State News

ಇವತ್ತಿಂದ ಈಕೆ ನನ್ನ ಅರ್ಧಾಂಗಿ –ಮಹಿಳೆಗೆ ಮದುವೆ ಅಭಯಕೊಟ್ಟ ದೈವನರ್ತಕ..!

ಅಂಕೋಲಕ್ಕೆ ತನ್ನ ವೈಯಕ್ತಿಕ ಸಮಸ್ಯೆ ನಿವಾರಣೆಗಾಗಿ ಕಾಲಭೈರವ ದೇವರ ಬಳಿ ಬಂದಿದ್ದ ಬೆಳಗಾವಿ ಮೂಲದ ಮಹಿಳೆಗೆ ಮದುವೆಯಾಗುವುದಾಗಿ ದೈವ ನರ್ತಕ ಅಭಯವಿತ್ತ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಅಂಬಾರಕೊಡ್ಲೆನಲ್ಲಿ ನಡೆದಿದೆ.

ಅಂಕೋಲ (Ankola) ಕ್ಕೆ ತನ್ನ ವೈಯಕ್ತಿಕ ಸಮಸ್ಯೆ ನಿವಾರಣೆಗಾಗಿ ಕಾಲಭೈರವ ದೇವರ ಬಳಿ ಬಂದಿದ್ದ ಬೆಳಗಾವಿ (Belagavi)  ಮೂಲದ ಮಹಿಳೆಗೆ ಮದುವೆಯಾಗುವುದಾಗಿ ದೈವ ನರ್ತಕ ಅಭಯವಿತ್ತ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಅಂಬಾರಕೊಡ್ಲೆನಲ್ಲಿ ನಡೆದಿದೆ.

ಬೆಳಗಾವಿಯ ಮಹಿಳೆಯೊಬ್ಬರು ಕೌಟುಂಬಿಕ ಸಮಸ್ಯೆ (Family problem) ಹೇಳಿಕೊಂಡು ಅಂಕೋಲದಲ್ಲಿರುವ ಕಾಲಭೈರವ ದೇವರ ಸನ್ನಿದಾನಕ್ಕೆ ಬಂದಿದ್ದಾರೆ. ತಮ್ಮ ಸಮಸ್ಯೆಯನ್ನು ದೈವ ನರ್ತಕ ನ ಬಳಿ ಹೇಳಿಕೊಂಡಿದ್ದಾರೆ. ಈ ವೇಳೆ ಅವನ ಅರ್ಧಾಂಗಿ (Wife)  ಅವನಿಗೆ ಕೈಕೊಟ್ಟು 10 ವರ್ಷವಾಯಿತು. ಆದ್ರೂ ಒಬ್ಬಂಟಿಯಾಗಿ ಈ ಸ್ಥಳದಲ್ಲಿ ಸಾಧನೆ ಮಾಡುತ್ತಿದ್ದಾನೆ. ಆದ್ರೆ ನಾನು ಮಹಾ ಕಾಳಿಯಾಗಿ, ದುರ್ಗಿಯಾಗಿ ಒಂದು ನಿರ್ಧಾರ ಮಾಡುತ್ತಿದ್ದೇನೆ. ಇದು ಸಂಪೂರ್ಣವಾಗಿ ಬಹಿರಂಗ ಪಡಿಸುತ್ತಿದ್ದೇನೆ. ಇವತ್ತಿನಿಂದ ಈ ಬಾಲಕಿ ಈ ಬಾಲಕನ ಅರ್ಧಾಂಗಿಯಾಗಿ ಸಂಪೂರ್ಣ ಅರ್ಧನಾರೇಶ್ವರಿಯಾಗಿ ಈ ಬಾಲಕನ ಹೃದಯದಲ್ಲಿ ಮನೆ ಮಾಡಿರುತ್ತಾಳೆ. ಇದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಈ ಬಾಲಕಿಯೇ ಈ ಬಾಲಕನ ಮುಂದಿನ ಮಡದಿ. ಕೊನೆಯ ಉಸಿರು ಇರುವವರೆಗೆ ಶೀಲವಂತವಳಾಗಿ ಯಾವುದೇ ಹೀನವಾಗದ ರೀತಿಯಲ್ಲಿ ಮರ್ಯಾದೆ ಮುಖಾಂತರವಾಗಿ ಈ ಬಾಲಕನ ಒಟ್ಟಿಗೆ ಬೆಳೆಯುತ್ತಾಳೆ. ಇಂದು ಇಲ್ಲವೇ ನಾಳೆ ಧರ್ಮಸ್ಥಳ (Dhamastala) , ಮಂತ್ರಾಲಯ, ಈ ಮೂರು ಸ್ಥಳದಲ್ಲಿ ಒಂದು ಸ್ಥಳದಲ್ಲಿ ಈ ಬಾಲಕಿಗೆ ತಾಳಿ ಬೀಳುತ್ತದೆ ಎಂದು ನುಡಿದಿದ್ದಾನೆ. ಇದನ್ನುಓದಿ :-  10 ದಿನಕ್ಕೆ 725 ಕೋಟಿ ರೂಪಾಯಿ ಬಾಚಿದ ಪಠಾಣ್’

ಈ ದೈವನರ್ತಕನ ಅಭಯದ ಮಾತಿನ ವೀಡಿಯೋ ತುಣುಕು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಈ ನಡುವೆ ದೈವ ನರ್ತಕ ಪಾತ್ರಿಗೆ ಮದುವೆಯಾಗಿ ಹೆಂಡತಿ ಬಿಟ್ಟು ಹೋಗಿದ್ದಾಳೆ. ವಿವಾಹಿತ ಮಹಿಳೆಗೂ ಗಂಡ ಬಿಟ್ಟಿದ್ದಾನೆ. ಈ ಮಾಹಿತಿ ಈತನಿಗೆ ಮೊದಲೇ ತಿಳಿದಿತ್ತು. ಹಾಗಾಗಿ ಈತ ಮೋಸ ಮಾಡಲು ಮುಂದಾಗಿದ್ದಾನೆ ಎಂಬ ಆರೋಪಗಳು ಸ್ಥಳೀಯರಿಂದ ಕೇಳಿ ಬರುತ್ತಿದೆ.

ಇದನ್ನುಓದಿ :- ಕಾಂಗ್ರೆಸ್ ನ ಬಸ್ ಯಾತ್ರೆ ಮಧ್ಯದಲ್ಲೇ ಪಂಚರ್ ಆಗುತ್ತೆ – ಯಡಿಯೂರಪ್ಪ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!