೆಯುತ್ತಾರೆ? ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಪ್ರಶ್ನೆ


ನಾನು ಯಾವುದೇ ಸವಲತ್ತು ಪಡೆದಿಲ್ಲ. ಈ ಹಿಂದೆ ಗುಲ್ಬರ್ಗಾದಲ್ಲಿ ಉಮೇಶ್ ಜಾಧವ್ ಸ್ಪರ್ಧಿಸಿದಾಗ ನನ್ನ ಸಹೋದರ ಸಹ ಕಂಟೆಸ್ಟ್ ಮಾಡಿದ್ರು. ನನ್ನ ಸಹೋದರ ಮನೆಯಿಂದ ಇಬ್ಭಾಗ ಆಗಿ 25 ವರ್ಷ ಆಯ್ತು. ನಾನು ಹೊನ್ನಾಳ್ಳಿ ಕ್ಷೇತ್ರದ ಜಾತ್ಯಾತೀತ ವ್ಯಕ್ತಿ. ಎರಡು ಸಾವಿರ ಜಾತಿ ಮತಗಳು ಇಲ್ಲ. ಎಲ್ಲಾ ಸಮುದಾಯದವರು ನನ್ನ ಗೌರವಿಸುತ್ತಾರೆ. ನನ್ನನ್ನ ಪ್ರೀತಿ‌ ಮಾಡ್ತಾರೆ. ನನ್ನ ನಕಲಿ ಸರ್ಟಿಫಿಕೇಟ್ ಇದ್ದರೆ ಬಿಡುಗಡೆ ಮಾಡಬೇಕು ಎಂದು ತಿರುಗೇಟು ನೀಡಿದರು.


ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರಾದ ಪರಮೇಶ್ವರ್ ನಾಯ್ಕ್, ಭೀಮಾ ನಾಯ್ಕ್ ರೇಣುಕಾಚಾರ್ಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸದನದ ಬಾವಿಗಿಳಿದು ಧರಣಿ ನಡೆಸಿದರು. ಈ ಮಧ್ಯೆ ಸಚಿವ ಮಾಧುಸ್ವಾಮಿ ಈ ಬಗ್ಗೆ ಸದನದಲ್ಲಿ ಚರ್ಚೆಯಾಗಿದೆ. ಯಾರಾದರೂ ನಕಲಿ ಜಾತಿ ಪ್ರಮಾಣ ಪತ್ರ ಪಡೆದವರಿದ್ದರೆ ಅವರ ವಿರುದ್ಧ ದೂರು ದಾಖಲಿಸಲು ಅವಕಾಶ ಇದೆ. ಯಾರಾದರೂ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವುದು ಸಾಬೀತಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದನ್ನು ಓದಿ :-ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆ ಅರ್ಧಕ್ಕೆ ನಿಲ್ಲಿಸಿ ಅಗೌರವ


ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ ಎಸ್ ಸಿ ಸರ್ಟಿಫಿಕೇಟ್ (SC CERTIFICATE ) ವಿಚಾರದಲ್ಲಿ ಯಾವುದೆ ಕಾಗದ ಪತ್ರ ನನ್ನ ಬಳಿ ಇಲ್ಲ. ನಿನ್ನೆ ಚರ್ಚೆಯಾಗಿದೆ. ಸರ್ಕಾರದ ನಿಲುವು ಬಹಳ ಸ್ಪಷ್ಟವಾಗಿದೆ. ಸುಳ್ಳು ಸರ್ಟಿಫಿಕೇಟ್ ಆಗಿರುವುದಕ್ಕೆ ಶಿಕ್ಷೆ ಏನು ಆಗ್ಬೇಕು ಅಂತ ಕಾನೂನು ಇದೆ. ಇದು ತನಿಖೆಯಾಗ್ಲಿ, ದಾಖಲೆಗಳ ಮೇಲೆ ಸತ್ಯಾಸತ್ಯತೆ ಹೊರ ಬರಲಿ. ಸಾರ್ವಜನಿಕ ಜೀವನದಲ್ಲಿ ಅವರು ಇದ್ದಾರೆ. ಕಾನೂನು ಪ್ರಕಾರ ಮಾಡಿದ್ದಾರೋ ಇಲ್ವೋ ಅನ್ನೋ ಬಗ್ಗೆ ತನಿಖೆಯಾಗಲಿ. ಈ ಚರ್ಚೆ ಇಲ್ಲಿಗೆ ನಿಲ್ಲಿಸಿ ಎಂದು ಮುಖ್ಯಮಂತ್ರಿ (CM BOMMAI) ಬೊಮ್ಮಾಯಿ ಮನವಿ ಮಾಡಿದರು.

ಇದನ್ನು ಓದಿ :- ಜಾತ್ರೆ ರಥೋತ್ಸವಗಳಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ ನಿರ್ಬಂಧ ವಿಚಾರ – ಈ ಬಗ್ಗೆ ಮಾಹಿತಿಯೇ ಇಲ್ಲ ಎಂದ ಗೃಹ ಸಚಿವ ಅರಗ ಜ್ಞಾನೇಂದ್ರ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!