ಕೈ ಹಿಡಿದ ಮಾಜಿ ಶಾಸಕ YSV ದತ್ತಾ,ಶಾಸಕ ಎಚ್ ನಾಗೇಶ್

ನಂತರ ಮಾತನಾಡಿದ ವೈ.ಎಸ್.ವಿ ದತ್ತಾ , ಇದು ಮಾತನಾಡುವ ಸಮಯ ಅಲ್ಲ, ಕೆಲಸಮಾಡೋ ಸಮಯ. ನಾನು 50 ವರ್ಷದಿಂದ ಒಂದು ಪರಿವಾರ, ಪಕ್ಷದಿಂದ ಬಂದವನು.

ನಂತರ ಮಾತನಾಡಿದ ವೈ.ಎಸ್.ವಿ ದತ್ತಾ (YSV.Datta) , ಇದು ಮಾತನಾಡುವ ಸಮಯ ಅಲ್ಲ, ಕೆಲಸಮಾಡೋ ಸಮಯ. ನಾನು 50 ವರ್ಷದಿಂದ ಒಂದು ಪರಿವಾರ, ಪಕ್ಷದಿಂದ ಬಂದವನು. ನಾನು ಆ ಪಕ್ಷದಿಂದ ಹೊರಬಂದಿದ್ದೇನೆ ಅಂದ್ರೆ ಐತಿಹಾಸಿಕ ದರ್ದು, ಅನಿವಾರ್ಯತೆ ನನ್ನನ್ನು ಕ್ಷೇತ್ರವನ್ನು ರಾಜ್ಯವನ್ನು ಕಾಡ್ತಿದೆ. ನಮ್ಮ ಶತ್ರು ಯಾರು ಎಂಬುದು ಈಗ ಅರ್ಥ ಆಗಿದೆ.

ಸಂವಿಧಾನವನ್ನು ಬುಡಮೇಲು ಮಾಡ್ತಿರುವ ಜಾತ್ಯಾತೀತ ಪಕ್ಷ ಅದರ ಜೊತೆ ಇರುವ ಸಂಘಟನೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡ್ತಿವೆ. ಸಂವಿಧಾನ, ಜಾತ್ಯಾತೀತ ಪಕ್ಷದ ಜೊತೆ ಇರುವ ಕಾಂಗ್ರೆಸ್ (Congress)  ಪಕ್ಷಕ್ಕೆ ಬಂದಿದ್ದೇನೆ . ಯಾವುದೇ ಶರತ್ತಿಲ್ಲದೆ ಆಸೆ ಇಲ್ಲದೆ ಬಂದಿದ್ದೇನೆ. ನಾನು ಅಂದಿನಿಂದಲೂ ಎಡಪಂಥೀಯ ವಾದ ಬೆಂಬಲಿಸುವನು. ನನ್ನ ಸಿದ್ದಾಂತಕ್ಕೆ ಅನುಗುಣವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ. ಕಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಗೆಲುವು ತಂದುಕೊಡುವ ಪ್ರಾಮಾಣಿಕ ಪ್ರಯತ್ನ ಮಾಡ್ತೆನೆ. ನನಗೆ 70 ವರ್ಷ ಆದ್ರು ಶಕ್ತಿ ಇದೆ, ತಾಕತ್ತಿದೆ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಹೇಳಿದ್ರು. ಇದನ್ನು ಓದಿ :- ಮುಂದಿನ ಬಜೆಟ್ ನಲ್ಲಿ ಮಹಿಳೆಯರಿಗೆ ಬಂಪರ್ ಕೊಡುಗೆ ನೀಡುವ ಸೂಚನೆ ನೀಡಿದ ಸಿಎಂ ಬೊಮ್ಮಾಯಿ ….!

