ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಬಿಎಂಟಿಸಿ (BMTC)ಚಾಲಕರೊಬ್ಬರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ರಾಜ್ಯಪಾಲರು ಸೇರಿದಂತೆ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಕಾರ್ಮಿಕ ಇಲಾಖೆ ಆಯುಕ್ತರಿಗೆ ದೂರಿನ ಪತ್ರ ಬರೆದಿದ್ದಾರೆ. ಸಂಸ್ಥೆಯಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ ದೂರು ನೀಡಿದರೆ , ದೂರು ನೀಡಿದ ಡ್ರೈವರ್ ಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಬಿಎಂಟಿಸಿ ಸಂಸ್ಥೆ ಸಾಕಷ್ಟು ನಷ್ಟದಲ್ಲಿದೆ. ಈ ನಷ್ಟಕ್ಕೆ ಮುಖ್ಯ ಕಾರಣ ಸಂಸ್ಥೆ ಅಧಿಕಾರಿಗಳು ಮತ್ತು ಆಡಳಿತ ಸಿಬ್ಬಂದಿ, ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಸಂಸ್ಥೆಯನ್ನ ಬಲಿಪಡಿಯುತ್ತಿದ್ದಾರೆ. ಆರ್ಟಿಐ ಅಡಿಯಲ್ಲಿ ಮಾಹಿತಿ ಪಡೆದು ಅಧಿಕಾರಿಗಳ ವಿರುದ್ಧ ಎಂಡಿಗೆ ದೂರು ನೀಡಿದರೂ ಯಾವುದೇ ಏನು ಪ್ರಯೋಜನವಾಗುತ್ತಿಲ್ಲ ಎಂದು ಚಾಲಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಎಂಡಿ ಜಿ. ಸತ್ಯವತಿಯವರು ಅಧಿಕಾರಿಗಳ ಪರವಾಗಿಯೇ ಕಾರ್ಯನಿರ್ವಹಿಸುತ್ತಿದ್ದಾರೆ, ನಾನು ದಾಖಲೆ ಸಮೇತ ದೂರು ನೀಡಿದರೂ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳದೇ ನನ್ನ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ, ಅಧಿಕಾರಿಗಳ ವಿರುದ್ಧ ಯಾಕೆ ದೂರು ಕೊಟ್ಟಿದ್ದೀರಾ ಎಂದು ಕೇಳುತ್ತಿದ್ದಾರೆ ಎಂದಿದ್ದಾರೆ.
ಸೂಚನಾ ಪತ್ರವನ್ನು ನೀಡಿ ನನ್ನನ್ನು ಬೆದರಿಸುವ ತಂತ್ರಗಾರಿಕೆ ಮಾಡುತ್ತಿದ್ದಾರೆ. ಆದ್ದರಿಂದ ಮೊದಲು ಎಂಡಿ ಸತ್ಯವತಿಯನ್ನ ವಿಚಾರಣೆ ಪೂರ್ವ ಅಮಾನತು ಮಾಡಿ, ನಂತರ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಪತ್ರದಲ್ಲಿ ಬರೆದಿದ್ದಾರೆ. ಇದನ್ನು ಓದಿ :- ಶ್ರೀನಗರದ ಲಾಲ್ ಚೌಕ್ ನಲ್ಲಿ ಭಾರತದ ಬಾವುಟ ಹಾರಿಸಲಿರುವ ರಾಗಾ..!
ಆಗಿದ್ರೆ ಬಿಎಂಟಿಸಿ ಚಾಲಕ ಬರೆದಿರುವ ದೂರಿನಲ್ಲಿ ಏನಿದೆ?
