ಗುಜರಾತ್ ( GUJURATH ) ಮಾದರಿಯಲ್ಲಿ ಕರ್ನಾಟಕದಲ್ಲೂ ಬಿಜೆಪಿ ಟಿಕೆಟ್ ಹಂಚಿಕೆ ಮಾಡ್ತಾರೆ ಅನ್ನೋ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ( BASANA GOWDA PATIL YATHNAL ) ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಾರಿ ಕರ್ನಾಟಕದಲ್ಲಿ ಬಹಳಷ್ಟು ಬದಲಾವಣೆ ಮಾಡುತ್ತಾರೆ. ಯಾರ ಮೇಲೆ ಆರೋಪಗಳಿವೆ ಅಂತಹವರಿಗೆ ಟಿಕೆಟ್ ನೀಡಲ್ಲ. ಅಪ್ಪ-ಮಕ್ಕಳು, ಅಣ್ಣತಮ್ಮಂದಿರಿಗೆ ಟಿಕೆಟ್ ಸಿಗಲ್ಲ ಎಂದು ಹೇಳಿದ್ದಾರೆ. ಈ ಸಾರಿ ಗುಜರಾತ್ ಮಾದರಿಯಲ್ಲೇ ಮಾಡಲಿದ್ದು, ಬಹಳಷ್ಟು ಬದಲಾವಣೆ ಮಾಡ್ತಾರೆ. ಒಂದೇ ಕುಟುಂಬದಲ್ಲಿ ಜಾಕೆಟ್ ಹೊಲಿಸಿಕೊಂಡು ಕುಳಿತಿದ್ದಾರೆ. ಅಪ್ಪ-ಮಕ್ಕಳು, ಅಣ್ಣ-ತಮ್ಮರಿಗೆ ಬಿಜೆಪಿ ಟಿಕೆಟ್ ಸಿಗುವುದಿಲ್ಲ. ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಬೀಳುತ್ತೆ. ಒಂದು ಕುಟುಂಬಕ್ಕೆ ಒಂದು ಟಿಕೆಟ್ ಸಿಗುತ್ತದೆ ಎಂದು ಹೇಳಿದರು. ಇದನ್ನು ಓದಿ : – ಸಂಸದರು ಯಾರೊಬ್ಬರ ಜಾತಿ, ಧರ್ಮ ಉಲ್ಲೇಖಿಸಿದರೆ ಕ್ರಮ- ಸ್ಪೀಕರ್ ಓಂ ಬಿರ್ಲಾ
ರಾಜ್ಯ ಬಿಜೆಪಿಗೆ ಸಮೀಕ್ಷೆಯಲ್ಲಿ ಹಿನ್ನಡೆ ಆಗ್ತಿದ್ಯಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಗುಜರಾತ್, ಯುಪಿಯಲ್ಲೂ ಹಾಗೆ ಹೇಳಿದ್ರೂ ಬಿಜೆಪಿ ಬಂತು. ಕರ್ನಾಟಕ ( KARANATAKA ) ದಲ್ಲಿ ನರೇಂದ್ರ ಮೋದಿಯವರು ಪ್ರವಾಸ ಮಾಡುತ್ತಾರೆ. ಯಡಿಯೂರಪ್ಪರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರನ್ನಾಗಿ ಮಾಡಿದ್ದಾರೆ. ಸಿಎಂ ಬೊಮ್ಮಾಯಿ & ಬಿಎಸ್ವೈ ಕ್ಷೇತ್ರ ಸಂಚಾರ ಮಾಡಬೇಕು ಎಂದು ಇದೇ ಮೊದಲ ಬಾರಿಗೆ ಬಿಎಸ್ವೈ ವಿಚಾರದಲ್ಲಿ ಸಾಫ್ಟ್ ಕಾರ್ನರ್ ತೋರಿಸಿದ್ರು.
ಇದನ್ನು ಓದಿ : – ರಾಯಚೂರಿನಲ್ಲಿ ಝಿಕಾ ವೈರಸ್ ಪತ್ತೆ…!