ED rejects DK Shivkumar's request for extending date of appearance | Bengaluru - Hindustan Times

ಡಿ.ಕೆ ಶಿವಕುಮಾರ್ (DK.Shivakumar)  ಮಾತನಾಡಿ, ಇಂದು ಮಕರ ಸಂಕ್ರಮಣ ರೈತರ ಬದುಕು ಶುಭಾರಂಭ ಆಗುವ ಕ್ಷಣ. ಇಂತಹ ಪವಿತ್ರ ದಿನದಂದು ಪಕ್ಷ ಸೇರ್ಪಡೆ ಆಗಿದ್ದಾರೆ. ಆಡಳಿತ ಪಕ್ಷದ ವಿರುದ್ಧ ದಿನೇ ದಿನೇ ವಿಶ್ವಾಸ ಕಡಿಮೆ ಆಗುತ್ತಿದೆ. ಜನರಿಗೆ ಉತ್ತಮ ಆಡಳಿತ ಕೊಡುವುದಕ್ಕೆ ಆಗುತ್ತಿಲ್ಲ ಎಂದು ಬಹಳ ಜನ ನಮ್ಮ ಪಕ್ಷ ಸೇರ್ಪಡೆ ಆಗುತ್ತಿದ್ದಾರೆ. ಪ್ರಮುಖ ಇಬ್ಬರು ನಾಯಕರಾದ ವೈಎಸ್ವಿ ದತ್ತಾ, ಮಾಜಿ ಸಚಿವರು ಹಾಲಿ ಶಾಸಕರು ಆದ ಎಚ್. ನಾಗೇಶ್ ಅವರು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ . ಬಿಜೆಪಿ (BJP) ಕೊಟ್ಟ ಅಧಿಕಾರವನ್ನ ತ್ಯಾಗ ಮಾಡಿ ನಾಗೇಶ್ (Nagesh ) ಸೇರ್ಪಡೆ ಆಗಲು ಬಂದಿದ್ದಾರೆ. ಕಾಂಗ್ರೆಸ್ ಪಕ್ಷದ ಪರವಾಗಿ ನಾಗೇಶ್ ಅವರಿಗೆ ಸ್ವಾಗತ ಬಯಸುತ್ತೇನೆ. ವೈಎಸ್ವಿ ದತ್ತಾ ಅವರನ್ನ 48 ವರ್ಷದಿಂದ ಬಲ್ಲೆ. ದತ್ತಾ ಅವರು ಪಾಠ ಹೇಳುವಾಗ ನ್ಯಾಷನಲ್ ಕಾಲೇಜಿ (National college) ನಲ್ಲಿ ನಾನು ಸ್ಟೂಡೆಂಟ್ ಆಗಿದ್ದೆ. ಕಡೂರು ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದವರು. ಜೆಡಿಎಸ್ ನಲ್ಲಿ ಹಲವು ಹುದ್ದೆಗಳಿದ್ದವರು. ಅಲ್ಲಿ ನಮಗೆ ಭವಿಷ್ಯ ಇಲ್ಲ ಎಂಬುದನ್ನ ಗಮನದಲ್ಲಿಟ್ಟುಕೊಂಡು ಪಕ್ಷಕ್ಕೆ ಬಂದಿದ್ದು, ಅವರಿಗೆ ಸ್ವಾಗತ ಬಯಸುತ್ತೇನೆ. ಮೈಸೂರಿನ ಮೂಡ ಅಧ್ಯಕ್ಷರಾಗಿದ್ದವರು ಮೋಹನ್ ಹಿಂದೆ ಪಕ್ಷದಲ್ಲಿ ಕೆಲಸ ಮಾಡಿದ್ದವರು. ಬಿಜೆಪಿ ತೊರೆದು ಪಕ್ಷ ಸೇರ್ಪಡೆ ಆಗಿದ್ದಾರೆ. ಅವರಿಗೆ ಸ್ವಾಗತ ಕೋರುತ್ತೇನೆ ಎಂದರು. ಇದು ಆರಂಭ ಅಷ್ಟೇ ಇನ್ನು ಮುಂದೆ ವಾರಕ್ಕೊಮ್ಮೆ ಪಕ್ಷ ಸೇರ್ಪಡೆ ಕಾರ್ಯಕ್ರಮ ಇರಲಿದೆ. ಮುಂದೆ ಪ್ರವಾಸಕ್ಕೆ ಹೋದಾಗ ಅಲ್ಲಿಯೂ ಸೇರ್ಪಡೆ ಆಗುವ ಕಾರ್ಯಕ್ರಮಗಳು ಇವೆ. ಮತ್ತಷ್ಟು ಜನ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ ಎಂದು ತಿಳಿಸಿದ್ರು.