1. ಸಿ.ಎ. ಅಜಯ್ ಬಿಎಂಟಿಸಿಯಲ್ಲಿ ಎಂಡಿ ಆಪ್ತಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಿಎಂಟಿಸಿ ನಿಯಮದ ಪ್ರಕಾರ ಒಂದು ಶಾಖೆಯಲ್ಲಿ ಯಾವ ಅಧಿಕಾರಿಯು 3 ವರ್ಷಕ್ಕಿಂದ ಮೇಲ್ಪಟ್ಟು ಕೆಲದ ನಿರ್ವಹಿಸುವಂತಿಲ್ಲ
ಆದರೆ ಬಿಎಂಟಿಸಿ ನಿಯಮವನ್ನ ಗಾಳಿಗೆ ತೂರಿ ಸಿ.ಎ.ಅಜಯ್ ಒಂದೇ ಕಚೇರಿಯಲ್ಲಿ 1997 ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ *ಅಜಯ್ ವಿರುದ್ದ ದೂರು ನೀಡಿದ್ರು ಎಂಡಿ ಕ್ರಮ ತೆಗೆದುಕೊಂಡಿಲ್ಲ
2. ಕಾರ್ಮಿಕ ಕಲ್ಯಾಣಾದಿಕಾರಿಗಳ ಶಾಖೆಯಲ್ಲಿ ಬಸವರಾಜ್ ಕಳೆದ 26 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ *ಸಂಸ್ಥೆ ನಿಯಮದ ಪ್ರಕಾರ ನೌಕರರು ಹೊರಗಿನ ಸಂಘ ಸಂಸ್ಥೆಗಳ, ಖಾಸಗಿ ಬ್ಯಾಂಕ್ ಗಳ, ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. *ಆದಾಗ್ಯೂ ಸ್ಪರ್ಧಿಸಬೇಕಂದ್ರೆ ಸಂಸ್ಥೆಯ ಅನುಮತಿ ಪತ್ರ ಕಡ್ಡಾಯ * ಆದ್ರೆ ಬಸವರಾಜು ರವರು ಸಂಸ್ಥೆಯಿಂದ ಅನುಮತಿ ಪತ್ರವನ್ನು ಪಡೆಯದೇ ಕೋ- ಆಪರೇಟಿವ್ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧಿಸಿ ನಿರ್ದೇಶಕರಾಗಿದ್ದಾರೆ * ವಿಚಾರವಾಗಿ ದಾಖಲೆ ಸಹಿತ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ನೀಡಿದ್ರು ಯಾವುದೇ ಕ್ರಮ ಕೈಗೊಂಡಿಲ್ಲ.
3. ಸಂಸ್ಥೆಯ ನಿಯಮದ ಪ್ರಕಾರ ಚಾಲಕ ಬೋಧಕರಾಗಿ ಕರ್ತವ್ಯ ನಿರ್ವಹಿಸಲು ಬೆಳ್ಳಿ ಮತ್ತು ಚಿನ್ನದ ಪದಕ ಪಡೆದಿರಬೇಕು ಉತ್ತಮ ಚಾಲಕರಾಗಿಬೇಕು * ಆದರ ಶ್ರೀ ಬಸವನಗೌಡ ಚಾಲಕರು ಬಿ.ಸಂಖ್ಯೆ:16684 ರವರು ಸಂಸ್ಥೆಗೆ ಸೇರಿದ ಕೇವಲ 8 ತಿಂಗಳಲ್ಲಿ ಚಾಲಕ ಬೋಧಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ * ಈ ವಿಷಯವಾಗಿ ದಾಖಲೆ ಸಹಿತ ದೂರು ನೀಡಿದ್ರು ಕ್ರಮ ಕೈಗೊಂಡಿಲ್ಲ
4. ಲಘು ವಾಹನ ತರಬೇತಿ ನೀಡಲು ಸಾರಿಗೆ ಸಂಸ್ಥೆಯು ವಡ್ಡರಹಳ್ಳಿಯಲ್ಲಿ ತರಬೇತಿ ಕೇಂದ್ರವಿದೆ
* ಇಲ್ಲಿ ತರಬೇತಿ ನೀಡುವ ವಾಹಗಳಿಗೆ ತರಬೇತಿ ವಾಹನ ಎಂದು ನೋಂದಾಯಿಸಲಾಗಿರುತ್ತದೆ * ಈ ವಾಹನಕ್ಕೆ ಡಬ್ಬಲ್ ಕ್ಲಚ್ ಮತ್ತು ಡಬ್ಬಲ್ ಬ್ರೇಕ್ ಇರುತ್ತೆ * ಈ ವಾಹನವನ್ನು ಕೇವಲ ಚಾಲಕರ ತರಬೇತಿಗಾಗಿ ಮಾತ್ರ ಉಪಯೋಗಿಸಬೇಕು *ಆದ್ರೆ ವಾಹನ ಸಂಖ್ಯೆ -3914 , ಟೈರ್ ಬದಲಾವಣೆಗಾಗಿ ತಂದು ದುರುಪಯೋಗ ಮಾಡಿಕೊಂಡಿದ್ದಾರೆ
* 5 ತಿಂಗಳ ಕಾಲ ಕಚೇರಿ ವಾಹನವನ್ನ ದುರುಪಯೋಗ ಮಾಡಿಕೊಂಡಿದ್ದರು ಚಾಲಕನ ವಿರುದ್ಧ ಸೂಕ್ತ ದಾಖಲೆಗಳ ಸಹಿತ ದೂರು ನೀಡಿದರು ಸಹ ಅವರು ಚಾಲಕನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.
ಇದನ್ನು ಓದಿ :- ಭಾರತದಲ್ಲಿ ಕ್ಷತ್ರಿಯ ಸಮುದಾಯ ಇಲ್ಲದಿದ್ದಿದ್ರೆ ದೇಶದಲ್ಲಿ ಒಗ್ಗಟ್ಟು ಇರುತ್ತಿರಲಿಲ್ಲ – ಸಿಎಂ ಬೊಮ್ಮಾಯಿ