ಬೆಂಗಳೂರು : ಕುಡಿದ ಮತ್ತಿನಲ್ಲಿ ಸಾಕಿ ಸಲಹಿದ ತಂದೆಯ ತಲೆಗೆ ಸೈಜ್ ಕಲ್ಲು ಎತ್ತಿ ಹಾಕಿ ಮಗನೇ ಕೊಲೆ ಮಾಡಿದ ಘೋರ ದುರಂತ ಬೆಂಗಳೂರಿನ ಮಾಗಡಿಯ ರಸ್ತೆಯ ಗೋಪಾಲಪುರದ 2 ನೇ ಕ್ರಾಸ್ ನಲ್ಲಿ ನಡೆದಿದೆ.
ಗಂಗರಾಜು (55) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಗ ಚೇತನ್ ತಂದೆ ರಾಜುವಿನ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಮಗನಿಗೆ ಮದುವೆ ಮಾಡುವುದಕ್ಕಾಗಿ ತಂದೆ ಓಡಾಡುತ್ತಿದ್ದ ವಿಚಾರ ತಿಳಿದು ಸಿಟ್ಟುಗೊಂಡ ಮಗ ಕುಡಿದ ಮತ್ತಿನಲ್ಲಿ ತಂದೆಯನ್ನು ಕ್ರೂರವಾಗಿ ನಿನ್ನೆ ರಾತ್ರಿ ಹತ್ಯೆ ಮಾಡಲಾಗಿದೆ ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಮಾಗಡಿರಸ್ತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.