ಬಿಟ್ ಕಾಯಿನ್ ಹಗರಣದ ಬಗ್ಗೆ ಅಮೆರಿಕದ ಗುಪ್ತಚರ ಇಲಾಖೆಯಿಂದ ತನಿಖೆ ನಡೆಯುತ್ತಿದೆ. ಈ ಮೂಲಕ ರಾಜ್ಯದ ಬಿಟ್ ಕಾಯಿನ್ ಹಗರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಬಿಟ್ ಕಾಯಿನ್ ಹಗರಣದ ಬಗ್ಗೆ ಅಮೆರಿಕದ ಗುಪ್ತಚರ ಇಲಾಖೆ ತನಿಖೆ ನಡೆಸುತ್ತಿದೆ. ಎಪ್ ಬಿಐ ತನಿಖೆಗೆ ಬಂದಿರುವುದು ED, CBI ವೈಫಲ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಬಿಟ್ ಕಾಯಿನ್ ಹಗರಣ ಮುಚ್ಚಿಡಲು ಕಾರಣವೇನು, ಮೋದಿ ವ್ಯಾಲೆಟ್ ಗೆ ಬಿಟ್ ಕಾಯಿನ್ ವರ್ಗಾವಣೆಯಾಗಿದ್ಯಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದ್ದು ಅಂತರಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇದನ್ನು ಓದಿ :- Siddaramiah – ಬಾದಾಮಿ ಜನರಿಗೆ ಅಡ್ಡಗೋಡೆ ಮೇಲೆ ದೀಪ ಇಟ್ಟ ಸಿದ್ದರಾಮಯ್ಯ
ಇದು ಕಿಂಗ್ ಪಿನ್ ಶ್ರೀಕಿ ಹಾಗೂ ಅಧಿಕಾರದಲ್ಲಿರುವವರ ಹಗರಣವಾಗಿದೆ. ಅಧಿಕಾರದಲ್ಲಿರುವ ಆ ಅದೃಶ್ಯ ಕೈಗಳು ಯಾರದ್ದು ಎಂದು ಕೇಳಿದ್ದಾರೆ. ಭಾರತದ ನಿಜವಾದ ದೇಶದ್ರೋಹಿಗಳ ಬಗ್ಗೆ ಈಗ ಗೊತ್ತಾಗುತ್ತೆ ಅಂತ ಟೀಕಿಸಿದ್ದಾರೆ.
ಇದನ್ನು ಓದಿ :- ಹಿಂದಿ ಬಳಸಿ ಎಂಬ ಅಮಿತ್ ಶಾ ಹೇಳಿಕೆ ಸಾಂಸ್ಕೃತಿಕ ಭಯೋತ್ಪಾದನೆ –ಟ್ವಿಟರ್ ನಲ್ಲಿ ಕುಟುಕಿದ ಸಿದ್ದರಾಮಯ್ಯ