Siddaramaiah: Latest news and Top stories of siddaramaiah | Photos & Videos

ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಮಾತನಾಡಿ, ಹಾಲಿ ಮತ್ತು ಮಾಜಿ ಶಾಸಕರನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ. ಕಾಂಗ್ರೆಸ್ ಇಡೀ ದೇಶದಲ್ಲಿ ಹೆಚ್ಚು ಕಾಲ ಇರುವಂತಹ ಪಕ್ಷ. ಸ್ವತಂತ್ರ ಕ್ಕಾಗಿ ಹೋರಾಡಿದ ಪಕ್ಷ. ಈಗಿರುವ ಪಕ್ಷಗಳು ಸ್ವತಂತ್ರ ಬಂದ ಮೇಲೆ ಹುಟ್ಟಿಕೊಂಡಿದ್ದು. ಜನತಾ ಪಾರ್ಟಿ 1950 ರಲ್ಲಿ ಹುಟ್ಟಿಕೊಂಡಿದ್ದು, ನಾವೆಲ್ಲ ದತ್ತಾ ಎಲ್ರು ಜನತಾ ಪಾರ್ಟಿ ಲಿ ಇದ್ವಿ. ದತ್ತಾ ಪ್ರತಿಭವಂತ ವ್ಯಕ್ತಿ. ದೇಶ ರಾಜಕೀಯ (Politics)  ರಾಜಕಾರಣವನ್ನು ಅರ್ಥ ಮಾಡಿಕೊಂಡಿದ್ದಾರೆ. ಸಾಮಾಜಿಕ ಪರವಾಗಿ ಇರೋ ಏಕೈಕ ಪಕ್ಷ ಅಂದ್ರೆ ಅದು ಕಾಂಗ್ರೆಸ್ ಮಾತ್ರ. ದತ್ತಾ ಪಕ್ಷ ಸೇರ್ಪಡೆ ಆಗಿರುವುದು ಕಡೂರಿಗೆ ಮಾತ್ರ ಅಲ್ಲ ಕಾಂಗ್ರೆಸ್ ಗೂ ಬಲ ಬಂದಿದೆ. ಕಾಂಗ್ರೆಸ್ ಪಕ್ಷ ಮಾತ್ರ ದಲಿತರಿಗೆ ರಕ್ಷಣೆ ಕೊಡೋಕೆ ಸಾಧ್ಯ. ಕಾಂಗ್ರೆಸ್ ಪಕ್ಷ ಮಾತ್ರ ಅಲ್ಪ ಸಂಖ್ಯೆತರ ರಕ್ಷಣೆ ಸಾಧ್ಯ. ಕಾಂಗ್ರೆಸ್ ಪಕ್ಷ ದಿಂದ ಮಾತ್ರ ಹಿಂದುಳಿದವರ ರಕ್ಷಣೆ ಸಾಧ್ಯ ಎಂದು ಹೇಳಿದ್ರು.

ಇದನ್ನು ಓದಿ :- ಹಿಂದುಳಿದ ವರ್ಗಗಳ ಆಯೋಗದ ವರದಿ ಬಳಿಕ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ – ಸಿಎಂ ಬೊಮ್ಮಾಯಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!