ಕೆಐಎಡಿಬಿ (KIADB) ಭೂ ಸ್ವಾಧೀನ ವಿರೋಧಿಸಿ ದೇವನಹಳ್ಳಿಯಲ್ಲಿ(Devnahalli) ರೈತರು ಸ್ವಯಂ ಬಂದ್ ಘೋಷಿಸಿದ್ದಾರೆ. ಭೂ ಸ್ವಾಧೀನ ವಿರೋಧಿಸಿ ರೈತ ಸಮಿತಿಯಿಂದ ಬಂದ್ ಕರೆ ನೀಡಲಾಗಿದೆ. ಚನ್ನರಾಯಪಟ್ಟಣದ (Chanarayapatana) ನಾಡ ಕಚೇರಿ ಮುಂದೆ 75 ದಿನಗಳಿಂದ ರೈತರು (Farmers) ಧರಣಿ ನಡೆಸುತ್ತಿದ್ದಾರೆ.
ಕೈಗಾರಿಕಾ ಪ್ರದೇಶಕ್ಕಾಗಿ ಕೃಷಿ ಭೂಮಿಯನ್ನು ಸರ್ಕಾರ (Government) ವಶಪಡಿಸಿಕೊಂಡಿದೆ. ಕೂಡಲೇ ಭೂ ಸ್ವಾಧೀನ ಕೈ ಬಿಡುವಂತೆ ರೈತರು ಒತ್ತಾಯಿಸಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದ ಬಳಿ ನೂರಾರು ರೈತರು ಜಮಾಯಿಸಿದ್ದಾರೆ. ಹಣ್ಣು, ತರಕಾರಿ, ಹೂ ರಸ್ತೆಗೆ ಚೆಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ . ಇದೇ ವೇಳೆ ಸಚಿವ ಮುರುಗೇಶ್ ನಿರಾಣಿ (Murugesh nirani) ರಾಜಿನಾಮೆಗೂ ರೈತರು ಒತ್ತಾಯಿಸಿದ್ದಾರೆ. ರೈತರ ಪ್ರತಿಭಟನೆ ತಡೆಯಲು ಪೊಲೀಸರು ಸಿದ್ಧತೆ ನಡೆಸಿದ್ರು. ರೈತರ ಪ್ರತಿಭಟನೆಯನ್ನು ವಿಫಲಗೊಳಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಇದೇ ವೇಳೆ ಪ್ರತಿಭಟನಾ ನಿರತರ ಮೇಲೆ ಪೊಲೀಸರು ದರ್ಪ ತೋರಿಸಿದ್ದಾರೆ. ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದ ರೈತರನ್ನ ಪೊಲೀಸರು ಎಳೆದಾಡಿದ್ದಾರೆ. ರೈತರು ಹಾಗೂ ಪೊಲೀಸರು ನಡುವೆ ನೂಕಾಟ ತಳ್ಳಾಟ ನಡೆದಿದೆ.ಆದ್ರೂ ಪಟ್ಟು ಬಿಡದ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ. ಇದನ್ನೂ ಓದಿ : – ಬೆಳ್ಳಂ ಬೆಳಿಗ್ಗೆ ಎಸಿಬಿ ಶಾಕ್ – ರಾಜ್ಯದ 80 ಕಡೆಗಳಲ್ಲಿ 21 ಅಧಿಕಾರಿಗಳ ನಿವಾಸ ಮೇಲೆ ಏಕಕಾಲಕ್ಕೆ ದಾಳಿ