ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ(Japan ex PM Shinzo Abe) ಮೇಲೆ ಗುಂಡಿನ ದಾಳಿ ನಡೆದಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ. ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿದೆ. ಶಿಂಜೊ ಅಬೆಯವರಿಗೆ ದಾಳಿಯಲ್ಲಿ ಭೀಕರವಾಗಿ ಗಾಯಗಳಾಗಿದೆ.
ಭಾನುವಾರ ಜಪಾನ್ ಸಂಸತ್ತಿನ ಮೇಲ್ಮನೆಗೆ ಚುನಾವಣೆ ನಡೆಯಲಿದ್ದು ಶಿಂಜೊ ಅಬೆಯವರು ಇಂದು ಬೆಳಗ್ಗೆ ಪೂರ್ವ ಜಪಾನ್ ನ ನಾರಾ ನಗರದಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ ನಿರತರಾಗಿದ್ದರು.
ಆಗ ದೊಡ್ಡ ಸ್ಫೋಟವೊಂದು ಕೇಳಿಬರುತ್ತದೆ. ನಂತರ ಗಾಳಿಯಲ್ಲಿ ದಟ್ಟ ಹೊಗೆ ಆವರಿಸುತ್ತದೆ. ನಂತರ ಓರ್ವ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಹಿಡಿದು ಆಚೆಗೆ ಕರೆತರುತ್ತಾರೆ ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.
ಅಬೆಯವರು ಭಾಷಣ ಮಾಡುತ್ತಿರುತ್ತಾರೆ, ಆಗ ಒಬ್ಬ ವ್ಯಕ್ತಿ ಹಿಂದಿನಿಂದ ಬಂದು ಗುಂಡು ಹಾರಿಸುತ್ತಾರೆ. ಮೊದಲಿಗೆ ನೆರೆದಿದ್ದವರು ಆಟದ ಬಂದೂಕು ಎಂದೇ ಭಾವಿಸಿದ್ದರು. ಅಬೆಯವರಿಗೆ ಮೊದಲು ಹಾರಿಸಿದ ಗುಂಡಿನಿಂದ ಏನಾಗಿರಲಿಲ್ಲ. ನಂತರ ಎರಡನೇ ದಾಳಿ ದೊಡ್ಡ ಮಟ್ಟದ್ದಾಗಿತ್ತು. 67 ವರ್ಷದ ಅಬೆ ಸ್ಥಳದಲ್ಲಿಯೇ ರಕ್ತಸ್ರಾವವಾಗಿ ಕುಸಿದುಬಿದ್ದರು. ಅವರ ಕತ್ತಿಗೆ ತೀವ್ರ ಏಟಾಗಿದೆ ಎಂದು ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಸ್ಪಷ್ಟಪಡಿಸಿದೆ. ಇದನ್ನೂ ಓದಿ : – ಜಪಾನ್ ನ ಮಾಜಿ ಪ್ರಧಾನಿ ಶಿಂಜೊ ಅಬೆ ಮೇಲೆ ಗುಂಡಿನ ದಾಳಿ
ನಾರಾ ಮೆಡಿಕಲ್ ಯೂನಿವರ್ಸಿಟಿ ಆಸ್ಪತ್ರೆಗೆ ಅಬೆಯವರನ್ನು ದಾಖಲಿಸಲಾಗಿದ್ದು ಸದ್ಯ ಅವರ ದೇಹಸ್ಥಿತಿ ಗಂಭೀರವಾಗಿದೆ. ಶಂಕಿತ ಗುಂಡಿನ ದಾಳಿಕೋರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಪಾನ್‌ನ ದೀರ್ಘಾವಧಿಯ ಪ್ರಧಾನ ಮಂತ್ರಿ ಅಬೆ, 2006 ರಲ್ಲಿ ಒಂದು ವರ್ಷ ಮತ್ತು 2012 ರಿಂದ 2020 ರವರೆಗೆ ಅಧಿಕಾರದಲ್ಲಿದ್ದರು, ನಂತರ ಅನಾರೋಗ್ಯ ಹಿನ್ನೆಲೆಯಲ್ಲಿ ಪ್ರಧಾನಿ ಸ್ಥಾನದಿಂದ ಕೆಳಗಿಳಿದಿದ್ದರು.
ವಿಶ್ವನಾಯಕರು ಆಘಾತ, ಕಂಬನಿ: ಶಿಂಜೊ ಅಬೆಯವರ ಮೇಲೆ ಹಠಾತ್ ನಡೆದ ಗುಂಡಿನ ದಾಳಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವನಾಯಕರು ಕಂಬನಿ ಮಿಡಿದಿದ್ದಾರೆ. ನನ್ನ ಸ್ನೇಹಿತ ಶಿಂಜೊ ಅಬೆಯವರ ಮೇಲೆ ನಡೆದ ಗುಂಡಿನ ದಾಳಿಯ ಬಗ್ಗೆ ಕೇಳಿ ತೀವ್ರ ಆಘಾತವಾಗಿದೆ. ಈ ಸಂದರ್ಭದಲ್ಲಿ ಅವರ ಕುಟುಂಬಸ್ಥರು, ಜಪಾನ್ ಜನತೆಗೆ ಪರವಾಗಿ ಪ್ರಾರ್ಥನೆ ಮಾಡುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಕೂಡ ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ : – ಬೋರಿಸ್ ಜಾನ್ಸನ್ ರಾಜೀನಾಮೆ – ಅಂಗ್ಲರನ್ನ ಆಳ್ತಾರಾ ಭಾರತ ಮೂಲದ ರಿಷಿ ಸುನಾಕ್ ?